ಸುದ್ದಿಗಳು

‘ತ್ರಯಂಬಕಂ’ ಸಿನಿಮಾ ಸೆಟ್ನಲ್ಲಿ ಪುನೀತ್

ರಾಘವೇಂದ್ರ ರಾಜ್‌ಕುಮಾರ್ ಅಭಿನಯಿಸಿರುವ ಸಿನಿಮಾವೇ 'ತ್ರಯಂಬಕಂ'

ಬೆಂಗಳೂರು,ನ.21: ದಯಾಳ್ ಪದ್ಮನಾಭ್ ನಿರ್ದೇಶನದ ‘ತ್ರಯಂಬಕಂ’ ಸಿನಿಮಾ ಸೆಟ್‌ಗೆ ಇದೀಗ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದಾರೆ.

ಅಣ್ಣನನ್ನು ಭೇಟಿ ಮಾಡಿದ ಅಪ್ಪು

ರಾಘವೇಂದ್ರ ರಾಜ್‌ಕುಮಾರ್ ಅಭಿನಯಿಸಿರುವ ಸಿನಿಮಾವೇ ‘ತ್ರಯಂಬಕಂ’. ಈಗಾಗಲೇ ಬೆಂಗಳೂರಿನ ಬನಶಂಕರಿಯ ಧವಳಗಿರಿ ಮಂಜುನಾಥ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಸಿನಿಮಾ ಮುಹೂರ್ತ ಕಂಡಿತ್ತು. ರಾಕ್‌ಸ್ಟಾರ್ ರೋಹಿತ್ ಹಾಗೂ ಅನುಪಮ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಮುಖ್ಯ ಆಕರ್ಷಣೆ. ಇದೀಗ ಈ ಸಿನಿಮಾ ಸೆಟ್‌ಗೆ ನಟ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದಾರೆ.

‘ತ್ರಯಂಬಕಂ’ ಸಿನಿಮಾ ಸೆಟ್ನಲ್ಲಿ ಅಪ್ಪು

ಹೌದು, ಇಂದು ಚಿತ್ರೀಕರಣ ನಡೆಯುವ ಸ್ಥಳಕ್ಕೆ ನಟ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದು, ದಯಾಳ್ ಪದ್ಮನಾಭ್ ಹಾಗೂ ಅನುಪಮ ಜೊತೆಗೆ ಫೋಟೋ ಒಂದನ್ನು ತೆಗೆಸಿಕೊಂಡಿದ್ದಾರೆ. ಇನ್ನು ಅಣ್ಣ ರಾಘವೇಂದ್ರ ರಾಜ್‌ಕುಮಾರ್ ರನ್ನು ಭೇಟಿ ಮಾಡಿ ಸಿನಿಮಾ ಬಗ್ಗೆ ಹಾಗೂ ಆರೋಗ್ಯ ವಿಚಾರಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

 

View this post on Instagram

 

#ಶುಭಸಂಜೆ_ಗೆಳೆಯರೆ ???? #ರಾಘಣ್ಣ ಹಾಗೂ #ಅಪ್ಪು_ಅಣ್ಣಾ ❤

A post shared by Power Groups Mysore (@power_groups_mysore) on

ಪುನೀತ್ ಕ್ಲಾಪ್ ಮಾಡಿದ ಸಿನಿಮಾ

ಇನ್ನು ತ್ರಯಂಬಕ ಸಿನಿಮಾ ಮೈಥಲಾಜಿಕಲ್ ಹಾಗೂ ಸಸ್ಪೆನ್ಸ್ ಕಥೆ ಇರುವ ಸಿನಿಮಾ. ಈ ಸಿನಿಮಾದಲ್ಲಿ ಅನುಮಪ ರಾಘಣ್ಣನ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರೋಹಿತ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಕೂಡ ಭರದಿಂದ ಸಾಗಿದೆ. ಸಿನಿಮಾಗೆ ಕ್ಲಾಪ್ ಮಾಡಿದ್ದ ಅಪ್ಪು ಇದೀಗ ಸಿನಿಮಾ ಸೆಟ್‌ನಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.

 

Tags

Related Articles