ಸುದ್ದಿಗಳು

ಗೆಳೆಯನ ನೆನಪಲ್ಲಿ ಸ್ಟಾರ್ ನಟನ ಮಗಳು..!!??!!

ಬಾಲಿವುಡ್ ಸೂಪರ್ ಹೀರೋ ಎಂದರೆ ಸಂಜಯ್ ದತ್ ಇತ್ತೀಚಿಗೆ ಅವರ ಜೀವನ ಚರಿತ್ರೆ ಕಥೆಯಾಗಿ ಬಂದಿದ್ದು ನಿಮಗೆ ಗೊತ್ತೇ ಇದೆ. ಕೆಜಿಎಫ್ ಅದಿರಾ ಲುಕ್ ಸಂಚಲನ ಮೂಡಿಸಿದೆ. ಹಾಗೆಯೇ ಅವರ ವಯಕ್ತಿಕ ಬದುಕಿನ ಬಗ್ಗೆ ಅಭಿಮಾನಿಗಳು ಆಸಕ್ತರಾಗಿರುತ್ತಾರೆ. ಇದೀಗ ಯಾವ ವಿಚಾರದ ಬಗ್ಗೆ ಅಂತ್ತೀರಾ..? ಇಲ್ಲಿದೆ ಸ್ಟೋರಿ.

ನಟ ಸಂಜಯ್ ದತ್ ಬಗ್ಗೆ ಅಲ್ಲಾ ಅವರ ಮಗಳು ತ್ರಿಶಾಲಾ ದತ್ ಗೆ ತನ್ನ ಇನಿಯನ ಸಾವಿನ ನೋವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

 

View this post on Instagram

 

👼🏻🌤 #iloveyou #imissyou 🕊

A post shared by 🧿 Trishala Dutt (@trishaladutt) on

ಸದಾ ಗೆಳೆಯನ ಗುಂಗಿನಲ್ಲಿ ಇರುವ ತ್ರಿಶಾಲ, ಇಷ್ಟು ದಿನ ಜತೆಯಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ,  ಜೀವದ ಗೆಳೆಯನ ಅಕಾಲಿಕವಾಗಿ ಸಾವನ್ನಪ್ಪಿರುವುದು ಆಕೆಯ ಜೀವನವೇ ಕುಸಿಯುವಂತೆ ಮಾಡಿದೆ. ಆ ನೋವನ್ನು ಮರೆಯಲು ಅಸಾಧ್ಯ ಹಾಗಾಗಿ ತ್ರಿಶಾಲ ಇನ್ ಸ್ಟಾಗ್ರಾಂನಲ್ಲಿ ಬಾಯ್ ಫ್ರೆಂಡ್ ಜತೆಗೆ ಈ ಹಿಂದೆ ತೆಗೆಸಿಕೊಂಡಿದ್ದ ಫೋಟೋವನ್ನು ಹಾಕಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

“ನನ್ನ ಹೃದಯ ನುಚ್ಚು ನೂರಾಗಿದೆ. ನನ್ನನ್ನು ಪ್ರೀತಿ ಮಾಡಿದ್ದಕ್ಕೆ, ನನ್ನನ್ನು ರಕ್ಷಣೆ ಮಾಡಿದ್ದಕ್ಕೆ ಮತ್ತು ನನ್ನ ಬಗ್ಗೆ ಕಾಳಜಿ ತೋರಿದ್ದಕ್ಕೆ ನಿನಗೆ ಧನ್ಯವಾದಗಳು. ನನ್ನ ಜೀವನದಲ್ಲಿ ಹಿಂದೆಂದೂ ಕಾಣದಂತಹ ಸಂತೋಷವನ್ನು ನೀನು ಕೊಟ್ಟಿದ್ದೀಯ. ಇಡೀ ಜಗತ್ತಿನಲ್ಲಿ ನಾನು ಅತ್ಯಂತ ಹೆಚ್ಚು ಅದೃಷ್ಠಶಾಲಿ ಹುಡುಗಿ” ಎಂದು ತನ್ನ ಬಾಯ್ ಫ್ರೆಂಡ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ ತ್ರಿಶಾಲ.

#sanjaydatt #thrishaladatta #boyfrienddeath #alone #bollywood

Tags