ಸುದ್ದಿಗಳು

ಕ್ರೇಜಿಸ್ಟಾರ್ ಕಿರಿಯ ಪುತ್ರನಿಗೆ ‘ಪವರ್’ಸ್ಟಾರ್ ಸಾಥ್

ಚಂದನವನದ ಕನಸುಗಾರ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ರವರ ದ್ವಿತಿಯ ಪುತ್ರ ವಿಕ್ರಮ್ ರವರು ‘ತ್ರಿವಿಕ್ರಮ’ನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವಿಶೇಷವೆಂದರೆ, ನಿನ್ನೆ (ಆ.09) ವರ ಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಚಿತ್ರತಂಡ ಮುಹೂರ್ತ ಆಚರಿಸಿಕೊಂಡಿದೆ.

ಅಂದ ಹಾಗೆ ವಿಕ್ರಮ್ ರವಿಚಂದ್ರನ್ ನಟಿಸುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭವು ನಾಗರಬಾವಿಯ ಶ್ರೀಮಲೆಮಹದೇಶ್ವರ ದೇವಾಲಯದಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾಗವಹಿಸಿ, ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಶುಭ ಹಾರೈಸಿದರು.

ಇದೊಂದು ಹೈವೋಲ್ಟೇಜ್ ಲವ್ ಸ್ಟೋರಿ ಕಥಾನಕವನ್ನು ಒಳಗೊಂಡಿದ್ದು, ಚಿತ್ರಕ್ಕೆ ನಾಯಕಿಯರಾಗಿ ಮುಂಬೈ ಬೆಡಗಿ ಆಕಾಂಕ್ಷಾ ಶರ್ಮಾ ಹಾಗೂ ಅಕ್ಷರಾ ಗೌಡ ಅಭಿನಯಿಸುತ್ತಿದ್ದಾರೆ. ‘ಧೀನ’, ‘ರೋಸ್’ ಹಾಗೂ ‘ಮಾಸ್ ಲೀಡರ್’ ಚಿತ್ರಗಳ ಖ್ಯಾತಿಯ ಸಹನಾ ಮೂರ್ತಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಇನ್ನು ಈ ಮೂಹೂರ್ತ ಸಮಾರಂಭಕ್ಕೆ ನಟ ರವಿಚಂದ್ರನ್, ಬಾಲಾಜಿ, ನಟಿ ಸಾನ್ವಿ ಶ್ರೀವಾತ್ಸವ್ ಸೇರಿದಂತೆ ಅನೇಕ ಕಲಾವಿದರು ಆಗಮಿಸಿ ವಿಕ್ರಮ್ ಗೆ ವಿಶ್ ಮಾಡಿದರು. ಇನ್ನು ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದ್ದು, ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.

‘ಸರಿಲೇರು ನೀಕೆವ್ವರು’ ಟೀಸರ್ !! ಫ್ಯಾನ್ಸ್ ಫಿದಾ!!

#Trivikrammovie ##Trivikrammoviemuhurtha  #kannadafilm, #kannadamovie, #kannadanews, #kannadanewmovie, #kannadacine, #latestkannadamovie

Tags