ಸುದ್ದಿಗಳು

ನಮಗೆ ‘ಟರ್ನಿಂಗ್ ಪಾಯಿಂಟ್’ ಸಿಕ್ಕೆ ಸಿಗುತ್ತದೆ ಎನ್ನುವ ಹೊಸಬರು

ಗಾಂಧಿನಗರಕ್ಕೆ ಮತ್ತೊಂದು ಹೊಸಬರ ಸಿನಿಮಾ

ಬೆಂಗಳೂರು.ಫೆ.19  

ಬಹುತೇಕ ಹೊಸಬರೇ ನಟಿಸಿ, ನಿರ್ಮಿಸಿರುವ`ಟರ್ನಿಂಗ್ ಪಾಯಿಂಟ್` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ದವಾಗಿದೆ.

ಚಿತ್ರದ ಬಗ್ಗೆ

ಈ ಹಿಂದೆ ಚಂದನ್, ಶ್ವೇತಾ ಪಂಡಿತ್ ಅಭಿನಯದ “ಎರಡೊಂದ್ಲ ಮೂರು’ ಚಿತ್ರವನ್ನು ನಿರ್ದೇಶಿಸಿದ್ದ ಕುಮಾರ್ ದತ್, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಪಂಚಾಕ್ಷರಿ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯಾಗಿ ಪ್ರತಿಭಾ ನಟಿಸಿದ್ದಾರೆ.

ಕಥಾಹಂದರ

ಇದೊಂದು ರಾತ್ರಿ ಪಯಣದ ಕಥೆಯಾಗಿದೆ. ಹೀಗಾಗಿ ಚಿತ್ರಕ್ಕೆ ‘ಟರ್ನಿಂಗ್ ಪಾಯಿಂಟ್’ ಎಂದು ಹೆಸರಿಡಲಾಗಿದೆ. ಇನ್ನು ಚಿತ್ರದ ವಿಶೇಷವೆಂದರೆ, ರಾತ್ರಿ ವೇಳೆಯಲ್ಲೇ ಚಿತ್ರೀಕರಣ ನಡೆಸುವುದು. ಹಾಗಾಗಿ ಇದೊಂದು ರಾತ್ರಿ ಕಥೆ ಎಂಬುದು ಅವರ ಮಾತು. ಇಲ್ಲಿ ಕೇವಲ ಲವ್ ಸ್ಟೋರಿ ಮಾತ್ರವಲ್ಲ, ಬೇರೆಯದ್ದೇ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ.

ಕಲಾವಿದರು ಮತ್ತು ತಂತ್ರಜ್ಞರು

ಈ ಸಿನಿಮಾ ಕನ್ನಡದೊಂದಿಗೆ ಮರಾಠಿ ಭಾಷೆಯಲ್ಲೂ ತಯಾರಾಗುತ್ತಿದ್ದು, ಚಿತ್ರದಲ್ಲಿ ಲವ್ ಟ್ರಾಕ್ ಜೊತೆಗೆ ಸೆಂಟಿಮೆಂಟ್ ಕೂಡಾ ಇದೆ. ಚಿತ್ರದಲ್ಲಿ ಶ್ರೀಧರ್, ಸೂರಜ್ ಸೇರಿದಂತೆ ಅನೇಕ ಹೊಸಬರು ಚಿತ್ರದಲ್ಲಿದ್ದು, ಬಕ್ಕೇಶ್ ಸಂಗೀತ, ವಿನಯ್ ಛಾಯಾಗ್ರಹಣವಿದೆ.

25 ದಿನಗಳ ಕಾಲ ನಡೆಯುವ ಚಿತ್ರೀಕರಣಕ್ಕೆ ಸೋಮವಾರ ರಾತ್ರಿ ಚಾಲನೆ ದೊರೆತಿದ್ದು, ತುಮಕೂರು, ಮಂಗಳೂರು ರಸ್ತೆಗಳಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡದವರು ಹೇಳುತ್ತಾರೆ.

ದರ್ಶನ್ ಹುಟ್ಟುಹಬ್ಬಕ್ಕೆ ಬಂತು ಮಕ್ಕಳಿಂದ ವಿಶೇಷವಾದ ಗಿಫ್ಟ್

#turningopoint, #balkaninews #filmnews, #prathiba, #kannadasuddigalu

Tags

Related Articles