ಸುದ್ದಿಗಳು

ಟ್ವಿಟರ್ ಖಾತೆ ತೆರೆದ ‘ಪವರ್ ಸ್ಟಾರ್’

ಕೊನೆಗೂ ಪುನೀತ್ ರಾಜ್ ಕುಮಾರ್ ಟ್ವಿಟರ್ ಖಾತೆಯನ್ನು ಓಪನ್ ಮಾಡಿದ್ದಾರೆ

ಕೆಲವು ಕಲಾವಿದರಂತೆ ನಟ ಪುನೀತ್ ರಾಜ್ ಕುಮಾರ್ ಕೂಡಾ ಸಾಮಾಜಿಕ ಜಾಲತಾಣಕ್ಕೆ ಬಂದಿದ್ದರೆ. ಈಗಾಗಲೇ ಫೇಸ್ಬುಕ್ ನಲ್ಲಿ ಸಕ್ರಿಯವಾಗಿದ್ದ ಅಪ್ಪು, ಟ್ವಿಟರ್ ಗೂ ಕಾಲಿಟ್ಟಿದ್ದಾರೆ.

ಬೆಂಗಳೂರು,ಆ.31: ಚಂದನವನದ ಕಲಾವಿದರು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗುತ್ತಿದ್ದಾರೆ. ಒಬ್ಬೊಬ್ಬ ಕಲಾವಿದರು ಸಾಮಾಜಿಕ ಜಾಲತಾಣದ ಫೇಸ್ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ಗಳಿಗೆ ಬರುತ್ತಿದ್ದಾರೆ. ಅವರಂತೆಯೇ ಪುನೀತ್ ರಾಜ್ ಕುಮಾರ್ ಕೂಡಾ ಟ್ವಿಟರ್ ಗೆ ಕಾಲಿಟ್ಟಿದ್ದಾರೆ.

ಟ್ವಿಟರ್ ಖಾತೆ

ನಟ ಪುನೀತ್ ಇದುವರೆಗೂ ಫೇಸ್ಬುಕ್ ನಲ್ಲಿ ಮಾತ್ರ ಸಕ್ರಿಯರಾಗಿದ್ದರು. ಈಗ ಅಧಿಕೃತವಾಗಿ ಟ್ವಿಟರ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಖಾತೆಯನ್ನು ಟ್ವಿಟರ್ ಅಧಿಕೃತಗೊಳಿಸಿದೆ. ಹಾಗೂ ಅವರು ಬಂದ ಕೆಲವೇ ಗಂಟೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಅವರನ್ನು ಫಾಲೋ ಮಾಡಿದ್ದಾರೆ.

ನಕಲಿ ಖಾತೆ

ಹಲವರು ಈ ಹಿಂದೆ ‘ಪುನೀತ್ ರಾಜ್ ಕುಮಾರ್’ ಹೆಸರಿನಲ್ಲಿ ಹಲವು ನಕಲಿ ಖಾತೆಗಳನ್ನು ಸೃಷ್ಟಿ ಮಾಡಿದ್ದರು. ಆದರೆ ಇದು ಯಾವಾಗ ನಕಲಿ ಖಾತೆ ಅಂತ ಗೊತ್ತಾಯಿತೋ ಆಗ ಅವರ ಅಭಿಮಾನಿಗಳು ಭ್ರಮನಿರಸಗೊಂಡಿದ್ದರು. ಆದರೆ ನಿನ್ನೆ ಪವರ್ ಸ್ಟಾರ್ ಅಧಿಕೃತವಾಗಿ ಟ್ವಿಟರ್ ಖಾತೆ ತೆರೆದಿರುವುದು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.

Tags