ಜೀವನ ಶೈಲಿಫ್ಯಾಷನ್ಸುದ್ದಿಗಳು

ಗಣೇಶನ ರೂಪವನ್ನೇ ಬದಲಿಸಿದ ಕಲೆ…!!!

ದೇಶಾದ್ಯಂತ ಮನೆ ಮಂದಿಯೆಲ್ಲಾ ಅತಿ ಸಂಭ್ರಮದಿಂದ ಆಚರಿಸುವ ಗಣೇಶ ಚತುರ್ಥಿ ಹಬ್ಬಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ. ಪ್ರತಿ ಮನೆಯಲ್ಲೂ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಾಗೆಯೇ ಈ ಹಬ್ಬವನ್ನು ವಿಜೃಂಭಣೆಗೊಳಿಸುವಂತ ಗಣೇಶನ ಮೂರ್ತಿಗಳು ರೆಡಿಯಾಗುತ್ತಿವೆ.

1892 ರಲ್ಲಿ ಬಾಲಗಂಗಾಧರ ತಿಲಕರು ಹಿಂಧೂ ಧರ್ಮ ಸ್ಥಾಪನೆಯ ಕಾರಣವಾಗಿ ‘ಗಣೇಶ ಚತುರ್ಥಿ’ಯನ್ನು ಆರಂಭಿಸಿದರು. ಅಂದು ಅವರು ಆರಂಭಿಸಿದ ಕಾರಣದ ಉದ್ದೇಶ ಬೇರೆಯದ್ದೇ ಇರಬಹುದು ಆದರೆ ಇಂದು ತುಂಬಾ ಬದಲಾಗಿದೆ.

ಗಣೇಶನ ಚತುರ್ಥಿ ಬರುತ್ತಿದೆ ಎಂದರೆ, ಒಂದು ಸಂಭ್ರಮವೆಂದೇ ಹೇಳಬಹುದು. ಅದರಲ್ಲೂ ಮೂರ್ತಿ ತಯಾರಕರು ಒಂದು ತಿಂಗಳ ಮುಂಚೆಯೇ ತಯಾರಿಸಲು ಶುರು ಮಾಡುತ್ತಾರೆ, ಹಾಗೆಯೇ ಪ್ರತಿ ಮನೆ ಮನೆಯಲ್ಲೂ ತಿಂಗಳ ಮುಂಚೆಯೇ ಈ ಹಬ್ಬದ ತಯಾರಿಗಾಗಿ ಸಿದ್ದತೆಯಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಪಡ್ಡೆ ಹುಡುಗರನ್ನು ಕೇಳಬೇಕೆ.!! ಆ ಒಂದು ತಿಂಗಳ ಕಾಲ ಆ ಕಾಲೋನಿ (ಗಲ್ಲಿ)ಯೇ ಅವರದ್ದು…!!

ಗಣೇಶನ ಹಬ್ಬಕ್ಕೆ ಮುಖ್ಯವಾಗಿ ಮೂರ್ತಿ ತಯಾರಕರ ಪಾತ್ರವಂತೂ ಬಹುದೊಡ್ಡದು. ಅಂದಿನಿಂದ ಇಂದಿನವರೆಗೂ ಅವರ ಕ್ರಿಯಾಶೀಲತೆಯನ್ನು ಮೆಚ್ಚಲೇ ಬೇಕಾಗಿದೆ. ಜನರ ಮನಸ್ಥಿತಿಗೆ ತಕ್ಕ ಹಾಗೆ ಬದಲಾಗಿ, ದೇವರಾದಂತಹ ಗಣೇಶನನ್ನೇ ನಮ್ಮಲ್ಲೊಬ್ಬರನ್ನಾಗಿ ಮಾಡುವಂತಹ ಅವರ ಕಲೆ ಮೆಚ್ಚುವಂಥದ್ದೆ..!!

ವಿಶೇಷವೆಂದರೆ, ಈ ಎಲ್ಲಾ ಗಣಪನ ಮೂರ್ತಿಗಳು ಬಣ್ಣದಿಂದ ತಯಾರಾಗದೇ ಪರಿಸರ ಸ್ನೇಹಿ ಮೂರ್ತಿಗಳಾಗಿವೆ. ಈಗಾಗಲೇ ಗಣೇಶನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಪರಿಸರಕ್ಕೆ ಹಾನಿಯುಂಟಾಗಬಾರದು ಎಂಬ ಕಾರಣಕ್ಕೆ ಮೂರ್ತಿಗಳಿಗೆ ಬಣ್ಣವನ್ನೂ ಹಚ್ಚಲಾಗುತ್ತಿಲ್ಲ.

ಅಂದ ಹಾಗೆ ಕಳೆದ ವರ್ಷ ತೆರೆ ಕಂಡು ಹಿಟ್ ಆದಂತ ‘ಕೆ.ಜಿ.ಎಫ್’ ಚಿತ್ರದ ನಾಯಕ ರಾಕಿಯ ಗೆಟಪ್ ನ ಗಣೇಶ, ಇನ್ನು ಮಂಡ್ಯದಲ್ಲಿ ಬಾರೀ ಸದ್ದು ಮಾಡಿದ್ದ ‘ಜೋಡೆತ್ತು’ ಗೆಟಪ್ ನ ಗಣೇಶ, ‘ಬಾಹುಬಲಿ’ ಗಣೇಶ, ಬಾಡಿ ಬಿಲ್ಡಿಂಗ್ ಗಣೇಶ, ಸ್ಪೈಡರ್ ಮ್ಯಾನ್ ಗಣೇಶ, ಉಪ್ಪಿ-2 ಗಣೇಶ, ಚೋಟಾ ಭೀಮ ಗಣೇಶ… ಹೀಗೆ ಅನೇಕ ಶೈಲಿಯ ಗಣಪನ ಮೂರ್ತಿಗಳು ಬಂದಿದೆ ಮತ್ತು ಬರುತ್ತಿವೆ.

ಒಟ್ಟಿನಲ್ಲಿ ವಸ್ತುಸ್ಥಿತಿ, ಮನಸ್ಥಿತಿ ಹಾಗೂ ತಂತ್ರಜ್ಞಾನ ಬದಲಾದಂತೆ ದೇವರ ರೂಪವನ್ನು ಬದಲಿಸಿದಂತಹ ಗಣೇಶನ ಮೂರ್ತಿ ತಯಾರಕರ ಕಲಾವಿದರಿಗೆ ವಂದನೆಗಳು. ಎಲ್ಲರಿಗೂ ಮುಂಚಿತವಾಗಿ ಗೌರಿ ಗಣೇಶ ಹಬ್ಬದ ಶುಭಾಶಯಗಳು.

@ sunil javali

ಅಭಿಮಾನಿಗಳಿಗೆ ಶಾಕ್ ನೀಡಿದ ವರಲಕ್ಷ್ಮಿ ಶರತ್ ಕುಮಾರ್

#godganesh #godganeshstachu #hindufestival

Tags