ಸುದ್ದಿಗಳು

‘ಯು ಸರ್ಟಿಫಿಕೇಟ್’ ಪಡೆದ ‘ಇರುವುದೆಲ್ಲವ ಬಿಟ್ಟು’

ಮುಂದಿನ ವಾರ ಸಿನಿಮಾ ಬಿಡುಗಡೆ

ಬೆಂಗಳೂರು,ಸೆ.11: ಇತ್ತೀಚೆಗೆಯಷ್ಟೇ ‘ಇರುವುದೆಲ್ಲವ ಬಿಟ್ಟು’ ಚಿತ್ರದ ಧ್ವನಿ ಸಾಂದ್ರಿಕೆಯನ್ನು ಸ್ಯಾಂಡಲ್ ವುಡ್ ಕಲಾವಿದರಾದ ಚಿರಂಜೀವಿ ಸರ್ಜಾ ಮತ್ತು ಧ್ರುವಸರ್ಜಾ ಬಿಡುಗಡೆ ಮಾಡಿದ್ದರು. ಎರಡನೆ ಹಂತದಲ್ಲಿ ಟ್ರೈಲರ್ ನ್ನು ದರ್ಶನ್ ಅನಾವರಣಗೊಳಿಸಿದರು.
ಟ್ರೈಲರ್ ಮೂಲಕ ಸಂಚಲನ ಮೂಡಿಸಿ ಅಬ್ಬರಿಸಿರುವ ‘ಇರುವುದೆಲ್ಲವ ಬಿಟ್ಟು’ ಚಿತ್ರದ ‘ಚೆಲುವೆ ನೀ ಬಂದು’ ವಿಡಿಯೋ ಹಾಡು ಬಿಡುಗಡೆ ಆಗಿದೆ. ಬಿಡುಗಡೆ ಆದದ್ದೇ ತಡ ಎಲ್ಲರಿಂದಲೂ ಪ್ರಶಂಸನೀಯ ಮಾತು ಕೇಳಿ ಬರುತ್ತಿದೆ.

Image result for 'ಇರುವುದೆಲ್ಲವ ಬಿಟ್ಟು'

‘ಯು ಸರ್ಟಿಫಿಕೇಟ್’

ತಿಲಕ್ , ಮೇಘನಾ ರಾಜ್, ಶ್ರೀ ಮಹದೇವ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಇರುವುದೆಲ್ಲವ ಬಿಟ್ಟು’ ಸಿನಿಮಾಗೆ ‘ಯು ಸರ್ಟಿಫಿಕೇಟ್’ ದೊರೆತಿದೆ. ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಿಸಿ ಸರ್ಟಿಫಿಕೇಟ್ ನೀಡಿದೆ.

ಬಿಲ್ವ ಕ್ರಿಯೇಶನ್ಸ್ ಲಾಂಛನದಲ್ಲಿ ದೇವರಾಜ್​​​. ಬಿ ನಿರ್ಮಿಸಿರುವ ಈ ಸಿನಿಮಾವನ್ನು ಕಾಂತರಾಜ್ ಕನ್ನಳ್ಳಿ ನಿರ್ದೇಶಿಸಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಹಾಗೂ ರಿಷಭ್ ಶೆಟ್ಟಿ ಕೂಡಾ ಟ್ರೇಲರ್ ನೋಡಿ ಹೊಗಳಿದ್ದಾರೆ. ಈ ಚಿತ್ರ ಪ್ರಮೋಶನಲ್ ಹಾಡಿಗೆ ಯೋಗರಾಜ್​ ಭಟ್ ಸಾಹಿತ್ಯ ಬರೆದಿದ್ದಾರೆ. ಸಿನಿಮಾವನ್ನು ಮುಂದಿನ ವಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ನಿರ್ಮಾಪಕ ದೇವರಾಜ್ ಹೇಳಿದ್ದಾರೆ. ಇನ್ನು ಈ ಚಿತ್ರಕ್ಕೆ ಮಹೇಶ್ ಮಳವಳ್ಳಿ ಅವರ ಸಂಭಾಷಣೆ ಇದ್ದು, ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಮತ್ತು ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ಒಳಗೊಂಡಿದೆ.

ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರಪ್ರಸಾದ್, ಕವಿರಾಜ್ ಸಾಹಿತ್ಯ ರಚಿಸಿದ್ದಾರೆ. ಮೇಘನರಾಜ್, ತಿಲಕ್, ಶ್ರೀ ಮಹದೇವ್, ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಅಭಿಷೇಕ್ ರಾಯಣ್ಣ, ರಿಚರ್ಡ್ ಲೂಯಿಸ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ..

 

Tags