ಸುದ್ದಿಗಳು

ತೆಲುಗಿನ ‘ಯೂ-ಟರ್ನ್’ ಸಿನಿಮಾ ರೈಟ್ಸ್ ಕೋಟಿ ಕೋಟಿಗೆ ಮಾರಾಟ…

ಈ ಸಿನಿಮಾ ರೈಟ್ಸ್ ೬ ಕೋಟಿಗೆ ಮಾರಾಟ..

ತಮಿಳಿನಲ್ಲೂ ರೈಟ್ಸ್ ಪಡೆಯಲು  ನಿರ್ಮಾಪಕರು ನಾ ಮುಂದು, ತಾ ಮುಂದು ಎನ್ನುತ್ತಿದ್ದಾರಂತೆ.

ಹೈದರಾಬಾದ್,ಸೆ.03: ಸದ್ಯ ಸಮಂತಾ ಅಕ್ಕಿನೇನಿ ನಟಿಸುತ್ತಿರೋ ‘ಯೂ-ಟರ್ನ್’ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಕನ್ನಡದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಸಿನಿಮಾ ಸದ್ಯ ತಮಿಳು ತೆಲುಗಿಗೆ ರೀಮೇಕ್ ಆಗುತ್ತಿದೆ. ಹೊಸ ವಿಚಾರ ಏನಪ್ಪಾ ಅಂದರೆ ತೆಲುಗಿನಲ್ಲಿ ರೆಡಿಯಾಗುತ್ತಿರೋ  ಈ ಸಿನಿಮಾದ ರೈಟ್ಸ್ ಇದೀಗ ಮಾರಾಟವಾಗಿದೆ. ಸುಮಾರು ‘೬ ಕೋಟಿಗೆ’ ಈ ಸಿನಿಮಾ ರೈಟ್ಸ್ ಮಾರಾಟವಾಗಿದೆ.

ಸಿನಿಮಾ ರೈಟ್ಸ್ ಕೋಟಿಗೆ ಮಾರಾಟ

ಹೌದು, ಕನ್ನಡದ ಈ ಸಿನಿಮಾ ಬೇರೆ ಭಾಷೆಗೆ ರೀಮೇಕ್ ಆಗುತ್ತಿರೋದು ಖುಷಿಯ ಸಂಗತಿ. ಈಗಾಗಲೇ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಜೊತಗೆ ಈ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆ ಆಗಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೆ ಈ ಸಿನಿಮಾ ಟ್ರೇಲರ್ ನ ಲಕ್ಷಗಟ್ಟಲೆ ಮಂದಿ ವೀಕ್ಷಣೆ ಮಾಡಿದ್ದರು. ಇದೀಗ ತೆಲುಗಿನ ಈ ಸಿನಿಮಾ ರೈಟ್ಸ್ ೬ ಕೋಟಿಗೆ ಮಾರಾಟವಾಗಿದೆ. ಇನ್ನು ತಮಿಳಿನಲ್ಲೂ ರೈಟ್ಸ್ ಪಡೆಯಲು  ನಿರ್ಮಾಪಕರು ನಾ ಮುಂದು, ತಾ ಮುಂದು ಎನ್ನುತ್ತಿದ್ದಾರಂತೆ.

Image result for u turn telugu

ಸುಮಾರು ೧೫.೫ ಕೋಟಿ ವೆಚ್ಚ

ಸುಮಾರು ೧೫.೫ ಕೋಟಿ ವೆಚ್ಚದಲ್ಲಿ ಈ ಸಿನಿಮಾ ರೆಡಿಯಾಗುತ್ತಿದೆ. ಪವನ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಸಿನಿಮಾದಲ್ಲಿ ಸಮಂತಾ ಅಕ್ಕಿನೇನಿ ಮುಖ್ಯ ಪಾತ್ರದಲ್ಕಿ ಕಾಣಿಸಿಕೊಂಡರೆ ಇವರ ಜೊತೆಗೆ ಆದಿ ಪಿನಿಶೆಟ್ಟಿ, ರಾಹುಲ್ ರವೀಂದ್ರನ್​ ಮತ್ತು ಭೂಮಿಕಾ ಚಾವ್ಲಾ ಕೂಡ ಅಭಿನಯಿಸಿದ್ದಾರೆ. ಇನ್ನು ಇದೇ ಗಣೇಶ ಹಬ್ಬಕ್ಕೆ ತೆಲುಗು, ತಮಿಳಿನಲ್ಲಿ ‘ಯೂಟರ್ನ್’​​ ಚಿತ್ರ ತೆರೆ ಕಾಣಲಿದೆಯಂತೆ.

 

Tags