ಸುದ್ದಿಗಳು

ಆತ್ಮಹತ್ಯೆ ಬಗ್ಗೆ ಮಾತನಾಡಿದ ನಟ ಉದಯ್ ಚೋಪ್ರಾ

ಮುಂಬೈ, ಮಾ.24:

ಮನಸ್ಸಿನ ಸ್ಥಿತಿ ಸರಿ ಇಲ್ಲದ್ದಾಗ ಡಿಪ್ರೇಷನ್ ಆಗೋದು ಸಾಮಾನ್ಯ. ಹೆಚ್ಚಿನ ಒತ್ತಡಗಳು ಇದ್ದಾಗ ನಾವು ಏನು ಮಾಡ್ತಾ ಇದ್ದೇವೆ ಅನ್ನೋದು ನಮಗೆ ತಿಳಿಯದಾಗಿ ಬಿಡುತ್ತದೆ. ಯಾಕೆಂದರೆ ಮನಸ್ಸೇ ಹಾಗೆ. ಈ ಡಿಪ್ರೇಷನ್ ಅನ್ನೋದು ಯಾರನ್ನೂ ಬಿಟ್ಟಿಲ್ಲ. ಸಿನಿಮಾ ರಂಗದವರೂ ಈ ಡಿಪ್ರೇಷನ್ ಗೆ ಒಳಗಾಗಿ ಬಿಟಿದ್ದಾರೆ. ಎಷ್ಟೋ ಮಂದಿ ಡಿಪ್ರೇಷನ್ ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಇನ್ನೊಬ್ಬ ನಟ ಈ ಡಿಪ್ರೇಷನ್ ಗೆ ಒಳಗಾಗಿ ಆತ್ಮಹತ್ಯೆ ಮಾತನ್ನಾಡಿದ್ದಾರೆ.

ಏನಾಯ್ತು ನಿರ್ಮಾಪಕನ ಮಗನಿಗೆ

ಹೌದು, ಬಾಲಿವುಡ್ ನ ಖ್ಯಾತ ನಿರ್ಮಾಪಕ ಯಶ್ ಚೋಪ್ರಾ ಮಗ ಉದಯ್ ಚೋಪ್ರಾ ಡಿಪ್ರೇಷನ್ ಗೆ ಒಳಗಾಗಿದ್ದಾರೆ. ಸದ್ಯ ಈ ನಟ ಡಿಪ್ರೇಷನ್ ನಿಂದ ಆತ್ಮಹತ್ಯೆಯ ಬಗ್ಗೆ  ಮಾತಾಡಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿದ್ದ ಈ ನಟ ಡಿಪ್ರೆಷನ್ ನಲ್ಲಿ ಇದ್ದೇನೆ, ಎಷ್ಟೇ ಪ್ರಯತ್ನಿಸಿದರೂ ಇದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಟ್ವಿಟ್ ವೈರಲ್ ಆಗುತ್ತಿದ್ದಂತೆ ಕುಟುಂಬ ಮೂಲಗಳು ಅದನ್ನು ಡಿಲೀಟ್ ಮಾಡಿದ್ದಾರೆ.

ಟ್ವಿಟ್ ಡಿಲೀಟ್..?

ಇನ್ನೂ ಡಿಲೀಟ್ ಮಾಡಿದ ಟ್ವಿಟ್ಟರ್ ನಲ್ಲಿ ಸಾವಿಗೆ ತುಂಬಾ ಹತ್ತಿರ ಹೋದಂತೆ ಅನ್ನಿಸುತ್ತದೆ. ಆತ್ಮಹತ್ಯೆಗೆ ಇದು ಸೂಕ್ತ ದಾರಿಯಾಗಿ ಭಾವಿಸುತ್ತಿರುವುದಾಗಿ ಹೇಳಿರುವುದು ವರದಿಗಳಾಗಿವೆ. ಈ ಹಿಂದೆ ಕೂಡ ಇವರು ಇಂತಹದ್ದೇ ಟ್ವಿಟ್ ಮಾಡಿದ್ದರು ಎನ್ನಲಾಗಿತ್ತು ಇದೀಗ ಮತ್ತೆ ಅದೇ ರೀತಿಯಲ್ಲಿ ಮಾತನಾಡಿದ್ದಾರೆ.

ನಾನು ಆರಾಮಾಗಿದ್ದೇನೆ ಎಂದ ನಟ

ಇನ್ನೂ ಇದೆಲ್ಲ ಬೆಳವಣಿಗೆಗಳ ನಂತರ ಮತ್ತೆ ಟ್ವಿಟ್ ಮಾಡಿರುವ ಈ ನಟ ಕೆಲವೊಂದು ಸಂದರ್ಭದಲ್ಲಿ ಏನೋ ಆಯಿತು‌. ನಾನು ಆರಾಮಾಗಿದ್ದೇನೆ. ಯಾರು ಚಿಂತೆ ಪಡುವ ಅಗತ್ಯವಿಲ್ಲ. ಕೆಲವೊಮ್ಮೆ ಕೆಲವೊಂದು ಸಂಧರ್ಭಗಳು, ಮಿಸ್ ಅಂಡರ್ಸ್ಟಾಂಡ್ ಯಿಂದ ಆಗಿದೆ. ನಿಮ್ಮ ಪ್ರೀತಿ ಕಾಳಜಿಗೆ ಧನ್ಯವಾದಗಳು. ಈ ಪ್ರೀತಿ ಖಾಳಜಿ ಹಾಗೇ ಇರಲಿ ಅಂತಾ ಟ್ವಿಟ್ ಮಾಡಿದ್ದಾರೆ.

ಕೊನೆಯ ತನಕ ಕೌತುಕ ಕಾಪಾಡಿಕೊಳ್ಳುವ ‘ಉದ್ಘರ್ಷ’

#balkaninews #udaychopra #udaychopramovies #bollywood #hindimovies

Tags