ಸುದ್ದಿಗಳು

ತಮ್ಮನ ಚಿತ್ರದೊಂದಿಗೆ ಅಣ್ಣನ ಸಿನಿಮಾವನ್ನೂ ನಿರ್ಮಿಸಲಿರುವ ಉದಯ್ ಮೆಹ್ತಾ

ಶೀಘ್ರದಲ್ಲಿ ಸಿನಿಮಾ ಶುರು

ಬೆಂಗಳೂರು, ಅ. 13 : ಸದ್ಯ ಧ್ರುವ ಸರ್ಜಾ ಅಭಿನಯಿಸುತ್ತಿರುವ ‘ಪೊಗರು’ ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕ ಉದಯ್ ಮೆಹ್ತಾ ಮತ್ತೊಂದು ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಬಾರಿ ಚಿರಂಜೀವಿ ಸರ್ಜಾ ಅವರ ಮುಂದಿನ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.

ಚಿತ್ರದ ಬಗ್ಗೆ

ಸದ್ಯ ಚಿತ್ರವನ್ನು ನಿರ್ಮಿಸಲು ಎಲ್ಲವೂ ಅಂತಿಮವಾಗಿದ್ದು, ಶೀಘ್ರವೇ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಆದರೆ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಉಳಿದಂತೆಚಿತ್ರವನ್ನು ಯಾರಿಂದ ನಿರ್ದೇಶನ ಮಾಡಿಸಬೇಕು ಎಂಬುದರ ಕುರಿತಂತೆ ಮಾತುಕಥೆಗಳು ನಡೆಯುತ್ತಿವೆ.

ಹುಟ್ಟುಹಬ್ಬದಂದು ಇತರೇ ಮಾಹಿತಿ

ಇನ್ನು ಈ ಹೊಸ ಚಿತ್ರದ ಬಗ್ಗೆ ಇತರೇ ಮಾಹಿತಿಗಳು ಅಕ್ಟೋಬರ್ 17 ರಂದು ಹೊರ ಬರಲಿವೆ. ಅಂದು ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬವಿದ್ದು, ಅಂದೇ ಚಿತ್ರದ ಬಗೆಗಿನ ಮಾಹಿತಿಗಳನ್ನುತಿಳಿಸಲಿದ್ದಾರೆ ನಿರ್ಮಾಪಕ ಉದಯ್ ಮೇಹ್ತಾ.

ಸಿನಿಮಾಗಳು

ಚಿರಂಜೀವಿ ಸರ್ಜಾ ಅಭಿನಯದ ‘ಅಮ್ಮಐ ಲವ್ ಯೂ’ ಯಶಸ್ವಿ 50 ದಿನಗಳನ್ನು ಪೂರೈಸಿತ್ತು. ಸದ್ಯ ಅವರು ‘ರಾಜ ಮಾರ್ಥಾಂಡ’ ದಲ್ಲಿ ನಿರತರಾಗಿದ್ದು, ಈ ಚಿತ್ರದಲ್ಲಿ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಒಂದೇ ಚಿತ್ರದಲ್ಲಿ ಅಣ್ತಂಮ್ಮಂದಿರು

ಈಗಾಗಲೇ ಸುದ್ದಿಯಾಗಿರುವಂತೆ, ನಟ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೆ ಅಭಿನಯಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಚಿತ್ರ ಇನ್ನು ತಡವಾಗಬಹುದು ಎಂಬ ಮಾಹಿತಿಯಿದೆ. ಇನ್ನು ‘ಭರ್ಜರಿ’ ಚಿತ್ರದ ಒಂದು ದೃಶ್ಯ ಹಾಗೂ ‘ಪ್ರೇಮಬರಹ’ ಚಿತ್ರದ ವಿಶೇಷ ಹಾಡಿನಲ್ಲಿ ಚಿರು ಹಾಗೂ ಧ್ರುವ ಸರ್ಜಾ ಕಾಣಿಸಿಕೊಂಡಿದ್ದರು.

Tags

Related Articles