ಸುದ್ದಿಗಳು

ಉದ್ಘರ್ಷಕ್ಕೆ ಸಾಥ್ ವಿಶ್ ಮಾಡಿದ ಕಿಚ್ಚ

ಬೆಂಗಳೂರು,ಮಾ.4: ಉದ್ಘರ್ಷ ಸಿನಿಮಾ ಟ್ರೇಲರ್‌ನಲ್ಲಿ ಕಿಚ್ಚನ ಧ್ವನಿ ಇದೆ. ಇದೀಗ ಈ ಸಿನಿಮಾ ಇಡೀ ಟೀಮ್‌ಗೆ ಕಿಚ್ಚ ವಿಶ್ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಾರರ್ ಟಚ್ ಇರುವ ಸಿನಿಮಾಗಳು ಹೆಚ್ಚಾಗಿವೆ. ಈ ಹಾರರ್ ಸಿನಿಮಾಗಳು ಪ್ರೇಕ್ಷಕರ ಲೆಕ್ಕಾಚಾರದಂತೆಯೇ ಇರುತ್ತವೆ. ಅದರಲ್ಲೂ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಸಿನಿಮಾ ಅಂದರೆ ಕೇಳಬೇಕಾ..? ಸಿನಿಮಾ ಅಭಿಮಾನಿಗಳು ಚಿತ್ರವನ್ನ ನೋಡಲು ಕೌತುಕರಾಗಿರ್ತಾರೆ. ಈ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ ಸ್ಪರ್ಷ, ತರ್ಕ, ನಿಷ್ಕರ್ಷ ಸಿನಿಮಾಗಳಂತೆಯೇ ಈ ಬಾರಿ ಉದ್ಘರ್ಷ ಸಿನಿಮಾ ನಿರ್ದೇಶನ ಮಾಡುತ್ತಿದ್ದು ನಿರೀಕ್ಷೆಯನ್ನು ಹೆಚ್ಚಿಸಿಕೊಂಡಿದೆ.

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಸಿನಿಮಾ

ಸದ್ಯ ಈ ಸಿನಿಮಾ ಈಗಾಗಲೇ ಒಂದು ಹಂತಕ್ಕೆ ಸೆನ್ಸೇಷನಲ್ ಕ್ರಿಯೇಟ್ ಮಾಡಿದೆ. ಯಾಕಂದ್ರೆ ಈ ಸಿನಿಮಾದ ಪೋಸ್ಟರ್‌ಗಳು ಟೀಸರ್ ಹೀಗೆ ಎಲ್ಲದರಲ್ಲಿಯೂ ನಿಗೂಡತೆಯನ್ನು ಎಹಚ್ಚಿಸುವಂತಿದೆ. ಇನ್ನೇನು ಬಿಡುಗಡೆ ಹಂತಕ್ಕೆ ತಲುಪಿರುವ ಈ ಸಿನಿಮಾ ಇದೀಗ ಟ್ರೇಲರ್ ಲಾಂಚ್ ಮಾಡುತ್ತಿದೆ. ವಿಶೇಷ ಅಂದರೆ ಈ ಸಿನಿಮಾ ಟ್ರೇಲರ್‌ನಲ್ಲಿ ಸುದೀಪ್ ವಾಯ್ಸ್ ಇದೆ. ಈ ಸಿನಿಮಾ ಟ್ರೇಲರ್‌ ಗೆ ದರ್ಶನ್ ಸಾಥ್ ನೀಡುತ್ತಿದ್ದಾರೆ,

ಉದ್ಘರ್ಷಕ್ಕೆ ಕಿಚ್ಚ ಶುಭಾಷಯ

ಇದೀಗ ಈ ಸಿನಿಮಾ ತಂಡಕ್ಕೆ ಕಿಚ್ಚ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ. ಟಾಕೂರ್ ಅನೂಪ್ ಸಿಂಗ್ ಟ್ರೇಲರ್‌ನಲ್ಲಿ ಕಿಚ್ಚ ಧ್ವನಿ ನೀಡಿದ್ದಕ್ಕಾಗಿ ಥ್ಯಾಕ್ಸ್ ಹೇಳಿದ್ದಾರೆ. ಹೀಗಾಗಿ ಈ ಟ್ವಿಟ್ ಗೆ ರಿಪ್ಲೈ ಮಾಡಿರುವ ಕಿಚ್ಚ, ಇದು ನನ್ನ ಪ್ಲೆಸರ್ ನನ್ನ ಸ್ನೇಹಿತ, ನಿಮಗೆ ಹಾಗೂ ಇಡೀ ಸಿನಿಮಾ ತಂಡಕ್ಕೆ ಶುಭವಾಗಲಿ ಎಂದು ಬರೆದಿದ್ದಾರೆ.

ಮರ್ಡರ್ ಮಿಸ್ಟ್ರೀಯ, ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಪ್ರೇಮಕಥೆ

ಇನ್ನು ಈ ಚಿತ್ರದಲ್ಲಿ ಅನೂಪ್ ಸಿಂಗ್ ನಾಯಕನಾದರೆ ಇವರಿಗೆ ನಾಯಕಿಯಾಗಿ ಸಾಯಿ ಧನ್ಸಿಕಾ ಸ್ಕ್ರೀನ್‌ಶೇರ್ ಮಾಡಿದ್ದಾರೆ. ಇದೊಂದು ವಿಭಿನ್ನವಾದ ಮರ್ಡರ್ ಮಿಸ್ಟ್ರೀಯ, ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಒಂದು ಸುಂದರ ಪ್ರೇಮಕಥೆಯನ್ನ ಹೊಂದಿರೋ ಸಿನಿಮಾ ಆಗಿದೆ. ನ್ನು ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ ದೇವರಾಜ್. ಅಷ್ಟೇ ಅಲ್ದೆ ಮಂಜುನಾತ್ ಹಾಗೂ ರಾಜೇಂದ್ರ ಈ ಸಿನಿಮಾದ ಸಹ ನಿರ್ಮಾಣ ಮಾಡಿದ್ದಾರೆ.

ಮುದ್ದು ಮುದ್ದಾಗಿ ಮಾತನಾಡಿದ ‘ನಟ ಸಾರ್ವಭೌಮ’ನ ಚೆಲುವೆ

Tags