ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಕೊನೆಯ ತನಕ ಕೌತುಕ ಕಾಪಾಡಿಕೊಳ್ಳುವ ‘ಉದ್ಘರ್ಷ’

ಒಂದೇ ಮಾತಿನಲ್ಲಿ ಹೇಳುವುದಾದರೇ ನಿರ್ದೇಶಕ ದೇಸಾಯಿ ಈಸ್ ಬ್ಯಾಕ್

ಬೆಂಗಳೂರು.ಮಾ.23: ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಚಿತ್ರಗಳೆಂದರೆ ಹಾಗೆಯೇ.. ಅವರ ಹಿಂದಿನ ಚಿತ್ರಗಳಾದ ‘ತರ್ಕ’, ‘ಉತ್ಕರ್ಷ’, ‘ನಿಷ್ಕರ್ಷ’, ‘ಪ್ರತ್ಯರ್ಥ’, ‘ಮರ್ಮ’ ಚಿತ್ರಗಳಂತೆಯೇ ‘ಉದ್ಘರ್ಷ’ ಚಿತ್ರವೂ ಸಸ್ಪೆನ್ಸ್ ಭರಿತವಾಗಿದೆ. ಚಿತ್ರದ ಕೊನೆಯವರೆಗೂ ನಿರ್ದೇಶಕರು ಕುತೂಹಲವನ್ನು ಕಾಯ್ದುಕೊಂಡು ಹೋಗಿದ್ದಾರೆ.

ಚಿತ್ರದ ಪೂರ್ತಿ ಖ್ಯಾತ ಖಳನಾಯಕರೇ ತುಂಬಿದ್ದು, ಒಬ್ಬೊಬ್ಬರ ಪಾತ್ರವೂ ಥ್ರಿಲ್ಲಿಂಗ್ ಆಗಿ ಮೂಡಿ ಬಂದಿದ್ದು, ಹಿನ್ನೆಲೆ ಸಂಗೀತ ಪ್ರೇಕ್ಷಕರಿಗೆ ಮಜಾ ನೀಡುತ್ತದೆ. ನಿರ್ದೇಶಕರು ಮಾಡಿಕೊಂಡ ಪ್ಲ್ಯಾನಿಂಗ್ ಪಕ್ಕಾ ವರ್ಕೌಟ್ ಆಗಿದೆ ಎಂದು ಹೇಳಬಹುದು. ಅವರು ಒಂದಿಷ್ಟು ಟ್ವಿಸ್ಟ್ ಗಳ ಮೂಲಕ ಕಥೆಯನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ.

ಚಿತ್ರದಲ್ಲಿ ಭೇಟೆಗಾರನೇ ಭೇಟೆಯಾಗುವ ಕಥೆಯಿದೆ. ಹೊಸ ವರ್ಷದ ಸೆಲೆಬ್ರೇಷನ್ ವೇಳೆ ಫಾರ್ಮ್ ಹೌಸ್ ಕೋಣೆಯೊಂದರಲ್ಲಿ ವಿಲನ್ ಧಮೇಂದ್ರನ ಪ್ಲಾನ್ ನಂತೆ ಯುವತಿಯೊಬ್ಬಳು ಒಂದು ಕೊಲೆ ಮಾಡ್ತಾಳೆ.. ಮತ್ತೊಂದು ಕೋಣೆಯಲ್ಲಿದ್ದ ರಶ್ಮಿ ಆ ಕೊಲೆಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಾಳೆ.. ಆ ಸಾಕ್ಷಿ ನಾಶಪಡಿಸುವುದಕ್ಕೆ ಧಮೇಂದ್ರ ಹಾಗೂ ಗ್ಯಾಂಗ್ ರಶ್ಮಿ ಮತ್ತು ಆಕೆಯ ಪ್ರಿಯಕರ ಆದಿತ್ಯನ ಹಿಂದೆ ಬೀಳುತ್ತಾರೆ.. ಹಾಗಾದರೆ ಕೊಲೆಯಾಗಿದ್ದು ಯಾರು..? ತನ್ನ ಪ್ರಿಯತಮೆಯನ್ನು ಉಳಿಸಿಕೊಳ್ಳುವುದಕ್ಕೆ ಆದಿತ್ಯ ಏನೆಲ್ಲಾ ಸಾಹಸ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ.

ಇಡೀ ಚಿತ್ರದ ಜೀವಾಳವೆಂದರೆ, ನಾಯಕ ಆದಿತ್ಯ ಪಾತ್ರಧಾರಿ ಠಾಕೂರ್ ಅನೂಪ್ ಸಿಂಗ್, ರಶ್ಮಿ ಪಾತ್ರಧಾರಿ ನಾಯಕಿ ಧನ್ಸಿಕಾ, ಕರೀಶ್ಮಾ ಪಾತ್ರದಲ್ಲಿ ತಾನ್ಯಾ ಹೋಪ್ ಮಿಂಚಿದ್ದು, ಉಳಿದಂತೆ ಕಿಶೋರ್, ಕಬೀರ್ ದುಹಾನ್ ಸಿಂಗ್, ಜಿಮ್ ರವಿ, ಶ್ರವಣ್ ರಾಘವೇಂದ್ರ. ಕೃಷ್ಣ ವಂಶೀ ಹಾಗೂ ಹರ್ಷಿಕಾ ಪೂಣಚ್ಚ ಸೇರಿದಂತೆ ಅನೇಕರ ಪಾತ್ರಗಳು ಗಮನ ಸೆಳೆಯುತ್ತವೆ.

ಇನ್ನು ದೇಸಾಯಿಯವರ ಆಯ್ಕೆ ಮಾಡಿಕೊಂಡಿರುವ ಮಡಿಕೇರಿಯ ರಮ್ಯ ತಾಣಗಳು ಹಾಗೂ ಕ್ಯಾಮರಾ ವರ್ಕ್ ಇಷ್ಟವಾಗುತ್ತವೆ. ಚಿತ್ರದಲ್ಲಿ ಘಟಾನುಘಟಿ ಕಲಾವಿದರೇ ನಟಿಸಿದ್ದು, ಎಲ್ಲರ ನಟನೆ ಕೊನೆಯವರೆಗೂ ಕುತೂಹಲ ಮೂಡಿಸುತ್ತವೆ. ಇನ್ನು ಈ ಚಿತ್ರಕ್ಕೆ ಅತಿ ದೊಡ್ಡ ಶಕ್ತಿ ಎಂದರೆ ತಾಂತ್ರಿಕ ವರ್ಗ, ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ. ಅದಕ್ಕೆ ತಕ್ಕಂತ ದೇಸಾಯಿ ಅವರ ಸ್ಕ್ರೀನ್ ಪ್ಲೇ ಅದ್ಭುತವಾಗಿ ಮೂಡಿಬಂದಿದೆ.

ಒಟ್ಟಾರೇ, ಹೇಳುವುದಾರೇ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ಇಷ್ಟ ಪಡುವರಿಗೆ ಇದು ಒಳ್ಳೆಯ ಪ್ಯಾಕೇಜ್ ಯಾಗಿದ್ದು, ಚಿತ್ರದಲ್ಲೂ ಸ್ವಲ್ಪ ಕ್ರೌರ್ಯತೆಯೂ ಜಾಸ್ತಿ ಅನಿಸುತ್ತದೆ. ಇನ್ನು ಸಾಮಾನ್ಯವಾಗಿ ಪ್ರೀತಿ-ಪ್ರೇಮದ ಸಿನಿಮಾ ನೋಡಿದವರಿಗೆ ಈ ಸಿನಿಮಾ ವಿಶೇಷತೆ ಎನಿಸುತ್ತದೆ.

‘ಕವಚ’ದಲ್ಲೀಗ‘ ಹೊಸ ಬೆಳಕು ಮೂಡುತ್ತಿದೆ…

#udharsha, #filmnews, #review, #balkaninews #kannadasuddigalu, #sunilkumardesai, #tanyahope, #takuranoopsingh,

Tags