ಸುದ್ದಿಗಳು

90 ರ ದಶಕದ ಸೂಪರ್ ಹಿಟ್ ‘ಉದ್ಭವ’ ಚಿತ್ರದ ಎರಡನೇ ಭಾಗ ತೆರೆಯ ಮೇಲೆ

ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ ಸಿನಿಮಾ

ಬೆಂಗಳೂರು.ಮಾ.14: ಕೋಡ್ಲು ರಾಮಕೃಷ್ಣ ನಿರ್ಮಾಣ ಮತ್ತು ನಿರ್ದೇಶನದ ‘ಉದ್ಭವ’ ಸಿನಿಮಾ 1990 ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಅನಂತ್ ನಾಗ್ ನಾಯಕರಾಗಿದ್ದರು. ಈಗ ಮತ್ತೆ ಇದೇ ಜೋಡಿಯಲ್ಲಿ ಹೊಸ ಚಿತ್ರವೊಂದು ಬರಲು ಸಿದ್ದತೆ ನಡೆಸಿದ್ದು, ಚಿತ್ರಕ್ಕೆ ‘ಮತ್ತೆ ಉದ್ಭವ’ ಎಂದು ಹೆಸರಿಡಲಾಗಿದೆ.

ನಾಯಕರಾಗಿ ಪ್ರಜ್ವಲ್ ದೇವರಾಜ್

‘ಉದ್ಭವ’.. ಇದೊಂದು ಬಿವಿ ವೈಕುಂಠರಾಜು ಅವರ ಕತೆಯನ್ನು ಆಧರಿಸಿದ ಸಿನಿಮಾ. ನಾಗತಿಹಳ್ಳಿ ಚಂದ್ರಶೇಖರ್ ಚಿತ್ರಕತೆ, ಸಂಭಾಷಣೆ ಬರೆದಿದ್ದರು. ಆ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಈಗ ಕೋಡ್ಲು ರಾಮಕೃಷ್ಣ ಆ ಚಿತ್ರದ ಸೀಕ್ವೆಲ್ ಶುರು ಮಾಡಿದ್ದಾರೆ. ‘ಉದ್ಭವ’ ಚಿತ್ರದಲ್ಲಿ ಅನಂತ್‌ ನಾಗ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಒಂದು ಕಲ್ಲಿಗೆ ದೇವರ ರೂಪ ಕೊಟ್ಟು ದೇವರು ಅಂತ ನಂಬಿಸಿ ದೇಗುಲ ಕಟ್ಟಿಜನರು ಬರುವಂತೆ ಮಾಡುವ ಕತೆಯನ್ನು ‘ಉದ್ಭವ’ ಚಿತ್ರ ಒಳಗೊಂಡಿತ್ತು. ಅನಂತ್ ನಾಗ್ ಆ ಪಾತ್ರದಲ್ಲಿ ನಟಿಸಿದ್ದರು. ಇನ್ನು ಈ ಹೊಸ ಚಿತ್ರದಲ್ಲಿ ಅನಂತ್ ನಾಗ್ ಪಾತ್ರದ ಮಗನ ಪಾತ್ರದಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ.

ಇತ್ತೀಚಿಗೆ ನಿರ್ದೇಶಕ ಕೊಡ್ಲು ರಾಮಕೃಷ್ಣ ಅವರ ‘ಮಾರ್ಚ್ 22’ 2017 ರ ರಾಜ್ಯ ಚಲನಚಿತ್ರ ಪ್ರಶಸ್ತಿಯ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತ್ತು. ಜೊತೆಗೆ ಜೆ.ಎಂ. ಪ್ರಹ್ಲಾದ್ ಅವರಿಗೆ ‘ಮುತ್ತು ರತ್ನದ’ ಹಾಡಿಗೆ ಗೀತೆರಚನೆಗೆ ಸಹ ಪ್ರಶಸ್ತಿ ಬಂದಿತ್ತು.

ಈಗ ‘ಮತ್ತೆ ಉದ್ಭವ’ ಚಿತ್ರವು ಶುರುವಾಗುತ್ತಿದ್ದು, ಈ ಚಿತ್ರಕ್ಕೆ ಹಣ ಹೂಡಲು ಮೂವರು ನಿರ್ಮಾಪಕರುಗಳು ಮುಂದೆ ಬಂದಿದ್ದಾರೆ. ಸದ್ಯ ಪ್ರಜ್ವಲ್ ವಿದೇಶದಲ್ಲಿರುವುದರಿಂದ ಅವರು ಸ್ವದೇಶಕ್ಕೆ ಮರಳಿದ ತಕ್ಷಣ ಶೂಟಿಂಗ್ ಶುರುವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಏಳೆಂಟು ಚಿತ್ರಗಳಲ್ಲಿ ಬ್ಯುಸಿಯಾದ ಚಿರು ಸರ್ಜಾ..!!!

#udhbava, #film, #matteudbhava, #balkaninews #filmnews, #kannadasuddigalu, #ananthnag, #prajwaldevaraj

Tags

Related Articles