ಸುದ್ದಿಗಳು

ಹಳೆಯ ಮಧುರ ನೆನಪುಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ…!!!!

‘ತರ್ಲೆ ನನ್ಮಗ’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದ ಉಪ್ಪಿ

ಬೆಂಗಳೂರು, ನ.19: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಕರಾಗುವ ಮುನ್ನ ನಟ-ನಿರ್ದೇಶಕ ಕಾಶೀನಾಥ್ ಕ್ಯಾಂಫ್ ನಲ್ಲಿದ್ದರು. ಆಗ ಚಿತ್ರಗಳಿಗೆ ಹಾಡು, ಸಂಭಾಷಣೆ ಬರೆಯುತ್ತಿದ್ದ ಅವರು ‘ತರ್ಲೆ ನನ್ಮಗ’ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ಧರಿಸಿದರು. ಇದು ಜಗ್ಗೇಶ್ ಗೂ ನಾಯಕನಟರಾಗಿ ಮೊದಲ ಚಿತ್ರವಾಗಿತ್ತು.

ಮಧುರ ನೆನಪು ಹಂಚಿಕೊಂಡ ಉಪ್ಪಿ

ಅಂದು ಬರೀ ನಿರ್ದೇಶಕರಾಗಿದ್ದ ಉಪೇಂದ್ರ ಇಂದು ಪ್ರಸಿದ್ದ ನಟರಾಗಿದ್ದಾರೆ. ಆಗಾಗ ಸಿನಿಮಾ ನಿರ್ದೇಶನವನ್ನೂ ಮಾಡುತ್ತಿರುತ್ತಾರೆ. ಅವರು ಡೈರೆಕ್ಷನ್ ಮಾಡಿದ ಸಿನಿಮಾಗಳು ಕಡಿಮಯಿದ್ದರೂ ಸಹ ಬಾಕ್ಸ್ ಬಾರೀ ಜನ ಮೆಚ್ಚುಗೆ ಗಳಿಸಿವೆ. ಅಂತಹುದೇ ಚಿತ್ರಗಳಲ್ಲಿ ‘ತರ್ಲೆ ನನ್ಮಗ’ ಚಿತ್ರವೂ ಸಹ ಒಂದು. ಇದು ಇವರ ಮೊದಲ ನಿರ್ದೇಶನದ ಸಿನಿಮಾ.

‘ಪ್ರೀತ್ಸೆ’ ಫೋಟೋ ಶೂಟ್

ಇದರೊಂದಿಗೆ ಉಪೇಂದ್ರ ತಾವು ನಾಯಕರಾಗಿ ಅಭಿನಯಿಸಿದ ‘ಪ್ರೀತ್ಸೆ’ ಚಿತ್ರದ ಫೋಟೋ ಶೂಟ್ ವೇಳೆ ತೆಗೆದ ಫೋಟೋವೊಂದನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಮೂಲಕ ತಮ್ಮ ಹಳೆಯ ಚಿತ್ರಗಳ ಮಧುರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಅವರು ಬರೀ ನಾಯಕರಾಗಿ ಮಾತ್ರ ನಟಿಸಿದ್ದರು. ಇವರೊಂದಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿದ್ದರು. ಸೋನಾಲಿ ಬೇಂದ್ರೆ ನಾಯಕಿಯಾಗಿದ್ದರು.

ಮುಂದಿನ ವರ್ಷ ನಿರ್ದೇಶನದ ಚಿತ್ರ

ನಿನ್ನೆಯಷ್ಟೇ ಉಪ್ಪಿ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದರು. ಇತ್ತಿಚೆಗೆ ಅಭಿಮಾನಿಗಳು, ನಿಮ್ಮನ್ನು ನಾವು ಮಿಸ್ ಮಾಡಿಕೊಳ‍್ಳುತ್ತಿದ್ದೇವೆ. ನೀವು ಪ್ರಜಾಕೀಯದಲ್ಲಿ ಸಂಪೂರ್ಣವಾಗಿ ಮುಳುಗಿದ್ದೀರಿ. ನಿಮ್ಮ ನಿರ್ದೇಶನದ ಸಿನಿಮಾ ಯಾವಾಗ…? ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಅವರು ಮಾತನಾಡಿ, “ಮುಂದಿನ ವರ್ಷ ನನ್ನ ನಿರ್ದೇಶನದ ಸಿನಿಮಾ ಶುರುವಾಗಲಿದೆ. ಇನ್ನು ‘ಐ ಲವ್ ಯೂ’ ನಲ್ಲಿ ಹಳೆಯ ಉಪ್ಪಿಯನ್ನು ಕಾಣಬಹುದು” ಎಂದರು.

Tags

Related Articles