ಸುದ್ದಿಗಳು

ಬಿಜೆಪಿ ಗೆಲುವಿಗೆ ಉಪೇಂದ್ರ ಫುಲ್ ಖುಷ್!!

ಈಗೇನಿದ್ದರೂ ಎಲ್ಲರ ಕಣ್ಣು ಫಲಿತಾಂಶದ ಕಡೆಗೆ. ಬಿಜೆಪಿ ಗೆದ್ದಿದ್ದೂ ಆಯ್ತು. ಆದರೆ ಭಾರತೀಯ ಜನತಾ ಪಾರ್ಟಿ ಸರಳ ಬಹುಮತ ಪಡೆದು ಸರ್ಕಾರ ರಚನೆ ಮಾಡಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ ಈಗ ಕುರ್ಚಿ ಭಾಗ್ಯ ಯಾರಿಗೆ ಎಂಬುದೇ ದೊಡ್ಡ ಪ್ರಶ್ನೆಯಾದರೂ ಒಂದೆಡೆ ಮತ್ತೆ ಕಮಲ ಅರಳಬಹುದು ಎಂಬ ಆಸೆ. ಈ ನಡುವೆ ಕೆಪಿಜೆಪಿ ಪಕ್ಷದಿಂದ ಹೊರಬಂದು ಕರ್ನಾಟಕ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದ ನಟ ಉಪೇಂದ್ರ ಟ್ವೀಟ್ ಮೂಲಕ ಬಿಜೆಪಿಗೆ ಶುಭಕೋರಿದ್ದಾರೆ.

ಮೊದಲಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರ ಆದರ್ಶಗಳಿಗೆ ಮತ್ತು ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿರುವ ಉಪೇಂದ್ರ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿರುವ ವಿಜಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *