ಸುದ್ದಿಗಳು

ಈ ನಟಿಗೆ ಹಬ್ಬದ ಸಮಯದಲ್ಲಿ ಏನಾದರೂ ಗಿಫ್ಟ್ ಕೊಡುತ್ತಾರಂತೆ ರಿಯಲ್ ಸ್ಟಾರ್ ಉಪ್ಪಿ…

ಬೆಂಗಳೂರು,ಆ.23: ವರಮಹಾಲಕ್ಷ್ಮಿ` ಹಬ್ಬವನ್ನು ಯಾರು ತಾನೆ ತಪ್ಪಿಸಿಕೊಳ್ಳಲು ಸಾಧ್ಯ ನೀವೇ ಹೇಳಿ… ಅದರಲ್ಲೂ ಸಿನಿಮಂದಿ ಈ ಹಬ್ಬವನ್ನು ಸಖತ್ ಜೋರಾಗಿ ಆಚರಿಸುತ್ತಾರೆ.. ಪ್ರಿಯಾಂಕ ಉಪೇಂದ್ರ ಕೂಡ ಇದಕ್ಕೆ ಹೋರತೇನಲ್ಲ. ‘ಧವನಂ ಜ್ಯುವೆಲ್ಲರ್ಸ್’ ನ ಹಬ್ಬದ ರಿಯಾಯಿತಿ ಶೋ ಉದ್ಘಾಟಿಸಿದ ಪ್ರಿಯಾಂಕ ಉಪೇಂದ್ರ ತಾವು ಹೇಗೆ ಹಬ್ಬ ಆಚರಿಸುತ್ತಾರೆ ಎನ್ನುವ ಮಾಹಿತಿ ನೀಡಿದ್ದಾರೆ.

ಲಕ್ಷ್ಮಿ ಹಬ್ಬ..

ಪ್ರತಿವರ್ಷ ಹಬ್ಬದಲ್ಲಿ ಲಕ್ಷ್ಮಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡೋ ಪ್ರಿಯಾಂಕ ಗೆ ಅವರ ರುಚಿ ಅರಿತಿರೋ ಅವರ ಪತಿ ಉಪೇಂದ್ರ ಯಾವುದಾದರೂ  ಒಡವೆಯನ್ನು ಪ್ರೀತಿಯಿಂದ ಗಿಫ್ಟ್ ಮಾಡುತ್ತಾರಂತೆ. ವಸ್ತು ಚಿಕ್ಕದೋ ದೊಡ್ಡದೋ ಅನ್ನೋ ಮಾತು ಆ ಸಂಧರ್ಭದಲ್ಲಿ ಮುಖ್ಯವಾಗಲ್ಲ ಅವರ ಪ್ರೀತಿಯಷ್ಟೆ ಇಲ್ಲಿ ಕಾಣಿಸೋದು ಅಂತಾರೆ ಪ್ರಿಯಾಂಕ ಉಪೇಂದ್ರ. ಇನ್ನೂ ಹಬ್ಬದ ಬಗ್ಗೆ ಮಾತನಾಡಿದ ಅವರು ಈಗಾಗಲೇ ಹಬ್ಬದ ಸಲುವಾಗಿ ಶಾಪಿಂಗ್ ಮುಗಿದಿದ್ದು ಹಬ್ಬದ ತಯಾರಿ ಜೋರಾಗಿದೆ ಅಂದಿದ್ದಾರೆ.

 

Tags