ಸುದ್ದಿಗಳು

ಕ್ರಿಕೆಟರ್ ಆದ ಉಪ್ಪಿ..!!!

ಚಿತ್ರೀಕರಣದ ಹಂತದಲ್ಲಿರುವ ಉಪೇಂದ್ರ , ರಚಿತಾ ರಾಮ್ ಅಭಿನಯಿಸುತ್ತಿರುವ “ಐ ಲವ್ ಯೂ” ಚಿತ್ರವು ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ.

ಬೆಂಗಳೂರು, ಆ. 07: ‘ಬ್ರಹ್ಮ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಆರ್. ಚಂದ್ರು ಮತ್ತು ಉಪೇಂದ್ರ “ಐ.ಲವ್.ಯೂ” ಚಿತ್ರದ ಮೂಲಕ ಮತ್ತೆ ಒಂದಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಕ್ರಿಕೆಟರ್ ಆದ ಉಪ್ಪಿ

ಇಂದು ಬೆಳಿಗ್ಗೆ ‘ಐ ಲವ್ ಯೂ’ ಚಿತ್ರದ ವಿಶೇಷ ಪೋಟೋವೊಂದನ್ನು ತಮ್ಮ ಪೇಸ್ಬುಕ್ ಖಾತೆಯ ಮುಖಾಂತರ ನಿರ್ದೇಶಕ ಆರ್. ಚಂದ್ರುರವರು ಹೊರ ಬಿಟ್ಟಿದ್ದಾರೆ. ಚಿತ್ರದಲ್ಲಿ ನಟ ಉಪೇಂದ್ರ ಕ್ರಿಕೆಟ್ ಆಟವನ್ನೂ ಆಡುತ್ತಾರಂತೆ. ಇದರೊಂದಿಗೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಟಿ ರಚಿತಾ ರಾಮ್ ಕ್ರಿಕೆಟ್ ಆಡುತ್ತಿರುವ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಯಶಸ್ವಿ ನಿರ್ದೇಶಕ

ನಿರ್ದೇಶಕ ಆರ್. ಚಂದ್ರುರವರು ಈಗಾಗಲೇ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ತಾಜ್ ಮಹಲ್’ , ‘ಮೈಲಾರಿ’, ‘ಪ್ರೇಮ್ ಕಹಾನಿ’, ‘ಚಾರ್ ಮಿನಾರ್’, ‘ಬ್ರಹ್ಮ’, ‘ಕನಕ’ ಚಿತ್ರಗಳಿಂದ ಕರ್ನಾಟಕದ  ಸಿನಿ ಪ್ರೇಮಿಗಳ ಮೆಚ್ಚಿನ ನಿರ್ದೇಶಕ ಎನಿಸಿಕೊಂಡಿದ್ದಾರೆ. ಇದೀಗ ‘ಐ.ಲವ್.ಯೂ’ ಎಂಬ ಪ್ರೇಮಮಯ ಚಿತ್ರವನ್ನು ಮಾಡುತ್ತಿದ್ದಾರೆ. ಅದರೊಂದಿಗೆ ‘ಎ’ ಮತ್ತು ‘ಉಪೇಂದ್ರ’ ಚಿತ್ರಗಳ ಉಪೇಂದ್ರರನ್ನು ಈ ಚಿತ್ರದಲ್ಲಿ ಕಾಣಬಹುದಂತೆ.

ಮೂರು ವಿಭಿನ್ನ ಬಗೆಯ ಪಾತ್ರಗಳಲ್ಲಿ ಉಪೇಂದ್ರ

ಚಿತ್ರದ ಮತ್ತೊಂದು ವಿಶೇಷವೆಂದರೆ ನಟ ಉಪೇಂದ್ರರವರು ಈ ಚಿತ್ರದಲ್ಲಿ ಮೂರು ವಿಭಿನ್ನ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಕಾಲೇಜು ವಿದ್ಯಾರ್ಥಿಯಾಗಿ, ಸಾಮಾಜಿಕ ಕೆಲಸಗಾರನಾಗಿ, ರೌಡಿ, ಪ್ರೇಮಿಯಾಗಿ, ಕ್ರಿಕೇಟರ್ ಆಗಿ ಕಾಣಿಸಿಕೊಳ್ಳಲಿದ್ದು ಅದೇ ಹಳೆಯ ಹೇರ್ ಸ್ಟೈಲ್ ನಲ್ಲಿ ಉಪೇಂದ್ರ ಮಿಂಚಲಿದ್ದಾರೆ.

 

@ sunil Javali

Tags

Related Articles