ಸುದ್ದಿಗಳು

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಬಿಡುಗಡೆಯಾಯ್ತು ‘ಐ ಲವ್ ಯು’ ರೊಮ್ಯಾಂಟಿಕ್ ಹಾಡು

ಬೆಂಗಳೂರು, ಫೆ.14:

ಉಪ್ಪಿ ‘ಐ ಲವ್ ಯು’ ಸಿನಿಮಾ ಈಗಾಗಲೇ ಹಲವಾರು ವಿಚಾರಗಳಿಂದ ಸದ್ದು ಮಾಡಿದ ಸಿನಿಮಾ. ಈಗಾಗಲೇ ಆಡಿಯೋ ಲಾಂಚ್ ಮಾಡಿರುವ ಈ ಸಿನಿಮಾ ಇದೀಗ ಪ್ರೇಮಿಗಳ ದಿನಕ್ಕೊಂದು ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡಿದೆ.  ಪೋಸ್ಟರ್ ಗಳಿಂದಲೇ ಸುದ್ದಿಯಾಗಿದ್ದ ಈ ಸಿನಿಮಾ ಇದೀಗ ಈ ಹಾಡಿನ ಮೂಲಕ ಮತ್ತೆ ಅಭಿಮಾನಿಗಳ ಮನಸ್ಸಲ್ಲಿ ಉಪ್ಪಿಯ ಪ್ರೀತಿ ಹುಟ್ಟಿಸಿದೆ.

ರೊಮ್ಯಾಂಟಿಕ್ ಹಾಡು ಬಿಡುಗಡೆ

ಹೌದು, ಮಾತನಾಡಿ ಮಾಯವಾದೆ ಎನ್ನುವ ಲಿರಿಕಲ್ ಹಾಡು ಇದೀಗ ಯುಟ್ಯೂಬ್‌ ನಲ್ಲಿ ಸದ್ದು ಮಾಡುತ್ತಿದೆ. ಅರ್ಮನ್ ಮಲ್ಲಿಕ್ ಧ್ವನಿಯಲ್ಲಿ ಮೂಡಿ ಬಂದ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ ಡಾ.ಕಿರಣ್, ಇನ್ನು ಸಾಹಿತ್ಯ ಬರೆದಿದ್ದಾರೆ ಸಂತೋಶ್ ನಾಯ್ಕ್, ಇನ್ನು ಈ ಹಾಡಿನಲ್ಲಿ ಉಪೇಂದ್ರ ಹಾಗೂ ರಚಿತರಾಮ್ ಕೆಮಿಸ್ಟ್ರಿ ಸೂಪರ್ ಆಗಿ ಮೂಡಿ ಬಂದಿದೆ. ಹಳೇ ಲುಕ್‌ ನಲ್ಲಿ ಉಪ್ಪಿ ಮಿಂಚಿದ್ದಾರೆ.

ಆರ್ ಚಂದ್ರು ನಿರ್ದೇಶನದ ಸಿನಿಮಾ

ಇನ್ನು ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾಗೆ ಆನಂದ್ ಆಡಿಯೋ ಸಂಸ್ಥೆ ಹಕ್ಕು ಪಡೆದಿದೆ. ಪೋಸ್ಟರ್‌ ಗಳಿಂದಲೇ ಬಹಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಸದ್ಯ ವಿಭಿನ್ನವಾಗಿ ಮೂಡಿ ಬಂದಿರುವ ಈ ಸಿನಿಮಾಗಾಗಿ ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ. ಅಷ್ಟೇ ಅಲ್ಲ ಅನೇಕ ಮಂದಿ ಉಪ್ಪಿಯ ಹಳೆಯ ಹಾಗೂ ಹೊಸ ಅವತಾರಕ್ಕೆ ಕಾದಿದ್ದಾರೆ.

‘ರುಸ್ತುಂ’ ಸೆಟ್ ನಲ್ಲಿ ಡಿಂಪಲ್ ಕ್ವೀನ್

#sandalwood #kannadamovies #balkaninews #rchandru #upendra #upendraandrachitharam #iloveyousongs

 

Tags