ಸುದ್ದಿಗಳು

ಉಪೇಂದ್ರ ನನಗೆ ಗಾಡ್ ಫಾದರ್ ಇದ್ದಂತೆ: ನಟ ‘ದುನಿಯಾ’ ವಿಜಯ್

‘ದುನಿಯಾ’ ಚಿತ್ರದ ಮೂಲಕ ನಾಯಕನಟರಾಗಿ ಎಂಟ್ರಿ ಕೊಟ್ಟ ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು 46ನೇ ವಸಂತಕ್ಕೆ ಕಾಲಿಟ್ಟಿರುವ ಅವರಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಸಹ ಶುಭ ಹಾರೈಸಿದ್ದಾರೆ. ವಿಶೇಷವೆಂದರೆ ಇವರ ಜನ್ಮದಿನ ಪ್ರಯುಕ್ತ ‘ಸಲಗ’ ಚಿತ್ರದ ಟೀಸರ್ ಅನ್ನು ನಟ ಉಪೇಂದ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ವಿಜಯ್, ‘ರೌಡಿಸಂ ಚಿತ್ರಗಳಿಗೆ ಓಂಕಾರ ಹಾಕಿದವರು ಉಪೇಂದ್ರ. ಈಗಲೂ ‘ಓಂ’ ಚಿತ್ರದ ಓಪನಿಂಗ್ ಸೀನ್ ನೋಡಿದರೆ ಮೈಂ ಜುಮ್ ಎನಿಸುತ್ತದೆ. ಅವರು ನನಗೆ ಗಾಡ್ ಫಾದರ್’ ಎಂದು ವಿಜಯ್ ಹೇಳಿದರು.

‘ಯಾರೇ ಅಂಡರ್ ವರ್ಲ್ಡ್ ಸಿನಿಮಾ ಮಾಡಿದರೂ ‘ಓಂ’ ಸಿನಿಮಾ ನೋಡಿಯೇ ಮಾಡಬೇಕು. ಅಂದು ಎಪಿಎಸ್ ಕಾಲೇಜಿನಲ್ಲಿ ಇರುವಾಗಲೇ ನಾನು ಅವರನ್ನು ನೋಡಿಕೊಂಡು ಬಂದಿದ್ದೇನೆ. ಅಂದು ಕಾಲೇಜಿನಲ್ಲಿ ಅವರು ಡೈಲಾಗ್ ಬರೆಯುವುದನ್ನು ಕಣ್ಣಾರೆ ನೋಡಿದ್ದೇನೆ. ನಾನು ಜೀವನದಲ್ಲಿ ಎದ್ದು ಬರಲು ಅವರೇ ಸ್ಫೂರ್ತಿ. ಅವರ ‘ಎ’, ‘ಓಂ’, ಸ್ವಸ್ತಿಕ್’ ಚಿತ್ರಗಳನ್ನು ನನ್ನ ಜೀವನದಲ್ಲಿ ಪರಿಣಾಮ ಮತ್ತು ಸ್ಪೂರ್ತಿ ನೀಡಿವೆ’  ಎಂದು ವಿಜಯ್, ಉಪೇಂದ್ರರ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.

ಡಿ-ಬಾಸ್ ಬರ್ತಡೇ: ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ದರ್ಶನ್

#Upendra #Salaga #SalagaTeaser #DuniyaVijay #DuniyaVijayBirthday #KannadaSuddigalu

Tags