ಸುದ್ದಿಗಳು

ತಮ್ಮ ಅತ್ತೆಯ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪ್ರಿಯಾಂಕ ಉಪೇಂದ್ರ

ಬೆಂಗಳೂರು, ಮೇ.22:

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ. ತಮ್ಮ ಮನೋಜ್ಞ ಅಭಿನಯದ ಮೂಲಕ ಚಂದನವನದಲ್ಲಿ ಹೆಸರು ಮಾಡಿರುವ ಇವರಿಗೆ ತಮ್ಮ ತಂದೆ ತಾಯಿ ಎಂದರೇ ಎಲ್ಲಿಲ್ಲದ ಪ್ರೀತಿ ಗೌರವ. ಹೌದು, ನಾವು ಎಷ್ಟೇ ಎತ್ತರಕ್ಕೆ ಬೆಳದರೂ ಸಾಕಿ ಬೆಳೆಸಿದ ಪೋಷಕರನ್ನು ಎಂದಿಗೂ ಕಡೆಗಣಿಸಿಬಾರದು ಎನ್ನುವ ಉಪೇಂದ್ರರವರು ತಮ್ಮ ತಾಯಿಯನ್ನು ತುಂಬಾ ಪ್ರೀತಿಸುತ್ತಾರೆ. ಯಾವುದೇ ಕಾರ್ಯಕ್ರಮಗಳಿರಲಿ ನಮ್ಮ ತಂದೆ ತಾಯಿಯನ್ನು ಕರೆದುಕೊಂಡು ಹೋಗುತ್ತಾರೆ. ಇಷ್ಟೇ ಅಲ್ಲದೇ ಮಡದಿ ಪ್ರಿಯಾಂಕ ಸಹ ತಮ್ಮ ಅತ್ತೆಯನ್ನು ಗೌರವ, ಪ್ರೀತಿ ಕಾಳಜಿಯಿಂದ ಕಾಣುತ್ತಾರೆ. ಇದೀಗ ಇದೇ ಸಮಯದಲ್ಲಿ ಪ್ರಿಯಾಂಕ ತಮ್ಮ ಅತ್ತೆಯ ಜನ್ಮದಿನವನ್ನು ಕುಟುಂಬದವರೊಟ್ಟಿಗೆ ಆಚರಣೆ ಮಾಡಿದ್ದಾರೆ.

ಹೌದು, ಉಪೇಂದ್ರರವರ ತಾಯಿ ಅನುಸೂಯರವರ ಹುಟ್ಟುಹಬ್ಬ ನಿನ್ನೇಯಷ್ಟೇ ಮೇ 21ರಂದು ನಡೆದಿದೆ. ಈ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕ ಉಪೇಂದ್ರ ಹಾಗೂ ಅವರ ಮಕ್ಕಳು, ಕುಟುಂಬದವರು ಜೊತೆ ಸೇರಿ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ. ವಿಶೇಷವೆಂದರೆ ಈ ಹುಟ್ಟುಹಬ್ಬವನ್ನು ಉಪೇಂದ್ರ ಮಡದಿ ಪ್ರಿಯಾಂಕ ಉಪೇಂದ್ರ ಆಚರಿಸುವುದು ಖುಷಿಯ ಸಂಗತಿ. ತಮ್ಮ ಅತ್ತೆ ಮಾವನನ್ನು, ತಂದೆ ತಾಯಿಯಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಅತ್ತೆ ಸೊಸೆ ಎಂದರೇ ಈ ರೀತಿ ಇರಬೇಕೆಂದು  ಸಮಾಜದಲ್ಲಿ ಮಾದರಿಯಾಗುತ್ತಿದ್ದಾರೆ. ಇಷ್ಟೇ ಅಲ್ಲದೇ ಅಭಿಮಾನಿಗಳು ಸಹ ಮನೆಯ ಮುಂದೆ ಬಂದು ಕೇಕ್ ಕಟ್ ಮಾಡಿದ್ದಾರೆ. ಈ ಸಂಭ್ರಮದ ಕ್ಷಣಗಳನ್ನು ಪ್ರಿಯಾಂಕ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Image may contain: food

Image may contain: 9 people, people smiling, people standing and outdoor

Image may contain: 4 people, people smiling, people standing and night

Image may contain: 11 people, people smiling, people standing and indoor

Image may contain: 7 people, people smiling, people standing

ತಮನ್ನಾ ಡ್ಯಾನ್ಸ್ ನೋಡಿ ದಂಗಾಗಿ ಬಿಟ್ಟರಾ ಪ್ರಭುದೇವ..!

#priyankaupendra #balkaninews #sandalwood #upendrafatherandmother

Tags