ಸುದ್ದಿಗಳು

ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತ ಬಗ್ಗೆ ನಟ ಉಪೇಂದ್ರ ಹೇಳಿಕೆ…!!!

ಬೆಂಗಳೂರು, ಏ.16:

ಸದ್ಯ ನಟ ಉಪೇಂದ್ರ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ಹೊಂದಿರುವ ನಟ ಉಪೇಂದ್ರ ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿಯೂ ಪ್ರಚಾರ ಮುಂದುವೆರೆಸಿದ್ದಾರೆ ಈ ನಟ. ಇನ್ನೂ ಪ್ರಚಾರದಲ್ಲಿ ಭಾಗಿಯಾಗಿದ್ದ ಉಪೇಂದ್ರ ಸುಮಲತ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ.

ಚುನಾವಣೆಯಿಂದ ಅವರಿಗೆ ಒಳ್ಳೆಯದಾಗುತ್ತೆ

ಕೊಪ್ಪಳದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ರೆಬಲ್ ಸ್ಟಾರ್ ಅಂಬರೀಶ ನನ್ನ ಅಣ್ಣ, ಸುಮಲತಾ ಅಂಬರಿಶ್ ನನಗೆ ಅತ್ತಿಗೆ ಇದ್ದ ಹಾಗೆ ಅವರ ಮೇಲೆ ಅಪಾರ ಗೌರವವನ್ನು ಹೊಂದಿದ್ದೇನೆ. ಅವರಿಗೆ ಚುನಾವಣೆಯಲ್ಲಿ ಒಳ್ಳೆದಾಗುತ್ತೆ. ಇನ್ನೂ ಅಭ್ಯರ್ಥಿ ಪರ ಮಾತನಾಡಿರುವ ಅವರು, ನಾನು ನಟನಾಗಿ ಮತ ಕೇಳ್ತಾ ಇಲ್ಲ, ನಟನಾಗಿ ಓಟು ಕೇಳಿದರೆ ನಿವೇಲ್ಲಾ ನಗುತ್ತೀರಾ. ಒಳ್ಳೆಯ ವಿಚಾರಗಳಿಗೆ ಮತ ಹಾಕಿ ಎಂದು ಕೇಳ್ತಾ ಇದೀನಿ ಎಂದ್ರು. ಇನ್ನೂ ಇದೇ ಸಂದರ್ಭದಲ್ಲಿ ತಮ್ಮ ಪಕ್ಷದ ಬಗ್ಗೆ ಮಾತನಾಡಿರುವ ಅವರು, ಸುಂದರವಾದ ಕಲ್ಪನೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷ ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

#ಮಿಟೂ ಬಳಿಕ ಮದುವೆಯ ಫೋಟೋಗಳನ್ನು ರಿವಿಲ್ ಮಾಡಿದ ಸಂಗೀತಾ ಭಟ್

#balkaninews #sandalwood #sandalwoodmovies #upendra #upendramovies #sumalatha #sumalathapolitics

Tags