ಸುದ್ದಿಗಳು

ಉಪ್ಪಿಯ ಸಿನಿಮಾ ಶೂಟಿಂಗ್ ಆಚಾರ್ಯ ಕಾಲೇಜಿನಲ್ಲಿ…

ಉಪ್ಪಿ ಐ ಲವ್ ಯು’ ಸಿನಿಮಾ

ಬೆಂಗಳೂರು,ಅ.11: ಉಪೇಂದ್ರ ನಟನೆಯ ‘ಉಪ್ಪಿ ಐ ಲವ್ ಯು’ ಸಿನಿಮಾ ಚಿತ್ರೀಕರಣ ಇದೀಗ ಭರದಿಂದ ಸಾಗುತ್ತಿದೆ. ಇದೀಗ ಈ ಸಿನಿಮಾದ ಶೂಟಿಂಗ್ ಬೆಂಗಳೂರಿನ ಒಂದು ಕಾಲೇಜಿನಲ್ಲಿ ನಡೆದಿದೆ.

ಬೆಂಗಳೂರಲ್ಲಿ ಫೈಟ್ ದೃಶ್ಯ ಚಿತ್ರೀಕರಣ

ಆರ್.ಚಂದ್ರು ಹಾಗೂ ಉಪೇಂದ್ರ ಅವರ ಜೋಡಿಯ ಸಿನಿಮಾಗಳು ಅಂದರೆ ಏನಾದರೂ ವಿಶೇಷತೆ ಇದ್ದೇ ಇರುತ್ತೆ‌. ಯಾಕಂದರೆ ವಿಭಿನ್ನವಾಗಿ ಸಿನಿಮಾಗಳನ್ನು ತಯಾರಿಸಿರುತ್ತಾರೆ. ಅಷ್ಟೆ ಅಲ್ಲ ಆ ಸಿನಿಮಾದ ಶೀರ್ಷಿಕೆ ಕೂಡ ವಿಭಿನ್ನವಾಗಿಯೇ ಇರುತ್ತವೆ. ಇದೀಗ ‘ಉಪ್ಪಿ ಐ ಲವ್ ಯು’ ಸಿನಿಮಾ ಕೂಡ ಒಂದು ವಿಭಿನ್ನತೆಯಿಂದ ಕೂಡಿದೆ.

ಲವ್ ಯು ಸಿನಿಮಾದಲ್ಲಿ ಉಪ್ಪಿ ಬ್ಯುಸಿ

ಉಪೇಂದ್ರ ಸದ್ಯ ಸಿನಿಮಾದ ಜೊತೆಗೆ ರಾಜಕೀಯ ರಂಗದಲ್ಲೂ ಕ್ರಿಯಾಶೀಲರಾಗಿದ್ದಾರೆ. ಇತ್ತೀಚಿಗಷ್ಟೆ ಈ ತಮ್ಮ ಪಕ್ಷವನ್ನು ಲೋಕಾರ್ಪಣೆ ಮಾಡಿದರು. ರಾಜಕೀಯ ಕಾರ್ಯದ ಜೊತೆಗೆ ಇದೀಗ ಸಿನಿಮಾದಲ್ಲು ತೊಡಗಿದ್ದಾರೆ. ಸದ್ಯ ಅವರ ಸಿನಿಮಾ ‘ಉಪ್ಪಿ ಐ ಲವ್ ಯು’ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಇದೀಗ ಈ ಸಿನಿಮಾದ ಫೈಟಿಂಗ್ ಸೀನ್ ಒಂದನ್ನು ಬೆಂಗಳೂರಿನ ಆಚಾರ್ಯ ಕಾಲೇಜಿ‌ನಲ್ಲಿ ನಡೆಸಲಾಗಿದೆ.

ಫೈಟಿಂಗ್ ದೃಶ್ಯ ಕಣ್ತುಂಬಿಕೊಂಡ ಅಭಿಮಾನಿಗಳು

ಆಚಾರ್ಯ ಕಾಲೇಜ್ ,ಮೈದಾನದಲ್ಲಿ’ ಐ ಲವ್ ಯೂ’ ಸಿನಿಮಾ ಫೈಟಿಂಗ್ ದೃಶ್ಯ ಚಿತ್ರೀಕರಣ ನಿನ್ನೆ ನೆರವೇರಿತು. ಫೈಟ್ ಮಾಸ್ಟರ್ ಗಣೇಶ್  ನೇತೃತ್ವದಲ್ಲಿ ಫೈಟಿಂಗ್ ಸೀನ್ ಚಿತ್ರೀಕರಣ ಮಾಡಲಾಯಿತು. ಇನ್ನು ಈ ಸಿನಿಮಾದಲ್ಲಿ ಖಳ ನಾಯಕನಾಗಿ  ನಗರ ನಾಗರಾಜು ಅಭಿನಯ ಮಾಡುತ್ತಿದ್ದಾರೆ. ಇನ್ನು ಉಪ್ಪಿಯ ಫೈಟಿಂಗ್ ಸೀನ್ ಅನ್ನು ಅಭಿಮಾನಿಗಳು, ವಿದ್ಯಾರ್ಥಿಗಳು ಕಣ್ತುಂಬಿಕೊಂಡರು.

 

Tags