ಸುದ್ದಿಗಳು

‘ಉರಿ: ಸರ್ಜಿಕಲ್ ಸ್ಟ್ರೈಕ್’ ಹಿಂದಿಕ್ಕಿದ ‘ಕೆಜಿಎಫ್’

ಬೆಂಗಳೂರು, ಫೆ.11:

‘ಕೆಜಿಎಫ್’ ಸಿನಿಮಾ ಬಗ್ಗೆ ನಾವು ಎಷ್ಟು ಹೇಳಿದರೂ ಕಡಿಮೆಯೇ. ಯಾಕಂದ್ರೆ ಅಭಿಮಾನಿಗಳು ಈ ಸಿನಿಮಾವನ್ನು ವೀಕ್ಷಣೆ ಮಾಡಿದ ಪರಿ, ಥಿಯೇಟರ್‌ ಗಳು ಹೌಸ್ ಫುಲ್ ಆಗಿರೋದನ್ನು ನೋಡ್ತಾ ಇದ್ರೆ ಸಾಕು ಈ ಸಿನಿಮಾದ ಹವಾ ಇನ್ನು ಹೇಗಿದೆ ಅಂತಾ ಗೊತ್ತಾಗುತ್ತದೆ. ಇಂದಿಗೂ ಈ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾ ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕಿದೆ.

ಕೆಜಿಎಫ್ ಮತ್ತೊಂದು ಗರಿ

ಹೌದು, ಕೆಜಿಎಫ್ ಸಿನಿಮಾ ಉರಿ ಸಿನಿಮಾವನ್ನು ಹಿಂದಿಕ್ಕಿದೆಯಂತೆ. ಉರಿ ಸಿನಿಮಾ ಕೂಡ ಪ್ರೇಕ್ಷಕರು ಒಪ್ಪಿದ್ದಾರೆ. ಆದರೆ ಈ ಸಿನಿಮಾ ಇದೀಗ ಕೆಜಿಎಫ್‌ ಗಿಂತ ಹಿಂದೆ ಇದೆಯಂತೆ. ಐಎಂಡಿಬಿಯ ರೇಟಿಂಗ್‌ ನಲ್ಲಿ ಈ ಸಿನಿಮಾ ಉರಿಗಿಂತ ಮುಂದಿದೆ. ಮೊದಲ ಸ್ಥಾನದಲ್ಲಿಯೇ ಕೆಜಿಎಫ್ ಇರೋದ್ರಿಂದ ಮತ್ತೊಂದು ಸಾಧನೆ ಅಂತಾನೆ ಹೇಳಬಹುದು.

24ರಷ್ಟು ಮಂದಿ ಕೆಜಿಎಫ್ ಗೆ ಜೈ

24ರಷ್ಟು ಮಂದಿ ಈ ಸಿನಿಮಾ ಇಷ್ಟಪಟ್ಟರೆ ಇನ್ನುಳಿದಂತೆ 22 ರಷ್ಟು ಮಂದಿ ಉರಿ ಸಿನಿಮಾಗೆ ಜೈ ಎಂದಿದ್ದಾರೆ. ಇನ್ನು ‘ಮಣಿಕರ್ಣಿಕಾ’ ಹಾಗೂ ‘ವಿಶ್ವಾಸಂ’ ಸಿನಿಮಾ ಕೂಡ ಹಿಂದಿಕ್ಕಿದೆ ಕೆಜಿಎಫ್ ಸಿನಿಮಾ. ಇನ್ನು ಕೆಜಿಎಫ್ ಸಿನಿಮಾ ಅಮೇಜಾನ್ ಪ್ರೀಮಿಯರ್ ನಲ್ಲಿ ಬಂದರೂ ಕೂಡ ಅದರ ಹವಾ ಕ್ರೇಜ್ ಇನ್ನು ಕಡಿಮೆಯಾಗಿಲ್ಲ.

‘ಯಜಮಾನ’ ವಿತರಣಾ ಹಕ್ಕಿನ ಹಿಂದಿದ್ದಾರೆ ‘ಕೆಜಿಎಫ್’ ವ್ಯಕ್ತಿ

#sandalwood #kannadamovies #balkaninews #kgfchapter1 #urithesrgicalstrike #yatra #manikarnika

Tags