ಸುದ್ದಿಗಳು

ಕೀಕಿ ಚಾಲೆಂಜ್ ಆಯ್ತು.. ಈಗ ಏನಿದು ಯು-ಟರ್ನ್ ಚಾಲೆಂಜ್..

ಸಮಂತಾ ನಟಿಸಿದ ಯು-ಟರ್ನ್....

ಹೈದರಾಬಾದ್,ಸೆ.10: ಇತ್ತೀಚೆಗೆ  ಚಾಲೆಂಗಳ ಸುರಿಮಳೆಯೇ ಹರಿಯುತ್ತಿದೆ. ಫಿಟ್ನೆಸ್ ಚಾಲೆಂಜ್​, ಗ್ರೀನ್ ಚಾಲೆಂಜ್, ಪ್ಲಾಸ್ಟಿಕ್ ಕಪ್ ಚಾಲೆಂಜ್, ಕೀಕಿ ಚಾಲೆಂಜ್, ಎಳನೀರು ಚಾಲೆಂಜ್…. ಹೀಗೆ ಜನರು ಸಿಕ್ಕಾಪಟ್ಟೆ ಚಾಲೆಂಜ್ ಅನ್ನು ಸ್ವೀಕರಿಸಿ ಅದನ್ನುಸಾಬೀತು ಮಾಡಿದ್ದೂ ಆಯಿತು. ಇದೀಗ ಹೊಸ ಚಾಲೆಂಜ್ ಆವರಿಸಿಕೊಂಡಿದೆ. ಅದೇನು ಅಂತ ಕೇಳುತ್ತೀರಾ? ಅದುವೇ ‘ಯುಟರ್ನ್​ ಡ್ಯಾನ್ಸ್ ಚಾಲೆಂಜ್’ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಏನಿದು ಹೊಸ ಚಾಲೆಂಜ್

ಕನ್ನಡದಲ್ಲಿ ಪವನ್ ಕುಮಾರ್ ನಿರ್ದೇಶಿಸಿದ ‘ಯುಟರ್ನ್​’ ಚಿತ್ರ ತೆಲುಗಿನಲ್ಲಿ ರೀಮೇಕ್ ಆಗಿದ್ದು, ತೆಲುಗಿನಲ್ಲಿ ಕೂಡಾ ಅದೇ ಹೆಸರಿನಲ್ಲಿ ಸಿನಿಮಾ ತಯಾರಾಗಿದೆ. ಈ ಸಿನಿಮಾವನ್ನು ಕೂಡಾ ಪವನ್ ಕುಮಾರ್ ನಿರ್ದೇಶಿಸಿದ್ದರೆ, ಸಮಂತಾ ಅಕ್ಕಿನೇನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಮೋಶನಲ್ ಹಾಡನ್ನು ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ಹಾಡಿದ್ದು, ಅದಕ್ಕೆ ಸಮಂತಾ ಕರ್ಮ ಥೀಮ್ ಡ್ಯಾನ್ಸ್ ಮಾಡಿದ್ದಾರೆ.

ಮಹಿಳೆಯರು, ಮಕ್ಕಳು, ಯುವಕರು, ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಸಮಂತಾ ತಮ್ಮ ಇನ್ಸ್​ಟಾಗ್ರಾಂ​​ನಲ್ಲಿ ಶೇರ್ ಮಾಡಿದ್ದಾರೆ.. ಈ ಚಿತ್ರ ಸೆಪ್ಟೆಂಬರ್ 13 ರಂದು ಬಿಡುಗಡೆಯಾಗುತ್ತಿದೆ.

Tags