ಸುದ್ದಿಗಳು

ಪ್ರೇಮಿಗಳ ದಿನಕ್ಕೆ ಉಡುಗೊರೆ ನೀಡಿದ “ಪಡ್ಡೆಹುಲಿ”

ಬೆಂಗಳೂರು, ಫೆ.12:

ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಸಿನಿಮಾವೇ ‘ಪಡ್ಡೆಹುಲಿ’. ಇನ್ನು ಶ್ರೇಯಸ್ ಗ್ರ್ಯಾಂಡ್ ಆಗಿ ಪಡ್ಡೆ ಹುಲಿಯಾಗಿ ಇಂಟ್ರುಡ್ಯೂಸ್ ಆಗಲು ಬಹಳಷ್ಟು ತಯಾರಿಯನ್ನು ನಡೆಸಿದ್ದು, ಈಗಾಗಲೇ ಈ ಸಿನಿಮಾ ಬಿಡುಗಡೆಗೂ ರೆಡಿಯಾಗಿದೆ. ಅಷ್ಟೇ ಅಲ್ಲ ಹಾಡುಗಳ ಮೂಲಕ ಬಾರೀ ಸದ್ದು ಮಾಡಿದ್ದ ಈ ಸಿನಿಮಾ ಇದೀಗ ಪ್ರೇಮಿಗಳ ದಿನಾಚರಣೆಗೆ ಹಾಡೊಂದನ್ನು ಬಿಡುಗಡೆ ಮಾಡಿದೆ.

ರೊಮ್ಯಾಂಟಿಕ್ ದಿನಕ್ಕೆ ರೊಮ್ಯಾಂಟಿಕ್ ಹಾಡು

ಹೌದು, ಒಂದು ಮಾತಲಿ ನೂರು ಹೇಳಲ ಹಾಡು ಇದೀಗ ಯುಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಪ್ರೇಮಿಗಳ ದಿನಾಚರಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ. ಈ ಬೆನ್ನಲ್ಲೇ ಈ ಸಿನಿಮಾ ಪ್ರೇಮಿಗಳಿಗೆ ಈ ಹಾಡನ್ನು ಡೆಡಿಕೇಟ್ ಮಾಡಿದೆ. ಇನ್ನು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ ನಾಗಾರ್ಜುನ್ ಶರ್ಮಾ, ಇನ್ನು ಈ ಹಾಡು ಸರಿಗಮಪ ಸಂಜಿತ್ ಹೆಗ್ಡೆ ಧ್ವನಿಯಲ್ಲಿ ಇರೋದ್ರಿಂದ ಇನ್ನು ಕ್ರೇಜ್ ಹೆಚ್ಚಿಸಿದೆ. ಸದ್ಯ ಬಿಡುಗಡೆಯಾಗಿರುವ ಹಾಡು ಕಂಪ್ಲೀಟ್ ರೊಮ್ಯಾಂಟಿಕ್ ಆಗಿರೋದ್ರಿಂದ ಪ್ರೇಮಿಗಳಿಗೆ ಇಷ್ಟವಾಗಿರೋದಂತೂ ಸತ್ಯ.

ನಟಿಮಣಿಯರಿಂದ ವಿಶ್

ಸದ್ಯ ಈ ಹಾಡನ್ನು ಮೊದಲು ನಟಿಯರಿಗೆ ತೋರಿಸಲಾಗಿದೆ. ರಾಗಿಣಿ, ಕೃಷಿ, ಸಂಜನಾ, ಹರ್ಷಿಕಾ ಪೂಣಚ್ಚ, ಶಾನ್ವಿ ಶ್ರೀವತ್ಸ, ಸೋನುಗೌಡ, ನಭಾ ನಟೇಶ್, ಅಧಿತಿ, ಮೇಘನಾ ಗಾವ್ಕರ್, ಮಾನ್ವಿತಾ ಹರೀಶ್ ಈ ಹಾಡಿಗೆ ಇಂಪ್ರೆಸ್ ಆಗಿದ್ದಾರೆ. ಹಾಡಿನ ಬಗ್ಗೆ ತಮ್ಮದೇ ಆದ ಮಾತುಗಳನ್ನು ಕೂಡ ಹಾಡಿದ್ದಾರೆ. ಪ್ರೇಮಿಗಳ ದಿನಕ್ಕೆ ಈ ಹಾಡು ತುಂಬಾ ಚೆನ್ನಾಗಿದೆ ಅನ್ನೋ ಮಾತನ್ನು ಕೂಡ ಹೇಳಿದ್ದಾರೆ.

ರಾಕ್ ಸ್ಟಾರ್ ‘ಪಡ್ಡೆಹುಲಿ’

#sandalwood #kannadamovies #balkaninews #shreyasmanju #shreyasmanjumovies #paddehulisongs #shreyasmanjupaddehuli #balkaninews

Tags