ಸುದ್ದಿಗಳು

ಕುರುಡಿ ಪಾತ್ರದಲ್ಲಿ ವರಲಕ್ಷ್ಮಿ

ನಟಿ ವರಲಕ್ಷ್ಮೀ ಶರತ್ಕುಮಾರ್ ಅವರು, 2012ರಲ್ಲಿ ತೆರೆಕಂಡಿದ್ದ ‘ಪೋಡಾ ಪೋಡಿ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ್ದರು. ನಂತರ ತುಂಬ ಕಡಿಮೆ ಅವಧಿಯಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು. ಆನಂತರ ಕನ್ನಡದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ‘ಮಾಣಿಕ್ತ” ಚಿತ್ರದಲ್ಲೂ ನಟಿಸಿ, ಕನ್ನಡಿಗರ ಮನ ಗೆದ್ದಿದ್ದರು.

ಇದೀಗ ವರಲಕ್ಷ್ಮಿಯವರ ನೂತನ ಚಿತ್ರವೊಂದು ಇತ್ತಚೆಗೆ ಸೆಟ್ಟೆರಿದೆ. ಜೆ.ಕೆ ನಿರ್ದೇಶನದ ಈ ಚಿತ್ರದಲ್ಲಿ ಕುರುಡಿ ಪಾತ್ರದಲ್ಲಿ ನಟಿಸುತ್ತಿರುವ ಅವರ ಕೈಯಲ್ಲಿ ಐದಕ್ಕೂ ಹೆಚ್ಚು ಚಿತ್ರಗಳಿವೆ.

“ಇದೇ ಮೊದಲ ಭಾರಿಗೆ ನಾನು ಕುರುಡಿ ಪಾತ್ರದಲ್ಲಿ ನಟಿಸುತ್ತಿದ್ದು, ತುಂಬಾ ಕಾತುರದಲ್ಲಿದ್ದೇನೆ ಹಾಗೂ ಖಂಡಿತ ನಾನು ಈ ಪಾತ್ರಕ್ಕೆ ಜೀವ ತುಂಬಲು ನನ್ನ ಶಕ್ತಿ ಮೀರಿ ನಟಿಸುತ್ತೀನಿ” ಎಂದು ವರಲಕ್ಷ್ಮಿ ಹೇಳಿದ್ದಾರೆ.

ಚಿತ್ರಕ್ಕೆ ಕ್ಚಶ್ಚನ್ ಮಾರ್ಕ ಎಂದು ಹೆಸರಿಟ್ಟಿದ್ದು, ಚಿತ್ರವನ್ನು ಸಾಯಿ ಸಮರ್ಥ ಲಾಂಛನದಲ್ಲಿ ಜಯಪ್ರಕಾಶ್ ಮತ್ತು ಪವಿತ್ರಾ ಕೆ ಜಯರಾಮ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ತನ್ನ ಫಸ್ಟ್ ಲುಕ್ ಪೋಸ್ಟರ್ಸ್ ಗಳಿಂದ ಗಮನ ಸೆಳೆದಿರುವ ಚಿತ್ರತಂಡ ಚಿತ್ರಕ್ಕೆ ಇದೇ ಹೆಸರನ್ನು ಉಳಿಸಿಕೊಳ‍್ಳುತ್ತದೋ ಅಥವಾ ಬೇರೆ ಹೆಸರನ್ನು ಇಡುತ್ತದೋ ಎಂದು ಕಾದು ನೋಡಬೇಕಿದೆ.

 

@ sunil javali

Tags