ಸುದ್ದಿಗಳು

ಅಭಿಮಾನಿಗಳಿಗೆ ಶಾಕ್ ನೀಡಿದ ವರಲಕ್ಷ್ಮಿ ಶರತ್ ಕುಮಾರ್

ನಟಿ ವರಲಕ್ಷ್ಮಿ ಶರತ್ ಕುಮಾರ್ ‘ನಾನು ಒಂಟಿಯಾಗಿರಲು ಬಯಸುತ್ತೇನೆ’ ಎಂದು ಹೇಳುವ ಮೂಲಕ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹೌದು, ವರಲಕ್ಷ್ಮಿ ತಮ್ಮ ಮುಂಬರುವ ಚಿತ್ರ ‘ಕನ್ನೀರಸಿ’ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ವರದಿಗಾರರೊಬ್ಬರು ನೀವು ಅರೆಂಜ್ ಮ್ಯಾರೇಜ್ ಆಗುತ್ತೀರೋ ಅಥವಾ ಲವ್ ಮ್ಯಾರೇಜ್ ಆಗುತ್ತಾರೋ ಎಂದು ಕೇಳಿದಾಗ ವರಲಕ್ಷ್ಮಿ ತಕ್ಷಣವೇ ನನಗೆ ಎರಡರ ಬಗ್ಗೆಯೂ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. 34ರ ಹರೆಯದ ವರಲಕ್ಷ್ಮಿಗೆ ಈ ದಿನಗಳಲ್ಲಿ ಸಿಂಗಲ್ ಆಗಿರುವುದು ಒಳ್ಳೆಯದು ಎಂದು ಅನೇಕರು ಶಿಫಾರಸು ಮಾಡುತ್ತಿದ್ದಾರಂತೆ.

ಅಷ್ಟೇ ಅಲ್ಲ, ವರಲಕ್ಷ್ಮಿ ಸಿನಿಮಾಗಳು ನಿಜ ಜೀವನಕ್ಕಿಂತ ಭಿನ್ನವಾಗಿರುತ್ತವೆ. ನಿಜ ಜೀವನಕ್ಕೂ, ತೆರೆಯ ಮೇಲೆ ಮಾಡುವ ಪಾತ್ರಕ್ಕೂ ವ್ಯತ್ಯಾಸವಿರುತ್ತದೆ. ಜನರು ಅದನ್ನು ತಪ್ಪಾಗಿ ಗ್ರಹಿಸಬಾರದು ಎಂದು ಹೇಳಿದ್ದಾರೆ.

ಈ ಹಿಂದೆ ವರಲಕ್ಷ್ಮಿ ಹೆಸರು ನಟ ವಿಶಾಲ್ ಕೃಷ್ಣ ಜೊತೆ ಕೇಳಿಬರುತ್ತಿತ್ತು. ಆದರೆ ಅವರಿಬ್ಬರೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ಚಿತ್ರರಂಗಕ್ಕೆ ಪ್ರವೇಶಿಸಿದ ನಂತರವೂ ಅದೇ ಸಂಬಂಧವನ್ನು ಮುಂದುವರೆಸಿದ್ದಾರೆ ಎಂಬ ವಿಷಯ ಕೇಳಿಬಂತು.

ಅಂದಹಾಗೆ ‘ಕನ್ನೀರಸಿ’ ಒಂದು ರೋಮ್ಯಾಂಟಿಕ್ ಹಾಸ್ಯ ಚಿತ್ರವಾಗಿದ್ದು, ಇದರಲ್ಲಿ ವರಲಕ್ಷ್ಮಿಗೆ ವಿಮಲ್ ಜೋಡಿಯಾಗಿದ್ದಾರೆ.

ಬೆಡ್ ರೂಂ ಸೀಕ್ರೇಟ್ಸ್ ರಿವೀಲ್ ಮಾಡಿದ ಪ್ರಿಯಾಂಕಾ ಚೋಪ್ರಾ!

#balkaninews #varalaxmisarathkumar #marriage #kannirasi

Tags