ಸುದ್ದಿಗಳು

‘ವರ್ಮಾ’ ಸಿನಿಮಾ ಬಗ್ಗೆ ನಿರ್ದೇಶಕನ ಮಾತು

ಚೆನೈ, ಫೆ.11:

‘ವರ್ಮಾ’ ಸಿನಿಮಾ ಚಿತ್ರೀಕರಣ ಮುಗಿಸಿ ಫೈನಲ್ ಕಾಪಿ ಹೊರ ಬಂದ ನಂತರದಲ್ಲಿ ಈ ಸಿನಿಮಾ ಹೀರೋ ಬಿಟ್ಟು ಉಳಿದಂತೆ ಎಲ್ಲರನ್ನು ನಿಮಾರ್ಣ ಸಂಸ್ಥೆ ಬದಲಾಯಿಸಿರುವುದಾಗಿ ಬಹಿರಂಗ ಮಾಡಿತ್ತು. ಇದೀಗ ಈ ಸಿನಿಮಾ ಬಗ್ಗೆ ನಿರ್ದೇಶಕರು ಮಾತನಾಡಿದ್ದಾರೆ.

ವರ್ಮಾ ಸಿನಿಮಾ ಹೊರಬಂದಿದ್ದ ನಿರ್ದೇಶಕರ ಸ್ಪಷ್ಟನೆ

ತಮಿಳು ಖ್ಯಾತ ನಟ ವಿಕ್ರಮ್ ಅವರ ಮಗ ಧೃವ ಗ್ರಾಂಡ್ ಎಂಟ್ರಿ ಕೊಡುವುದಕ್ಕೆ ಸಕಲ ತಯಾರಿ ಮಾಡಿಕೊಂಡಿದ್ದರು. ಆದರೆ ಅವರು ಬರುವಿಕೆ ಇದೀಗ ತಡವಾಗಿದೆ. ಅವರು ಅಭಿನಯದ ಚೊಚ್ಚಲ ಸಿನಿಮಾ ವರ್ಮಾ.‌ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿತ್ತು. ಅಷ್ಟೇ ಅಲ್ಲ ಈ ಸಿನಿಮಾ ಫೈನಲ್ ಕಾಪಿ ಕೂಡ ಹೊರ ಬಂದಿತ್ತು. ಇದೀಗ ಈ ಸಿನಿಮಾದಲ್ಲಿ ಇದ್ದ ಕಲಾವಿದರು ಮತ್ತು ತಂತ್ರಜ್ಞನರನ್ನು  ಬದಲಾವಣೆ ಮಾಡಿದ್ದೇವೆಂದು ನಿರ್ಮಾಣ ಸಂಸ್ಥೆ ಹೇಳಿತ್ತು. ಇದೀಗ ಈ ಬಗ್ಗೆ ಈ ಸಿನಿಮಾ ನಿರ್ದೇಶಕರು ಮಾತನಾಡಿರುವುದು ವರದಿಯಾಗಿದೆ.

ಸಿನಿಮಾ ಬಗ್ಗೆ ಹೇಳಿದ ನಿರ್ದೇಶಕರು

ಹೌದು, ಈ ವಿಷಯದ ಮಾತನಾಡಿರುವ ನಿರ್ದೇಶಕರು, ಜನವರಿ 22ರಂದು ನಾನು ಅಧಿಕೃತವಾಗಿ ವರ್ಮಾ ತಂಡದಿಂದ ಹೊರಬಂದಿದ್ದೇನೆ. ಈ ಬಗ್ಗೆ ದಾಖಲೆ ಇದೆ. ಈ ಸಿನಿಮಾ ತಂಡದಿಂದ ಹೊರ ಬಂದಿದ್ದು ನನ್ನ ಸ್ವಂತ ನಿರ್ಧಾರವಾಗಿತ್ತು. ಇಲ್ಲಿ ಯಾರ ಒತ್ತಾಯವೂ ಇರಲಿಲ್ಲ.  ನನ್ನ ಕ್ರೀಯಾಶೀಲತೆಯ ಸ್ವಾತಂತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಾನು ಚಿತ್ರದಿಂದ ಸಂಪೂರ್ಣವಾಗಿ ಹೊರ ಬಂದಿದ್ದೇನೆ ಅಷ್ಟೆ. ಧೃವ ಅವರ ಸಿನಿ ಭವಿಷ್ಯ ಕೂಡ ಇಲ್ಲಿ ಮುಖ್ಯವಾಗಿದೆ. ಅದನ್ನು  ಗಮನದಲ್ಲಿರಿಸಿಕೊಂಡು ಈ ವಿಚಾರವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ ಎಂದು ಹೇಳಿರುವುದು ವರದಿಯಾಗಿದೆ.

#varmatamilmovie #kollywood #tamilmovies #balkaninews #varmatamilmovie #varmaamoviedirector #dhruvvikram

Tags