ಸುದ್ದಿಗಳು

ವರುಣ್ ಧವನ್ ಫೋಟೋ ಹಿಡಿದ ಸಲ್ಮಾನ್

‘ಶೂಟ್ ಇನ್ ಎ ಶೂಟ್’

ಮುಂಬೈ,ಅ.11: ನಟ ವರುಣ್ ಧವನ್ ಅವರ ಫೋಟೋ ತೆಗೆದ ಸಲ್ಲು, ಸಲ್ಲು ಫೋಟೋ ತೆಗೆದ ಫೊಟೋ ಗ್ರಾಫರ್…

ಸದ್ಯ ಸಲ್ಮಾನ್ ಹಾಗೂ ‘ಸುಯಿ ಧಾಗಾ’ ಸಿನಿಮಾ ಮೂಲಕ ಸಾಕಷ್ಟು ಫೇಮಸ್ ಆದ ವರುಣ್ ಧವನ್ ಇಬ್ಬರು ಚಿತ್ರೀಕರಣ ಸಮಯದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ನಟ ವರುಣ್ ಫೋಟೋ ಒಂದನ್ನು ಸಲ್ಮಾನ್ ಸೆರೆಹಿಡಿದಿದ್ದಾರೆ.

ಫೋಟೋ ತೆಗೆದ ಸಲ್ಲು

ಹೌದು, ಇತ್ತೀಚಿಗೆ ಚಿತ್ರೀಕರಣ ಸಮಯದಲ್ಲಿ ಸಲ್ಮಾನ್ ಭಾಗಿಯಾಗಿದ್ದಾರೆ. ಈ ವೇಳೆ ‘ಸುಯಿ ಧಾಗಾ’ ಸಿನಿಮಾ ನಾಯಕ ವರುಣ್ ಕೂಡ ಇದ್ದಾರೆ. ಈ ವೇಳೆ ಫೋಟೋಗ್ರಾಫರ್ ಕೈಯಲ್ಲಿದ್ದ ಕ್ಯಾಮರಾ ಪಡೆದುಕೊಂಡ ಸಲ್ಮಾನ್ ವರುಣ್ ಅವರ ಫೋಟೋ ಒಂದನ್ನು ತೆಗೆದಿದ್ದಾರೆ.

ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡ ಸಲ್ಲು

ಇನ್ನು ಸಲ್ಮಾನ್ ಫೋಟೋ ತೆಗೆಯಬೇಕಾದರೆ ಇನ್ನೊಬ್ಬ ಫೋಟೋಗ್ರಾಫರ್ ಸಲ್ಮಾನ್ ಫೋಟೋ ತೆಗೆಯೋದನ್ನ ಸೆರೆ ಹಿಡಿದಿದ್ದಾರೆ. ಇದೀಗ ಈ ಫೋಟೋವನ್ನು ಸಲ್ಮಾನ್ ಗೆ ತೋರಿಸಿದ್ದಾರೆ. ಈ ಫೋಟೋ ಇಷ್ಟಪಟ್ಟ ಸಲ್ಮಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಫೊಟೋಗೆ ‘ಶೂಟ್ ಇನ್ ಎ ಶೂಟ್’ ಅಂತಾ ಬರೆದುಕೊಂಡಿದ್ದಾರೆ.

 

 

Tags

Related Articles