ಸುದ್ದಿಗಳು

ಮತ್ತೊಂದು ಚಿತ್ರಕ್ಕೆ ನಾಯಕರಾದ ‘ಟಗರು’ ಚಿಟ್ಟೆ ಅಲಿಯಾಸ್ ವಸಿಷ್ಠ ಸಿಂಹ..!!

‘ರಾಜಾ ಹುಲಿ’, ‘ರುದ್ರ ತಾಂಡವ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಮಫ್ತಿ’, ‘ಟಗರು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದವರು ‘ಟಗರು’ ಚಿಟ್ಟೆ ಅಲಿಯಾಸ್ ವಸಿಷ್ಠ ಸಿಂಹ.

ಹೀಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ವಸಿಷ್ಠ ಸಿಂಹ ‘ಅಲೋನ್’ ಚಿತ್ರದಲ್ಲಿ ನಾಯಕರಾಗಿಯೂ ಕಾಣಿಸಿಕೊಂಡಿದರು. ಇದಾದ ಬಳಿಕ ನಾಗತಿ ಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರಕ್ಕೆ ನಾಯಕನಟರಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.

ವಿಶೇಷವೆಂದರೆ, ವಸಿಷ್ಠ ಸಿಂಹ ಇದೀಗ ‘ತಲ್ವಾರ್ ಪೇಟೆ’ ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಹೌದು, ಇದೊಂದು ನೂತನ ಸಿನಿಮಾವಾಗಿದ್ದು, ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಚಿತ್ರಕ್ಕೆ ಸೋನಲ್ ಮೊಂಥೆರೋ ನಾಯಕಿಯಾಗಿದ್ದು, ಮೊನ್ನೆ (ಆ.23)ಯಿಂದ ಚಿತ್ರದ ಶೂಟಿಂಗ್ ಶುರುವಾಗಿದೆ.

ಖಂಡಿತಾ ಕನ್ನಡದಲ್ಲೂ ನಟಿಸುತ್ತೇನೆ: ನಟ ಪ್ರಭಾಸ್

#VasistaSimha #VasistaSimhaMovies#ThalvaraPete  #kannadafilm, #kannadamovie, #kannadanews,

Tags