ಸುದ್ದಿಗಳು

ತೀವ್ರಗಾಮೀ ಸ್ವಾತಂತ್ರ್ಯ ಹೋರಾಟಗಾರ!, ಏಟಿಗೆ ಎದುರೇಟು ನೀಡಿದ ಸಾಹಸಿ!!

ಮಹಾನ್ ಸ್ವಾತ್ರಂತ್ರ್ಯ ಹೋರಾಟಗಾರ

ಒಮ್ಮೆ ಭಾರತದ ಸಮಗ್ರ ಸ್ವಾತಂತ್ರ್ಯ ಸಂಗ್ರಾಮದ ಝಲಕ್ ನಮ್ಮ ಕಣ್ಣ ಮುಂದೆ ತಂದುಕೊಂಡಿದ್ದೇ ಆದರೆ ಮಹಾನ್ ಸ್ವಾತ್ರಂತ್ರ್ಯ ಹೋರಾಟಗಾರ ವೀರ ಸಾವರ್ಕರ್ರವರ ಮುಖಮುದ್ರೆ ನಮ್ಮ ಕಣ್ಣಮುಂದೆ ಬರದೇಹೋಗದು. ಓರ್ವ ಕ್ರಾಂತಿಕಾರಿ ಚಿಂತಕ,  ಮಹಾನ್ ಬರಹಗಾರ, ಇತಿಹಾಸಕಾರ, ಕವಿ, ತತ್ವಜ್ಞಾನಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ತಮ್ಮ83ನೇ ವಯಸ್ಸಿನಲ್ಲಿ ಸ್ವರ್ಗವಾಸಿಯಾದ ಸಾವರ್ಕರ್  ಅವರ ನಿಜವಾದ ಹೆಸರು ವಿನಾಯಕ್ ದಾಮೋದರ್ ಸಾವರ್ಕರ್.  ನಾಸಿಕ್ ಸಮೀಪದ  ಭಾಗ್ ಪುರ ಹಳ್ಳಿಯಲ್ಲಿ ಮೇ 28, 1883 ರಂದು ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆ ದಾಮೋದರಪಂತ್ ಸಾವರ್ಕರ್ ಹಾಗೂ ತಾಯಿ ರಾಧಾಬಾಯಿಯನ್ನು ಕಳೆದುಕೊಂಡಿದ್ದರು.

ದೇಶಪ್ರೇಮವನ್ನು ಬಾಲ್ಯದಲ್ಲೇ ಮೈಗೂಡಿಸಿಕೊಂಡಿದ್ದ ಬಾಲಕ ಸಾವರ್ಕರ್ ಸ್ನೇಹಿತರೊಡಗೂಡಿ ‘ಮಿತ್ರ ಮೇಳ’ ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದ್ದರು. ಪುಟ್ಟ್ ತಲೆಯೊಳಗೆ ಅತಿದೊಡ್ಡ ಆಲೋಚನೆಗಳನ್ನೆಲ್ಲಾ ಹಮ್ಮಿಕೊಂಡ ವಿನಾಯಕ್  “ಸಂಪೂರ್ಣ ರಾಜಕೀಯ ಸ್ವಾತಂತ್ರ್ಯಕ್ಕಾಗಿ” ಹೋರಾಡಬೇಕೆಂಬ ಕನಸ್ಸನ್ನು ಆಗಲೇ ಕಂಡಿದ್ದರು.ವಿನಾಯಕ್ ದಾಮೋದರ್ ಸಾವರ್ಕರ್

ಸ್ವಾತಂತ್ರ್ಯವೇನೋ ಬಂದಿತು. ಆ ಬಳಿಕವೂ 16 ವರುಷಗಳ ಕಾಲ ಬದುಕಿದ್ದ ಸಾವರ್ಕರ್ ಹಲವಾರು ಕೃತಿಗಳನ್ನು ಬರೆದು ಪ್ರಸಿದ್ದಿಯಾಗಿದ್ದರು. “ನನ್ನ ಜೀವಾವಧಿ ಶಿಕ್ಷೆ” ,  “ಕಮಲಾ”  , “ನನ್ನಅಜೀವ ಸಾಗಾಟ “, “ ಬಂಗಾರದ ಆರು ಪುಟಗಳು”  ಎಂಬ  ಅನುಭವ ಕಥನಗಳು ಸ್ವಾತಂತ್ರ್ಯೋತ್ತರ ಜನಿಸಿದ ಭಾರತೀಯ ದೇಶಭಕ್ತರಿಗೆ ಮಾರ್ಗಸೂಚಿಗಳಾದವು. ಮುಂದುವರೆದು, ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಿದ  ಸಾವರ್ಕರ್, ಅಸ್ಪೃಶ್ಯತೆಯನ್ನು ಹೋಗಲಾಡಿಸಲೂ ಸಹ ನೆರವಾದರು. ಬ್ಯಾರಿಸ್ಟರ್ ಪದವಿ ಪಡೆಯಲು  ಲಂಡನ್ ಗೆ  ತೆರಳಿದ ವಿನಾಯಕ್ 1906 ರ ಜೂನ್ ನಲ್ಲಿ ಆರಂಭಿಸಿ,  ಭಾರತವು ಸ್ವಾತಂತ್ರ್ಯದ ಹೋರಾಟದ ಬಗ್ಗೆ ಬ್ರಿಟಿಷರಿಂದ ನಿಷೇಧಿಸಲ್ಪಟ್ಟ “ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ 1857” ಎಂಬ ಪುಸ್ತಕದ ಗ್ರಂಥಕರ್ತನಾದರು.  ಯಾವಾಗಲೂ ಭಾರತವನ್ನು ಬ್ರಿಟಿಷರುಗಳಿಂದ ಮರಳಿ ಪಡೆಯಬೇಕೆಂಬ ಆಸೆಯನ್ನು ಹೊತ್ತಿದ್ದ ಸಾರ್ವಕರ್, ಲಂಡನ್ನಲ್ಲಿನ ಬ್ರಿಟಿಷ್ ವಿದ್ಯಾರ್ಥಿಗಳಿಗೆ ಭಾರತೀಯ ಪುಸ್ತಕಗಳ ಬಗ್ಗೆ ತಿಳಿಸುತ್ತಿದ್ದರು. ಈ ನಡುವೆ ಗಾಂಧೀಜಿಯವರನ್ನು ಹತ್ಯೆ ಮಾಡಿದ ಆರೋಪಗಳು ಕೂಡಾ ಕೇಳಿಬಂದಿತು. ದೇಶ ಪ್ರೇಮ 

ಅಂಡಮಾನ್  ಜೈಲಿನಲ್ಲಿ ಸಾರ್ವಕರ್ ಗೆ ಶಿಕ್ಷೆ ವಿಧಿಸಲಾಯ್ತು. 1910 ರ ಡಿಸೆಂಬರ್ 24 ರಂದು ಅವರು ಕೆಲವು ದಿನಗಳ ನಂತರ  ಜೈಲಿನಲ್ಲಿ ಗ್ರಂಥಾಲಯವನ್ನು ಸ್ಥಾಪಿಸುವುದರ ಮೂಲಕ  ಜೈಲಿನ ಅನಕ್ಷರಸ್ಥ ಅಪರಾಧಿಗಳಿಗೆ  ಶಿಕ್ಷಣವನ್ನು ನೀಡಲು ಪ್ರಯತ್ನಿಸಿದರು. ಸುಮಾರು ದಿನಗಳು ಕಳೆಯುತ್ತಿದ್ದಂತೆ, ವಿಠಲ್ಭಾಯ್ ಪಟೇಲ್, ತಿಲಕ್ ಮತ್ತು ಮಹಾತ್ಮ ಗಾಂಧಿ ಮುಂತಾದ ಮಹಾನ್ ನಾಯಕರ ಬೇಡಿಕೆಯಿಂದ ಸಾವರ್ಕರನ್ನು ಅಂಡಮಾನ್ ಜೈಲಿನವರು ಬಿಡುಗಡೆ ಮಾಡಿದರು..,  ಮೇ 2, 1921 ರಂದು ಸಾರ್ವಕರ್ ಭಾರತಕ್ಕೆ ಮರಳಿ ಬಂದರು.ಆ ವೇಳೆಗಾಗಲೇ ಬಾಲ ಗಂಗಾಧರ್ ತಿಲಕ್ ರವರಿಂದ  ರೂಪುಗೊಂಡ ‘ಸ್ವರಾಜ್  ಪಾರ್ಟಿ’ ಯಲ್ಲಿ ಸೇರಿಕೊಂಡ ವಿನಾಯಕ್ ಸಾವರ್ಕರ್ , ಹಿಂದೂ ಮಹಾಸಭಾ  ಎಂಬ  ಪ್ರತ್ಯೇಕ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಮುಂದೆ,  ಅದರ ಅಧ್ಯಕ್ಷರಾಗಿಯೂ  ಆಯ್ಕೆಯಾಗಿ, ಮಹಾತ್ಮಾ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ವೀರ ಸಾವರ್ಕರ್ ಭಾರತ ಸರ್ಕಾರದಿಂದ ಆರೋಪಿಸಲ್ಪಟ್ಟರು.  ಆದರೆ ಭಾರತದ ಸುಪ್ರೀಂ ಕೋರ್ಟ್ ನಿಂದ ತಪ್ಪಿತಸ್ಥರೆಂದು ಘೋಷಿಸಲಾಗಿದ್ದ ಇವರು ಫೆಬ್ರವರಿ 26, 1966 ರಂದು  ತಮ್ಮ 83 ನೇ ವಯಸ್ಸಿನಲ್ಲಿ ನಿಧನರಾದರು.

Tags

Related Articles