ಸುದ್ದಿಗಳು

‘ವೇಗದೂತ’ ಚಿತ್ರದ ಮುಹೂರ್ತ

ವೇಗವಾಗಿ ಬರಲಿದ್ದಾನೆಯೇ ‘ವೇಗದೂತ’

 ಬೆಂಗಳೂರು,ಸೆ.09: ಸ್ಯಾಂಡಲ್‌ವುಡ್‌ ನಲ್ಲಿ ವಾರಕ್ಕೆ ಹತ್ತಾರು ಚಿತ್ರಗಳು ಸೆಟ್ಟೇರುತ್ತವೆ, ಅದ್ರಲ್ಲಿ ಹೊಸಬರ ಹೊಸ ಪ್ರಯತ್ನಗಳೇ ಹೆಚ್ಚು, ನಿನ್ನೆ ‘ವೇಗದೂತ’ ಅನ್ನೋ ಚಿತ್ರ ಅದ್ದೂರಿಯಾದ ಮುಹೂರ್ತ ಮಾಡಿಕೊಂಡಿದ್ದು, ಚಿತ್ರದ ಮುಹೂರ್ತಕ್ಕೆ ಆಗಮಿಸಿ ಚಾಲನೆ ಕೊಟ್ಟಿದ್ದಾರೆ ಡಾನ್ಸಿಂಗ್ ಸ್ಟಾರ್ ನಟ ಯೋಗಿ, ಹಾಗಾದರೆ ಏನಿದು ವೇಗದೂತ ಅಂತೀರಾ? ಈ ಸ್ಟೊರಿ ನೋಡಿ ಎಲ್ಲಾ ಗೊತಾಗತ್ತೆ.

 ‘ವೇಗದೂತ’ ಎಂಬ ಶೀರ್ಷಿಕೆ

‘ವೇಗದೂತ’ ಎಂಬ ಶೀರ್ಷಿಕೆಯ ಚಿತ್ರವೊಂದು ನಿನ್ನೆ ಅದ್ದೂರಿಯಾದ ಮುಹೂರ್ತ ಮಾಡಿಕೊಂಡಿದೆ, ಕತ್ರಿಗುಪ್ಪೆಯ ಗಣೇಶ್ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ಚಿತ್ರಕ್ಕೆ ಕ್ಲ್ಯಾಪ್ ಮಾಡಲು ನಟ ಯೋಗಿ ಆಗಮಿಸಿದ್ದರು, ಕ್ಲ್ಯಾಪ್ ಮಾಡಿ ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶೂಭಕೋರಿದ್ದಾರೆ ನಟ ಯೋಗಿ, ಇನ್ನೂ ಈ ಚಿತ್ರಕ್ಕೆ ಪ್ರದೀಪ್ ಚಂದ್ರ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಜರ್ನಿ ಸ್ಟೋರಿ

ಇನ್ನೂ ‘ವೇಗದೂತ’ ಅಂತಾ ಕೇಳಿದರೆ ಇದೊಂದು ಜರ್ನಿ ಸ್ಟೋರಿ ಇರಬಹುದು ಅಂತನ್ನಿಸೋದು ಸಹಜ, ನಿರ್ದೇಶಕ ಪ್ರದೀಪ್ ಹೇಳುವಂತೆ ಇಂದು ಮುಹೂರ್ತವಾದ ಈ ದೇವಸ್ಥಾನದಿಂದ ಶುರುವಾದ ಚಿತ್ರಕಥೆ ಇದೇ ದೇವಸ್ಥಾನದಲ್ಲಿ ಮುಗಿಯತ್ತೆ ಅಂತಾ ಹೇಳುತ್ತಾರೆ, ಈಗಾಗಲೇ ಈ ಚಿತ್ರದ ಶೀರ್ಷಿಕೆಯನ್ನು ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ

ಕಥೆಯೇ ಚಿತ್ರದ ಹೀರೋ

ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯಲಿದ್ದು ಚಿತ್ರದಲ್ಲಿ ಸಂದೀಪ್, ಪ್ರಮೋದ್, ಪ್ರದೀಪ್, ಚೈತ್ರ,ರಶ್ಮಿಕಾ ಸೇರಿದಂತೆ ಹಲವು ಪಾತ್ರಗಳಿವೆ ಆದರೆ ಕಥೆಯೇ ಚಿತ್ರದ ಮುಖ್ಯ ಹಿರೋ ಅನ್ನೋದು ಚಿತ್ರತಂಡದ ಮಾತು. ಸದ್ಯ ಮುಹೂರ್ತ ಮಾಡಿಕೊಂಡಿರುವ ವೇಗದೂತ ಮುಂದಿನ ವಾರದಿಂದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದೆ.

 

Tags

Related Articles