ಸುದ್ದಿಗಳು

‘ಉರಿ’ ಖ್ಯಾತಿಯ ವಿಕ್ಕಿ ಕೌಶಲ್ ಅಭಿನಯದ ‘ಭೂತ್’ ಚಿತ್ರದ ಪೋಸ್ಟರ್ ರಿಲೀಸ್

ಬಾಲಿವುಡ್ ನಟ ವಿಕ್ಕಿ ಕೌಶಲ್ ಸದ್ಯ ‘ಭೂತ್’ ಪಾರ್ಟ್ ಒನ್‌ ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಹಾರರ್ ಸಿನಿಮಾ ಅನ್ನೋದು ಟೈಟಲ್ ಮೂಲಕವೇ ಗೊತ್ತಾಗುವಂತಿದೆ. ಸದ್ಯ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಭಯಾನಕವಾಗಿ ಮೂಡಿ ಬಂದಿದೆ.

ಹಾರರ್ ಲುಕ್‌ ನಲ್ಲಿ ವಿಕ್ಕಿ

ನಟ ವಿಕ್ಕಿ ಕೌಶಲ್ ‘ಉರಿ’ ಸಿನಿಮಾ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದ ನಟ. ತಮ್ಮದೇ ಆದ ನಟನಾ ಶೈಲಿಯಿಂದ ಯಾವುದೇ ಪಾತ್ರ ಕೊಟ್ಟರೂ ನಿಭಾಯಿಸಬಲ್ಲರು. ಸದ್ಯ ‘ಉರಿ’ ಸಿನಿಮಾ ಮೂಲಕ ದೇಶಪ್ರೇಮದ ಹಾಗೂ ವಿರೋಧಿಗಳಿಗೆ ನಡುಕ ಹುಟ್ಟಿಸುವ ಪಾತ್ರದ ಮೂಲಕ ಮನೆ ಮಾತಾದವರು. ಸದ್ಯ ಈ ನಟ ಭೂತ್ ಪಾರ್ಟ್ ಒನ್ ಸಿನಿಮಾ ಮೂಲಕ ಭಯಾನಕತೆ ಹುಟ್ಟಿಸುವ ಮೂಲಕ ಮತ್ತೆ ಬರುತ್ತಿದ್ದಾರೆ.

ನವೆಂಬರ್ 15ರಂದು ಬಿಡುಗಡೆ

ಸದ್ಯ ‘ಭೂತ್’ ಪಾರ್ಟ್ ಒನ್ ಸಿನಿಮಾ ಹಾರರ್ ಸಿನಿಮಾವಾಗಿದೆ. ಹಡಗೊಂದನ್ನು ಹುಡುಕುವ ಸುತ್ತ ಕಥೆಯನ್ನು ಎಣೆಯಲಾಗಿದೆ. ಇನ್ನೂ ಈ ಸಿನಿಮಾ ಮುಂಬೈನಲ್ಲಿ ನಡೆದ ನೈಜ ಕಥೆಯಾಧಾರಿತವಾಗಿದೆಯಂತೆ. ಸದ್ಯ ಬಿಡುಗಡೆಯಾದ ಫಸ್ಟ್ ಲುಕ್‌ ನಲ್ಲಿ ವಿಕ್ಕಿಯ ಕತ್ತಿಗೆ ಭೂತದ ಕೈ ಹಾಕಿರುವ ಫೋಟೋ ಇದಾಗಿದ್ದು ಭಯಾನಕವಾಗಿಯೇ ಮೂಡಿ ಬಂದಿದೆ. ಸದ್ಯ ಈ ಸಿನಿಮಾವನ್ನು ಭಾನು ಪ್ರತಾಪ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಅಂದರೆ ನವೆಂಬರ್ 15 ರಂದು ತೆರೆ ಕಾಣಲಿದೆ.

ರಚಿತಾ ರಾಮ್ ಹೇಳಿಕೆಯಿಂದಾಗಿ ಕೋಪಗೊಂಡ ಪ್ರಿಯಾಂಕಾ ಉಪೇಂದ್ರ

#balkaninews #bollywood #vickykaushal #karanjohar #bhoothindimovie #vickykaushaltwitter

Tags