ಸುದ್ದಿಗಳು

ಅಶ್ವತ್ಥಾಮನ ಪಾತ್ರದಲ್ಲಿ ಮಿಂಚಲಿರುವ ವಿಕ್ಕಿ ಕೌಶಲ್

ಮುಂಬೈ, ಏ.20:

ಬಾಲಿವುಡ್ ನ ಬ್ಲಾಕ್ ಬಾಸ್ಟರ್ ಸಿನಿಮಾ ‘ಉರಿ’ ಚಿತ್ರದ ಮೂಲಕ ಮನೆ ಮಾತಾಗಿರುವ ವಿಕ್ಕಿ ಕೌಶಲ್ ಇದೀಗ ಅಶ್ವತ್ಥಾಮ ನಾಗಲಿದ್ದಾರೆ. ವಿಕ್ಕಿ ಕೌಶಲ್ ಇದೀಗ ಪೌರಾಣಿಕ ಯುದ್ಧ ಕುರಿತ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ವಿಶೇಷತೆಯೆಂದರೆ ‘ಉರಿ’ ಸಿನಿಮಾ ನಿರ್ಮಿಸಿದ್ದ ನಿರ್ಮಾಪಕ ರೊನ್ನೀ ಸ್ಕ್ರಿವ್ವಾಲ ಅವರೇ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಮಹಾಭಾರತ ಯುದ್ಧದ ಸಮಯದಲ್ಲಿ ಗುರು ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮ ಪ್ರಮುಖ ಪಾತ್ರ ವಹಿಸಿರುವ ಸಂಗತಿ ಪುರಾಣದ ಮೂಲಕ ನಮಗೆಲ್ಲಾ ತಿಳಿದೇ ಇದೆ. ಇದೀಗ ವಿಕ್ಕಿ ಕೌಶಲ್ ಆ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಇನ್ನೂ ಬಿಗ್‌ ಬಜೆಟ್‌ ನಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾದ ಚಿತ್ರೀಕರಣ ಭಾರತದ ವಿವಿಧ ಸ್ಥಳಗಳಲ್ಲಿ ನಡೆಯಲಿರುವುದು ಈ ಚಿತ್ರದ ವಿಶೇಷ. ಇದರ ಜೊತೆಗೆ ಕರಣ್‌ ಜೋಹರ್‌ ನಿರ್ಮಾಣದ ‘ತಖ್ತ್‌’ ಸಿನಿಮಾ ಮತ್ತು ಫ್ರೀಡಂ ಫೈಟರ್‌ ಉಧಾಮ್‌ ಸಿಂಗ್‌ ಬಯೋಪಿಕ್‌ ಗಳಲ್ಲಿ ವಿಕ್ಕಿ ಕೌಶಲ್ ಬಣ್ಣ ಹಚ್ಚಲಿದ್ದಾರೆ.

ಕೋಟಿ ಕೋಟಿ ಗಳಿಕೆ ಮಾಡಿದ ವಿಕ್ಕಿ ಕೌಶಲ್ ಅಭಿನಯದ ಉರಿ

ಪಾಕ್ ಸೈನ್ಯದ ಮೇಲೆ ಭಾರತೀಯ ಸೇನೆ ಮಾಡಿದ ‘ಸರ್ಜಿಕಲ್ ಸ್ಟ್ರೈಕ್’ ಕಥೆಯನ್ನು ಆಧರಿಸಿ ಮಾಡಲಾದ ಚಿತ್ರವೇ ‘ಉರಿ ; ದಿ ಸರ್ಜಿಕಲ್‌ ಸ್ಟ್ರೈಕ್‌’. ಜನವರಿ ತಿಂಗಳಿನಲ್ಲಿ ಬಿಡುಗಡೆಯಾದ ಈ ಸಿನಿಮಾ ಬಹಳಷ್ಟು ಖ್ಯಾತಿ ಪಡೆದಿದೆ. ಸಿನಿ ಪ್ರಿಯರು ಈಗಲೂ ‘ಉರಿ’ ಚಿತ್ರವನ್ನು ನೋಡಿ ಸರ್ಜಿಕಲ್ ದಾಳಿಯ ಅನುಭವಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಈ ತಾತನ ಹೋಟೆಲ್ ರುಚಿಯನ್ನು ಮಿಸ್ ಮಾಡದೇ ಸವಿಯಿರಿ : ರಾಜ್ ಬಿ ಶೆಟ್ಟಿ

#vickykaushal #vickykaushalmovies #vickykaushalhits #vickykaushalinstagram #vickykaushaltwitter

Tags