ಸುದ್ದಿಗಳು

ತನ್ನ ಪ್ರೀತಿಯನ್ನು ಬಹಿರಂಗಪಡಿಸಿದ ನಟ ವಿಕ್ಕಿ ಕೌಶಾಲ್

ಬಾಲಿವುಡ್ ಜನಪ್ರಿಯ ನಟ ವಿಕ್ಕಿ ಕೌಶಾಲ್

ಮುಂಬೈ, ನ.23: ವಿಕ್ಕಿ ಕೌಶಾಲ್ ಅಭಿಮಾನಿಗಳಿಗೆ ಅದರಲ್ಲೂ ಯುವತಿಯರಿಗೆ ಕಹಿಸುದ್ದಿಯೊಂದನ್ನು ನೀಡುತ್ತಿದ್ದೇವೆ ಓದಿ. ಅಂದಹಾಗೆ ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದುಕೊಂಡಿದ್ದ ರಾಝಿ ಹಿರೋ ವಿಕ್ಕಿ ಕೌಶಾಲ್ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ. ನೇಹಾ ಧುಫಿಯಾ ಅವರು ನಡೆಸಿಕೊಡುವ ಟಾಕ್ ಶೋ ನಲ್ಲಿ , ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ ವಿಕ್ಕಿ ಕೌಶಾಲ್. ಆದರೆ ತಮ್ಮ ಹೃದಯ ಕದ್ದ ಈ ಯುವತಿಯ ಹೆಸರನ್ನು ಬಹಿರಂಗಪಡಿಸಿಲ್ಲ ವಿಕ್ಕಿ.ಹರ್ಲಿನ್ ಸೇತಿ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರಂತೆ  ವಿಕ್ಕಿ

ನೇಹಾ ದುಪಿಯಾ ಅವರ  ಟಾಕ್ ಶೋ ನಲ್ಲಿ, ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡ ವಿಕ್ಕಿ, ಈ ಯುವತಿಯ ಬಗ್ಗೆ ಎಲ್ಲೂ ಕ್ಲೂ ಬಿಟ್ಟುಕೊಟ್ಟಿಲ್ಲ. ಆದರೆ ಈ ಯುವತಿ ಹರ್ಲಿನ್ ಸೇತಿ ಎನ್ನಲಾಗುತ್ತಿದ್ದು, ಹರ್ಲಿನ್ ಹಲವಾರು ಕಮರ್ಷಿಯಲ್ ನಲ್ಲಿ ನಟಿಸಿದ್ದು, ಸದ್ಯಕ್ಕೆ ವೆಬ್ ಸಿರೀಸ್ ಒಂದರಲ್ಲಿ ವಿಕ್ರಾಂತ್ ಮಸ್ಸೆ ಅವರ ಜೊತೆ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಟಾಕ್ ಶೋ ನಲ್ಲಿ, ನಿಮ್ಮ ಹೃದಯ ಕದ್ದ ಈ ದೇವತೆಗೆ ಒಂದು ಹಾಡನ್ನು ಡೆಡಿಕೇಟ್ ಮಾಡಿ ಎಂದು ನೇಹಾ ಹೇಳಿದಾಗ, ಉತ್ತರಿಸಿದ ವಿಕ್ಕಿ, ‘ ಡು ಯೂ ನೋ? ಮೈನ್ ತೆರೆ ಉತ್ತೇ ಕಿನ್ನಾ ಮರ್ದಾ.. ಡು ಯೂ ನೋ’  ಎಂದು ಹಾಡು ಹಾಡಿದ್ದಾರೆ. ಇನ್ನೂ ಕೆಲಸದ ವಿಚಾರಕ್ಕೆ ಬರುವುದಾದರೆ, ವಿಕ್ಕಿ ಸಧ್ಯಕ್ಕೆ ಆದಿತ್ಯಾ ಧಾರ್ ಅವರ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಯಾಮಿ ಗೌತಮ್, ಕೀರ್ತಿ ಕುಲ್ಹಾರಿ ಮತ್ತು ಪರೇಶ್ ರಾವಲ್  ನಟಿಸುತ್ತಿದ್ದಾರೆ. ಮುಂದಿನ ವರ್ಷ ಜನವರಿ 11ರಂದು ಚಿತ್ರ ಬಿಡುಗಡೆಯಾಗಲಿದೆ.

Tags