ಸುದ್ದಿಗಳು

‘ಸ್ಪೈಸ್ ಗರ್ಲ್ಸ್’ ಪ್ರವಾಸಕ್ಕೆ ಶುಭಾಶಯ ಕೋರಿದ ವಿಕ್ಟೋರಿಯಾ ಬೆಕ್ಹ್ಯಾಮ್

ಅಮೆರಿಕನ್ ಗಾಯಕಿ ವಿಕ್ಟೋರಿಯಾ ಬೆಕ್ಹ್ಯಾಮ್

ನವೆಂಬರ್, 08: ಇತ್ತೀಚೆಗೆ ಪ್ರಕಟಿಸಲಾದ ‘ಸ್ಪೈಸ್ ಗರ್ಲ್ಸ್’ ಪುನರ್ಮಿಲನದ ಪ್ರವಾಸದಿಂದ ಹೊರಬಂದಿದ್ದ ವಿಕ್ಟೋರಿಯಾ ಬೆಕ್ಹ್ಯಾಮ್, ಹುಡುಗಿಯರ ಬ್ಯಾಂಡ್ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡಲಿದೆ ಎಂದು ಹೇಳಿದರು.

ಬ್ಯಾಂಡ್ ಗರ್ಲ್ಸ್ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ತಮ್ಮ ಪುನರ್ಮಿಲನದ ಪ್ರವಾಸವನ್ನು ಘೋಷಿಸಿದ ನಂತರ ಮತ್ತೊಮ್ಮೆ ಟ್ವೀಟ್ ಮಾಡಿ, “ಸ್ಪೈಸ್ ವರ್ಲ್ಡ್” ಪ್ರವಾಸವನ್ನು ಘೋಷಿಸಲು ನಾವು ಉತ್ಸುಕರಾಗಿದ್ದೇವೆ” ಎಂದಿದ್ದಾರೆ. 1998ರಲ್ಲಿ ಗರ್ಲ್ಸ್ ಬ್ಯಾಂಡ್ ವಿಭಜನೆಯಾಗಿತ್ತು.

ಗರ್ಲ್ಸ್ ಬ್ಯಾಂಡ್ ನಲ್ಲಿ ಅಭಿಮಾನಿಗಳು, ಎಮ್ಮಾ ‘ಬೇಬಿ ಸ್ಪೈಸ್’ ಬಂಟನ್, ಗೆರಿ ‘ಜಿಂಜರ್ ಸ್ಪೈಸ್’ ಹಾಲಿವೆಲ್ ಹಾರ್ನರ್, ಮೆಲಾನಿ “ಮೆಲ್ ಸಿ” ಚಿಶೋಲ್ಮ್ ಮತ್ತು ಮೆಲಾನಿ “ಮೆಲ್ ಬಿ” ಬ್ರೌನ್ ಅವರ ಪ್ರವಾಸದ ಪ್ರದರ್ಶನದಲ್ಲಿ ನೋಡಬಹುದಾಗಿದೆ.

ಮತ್ತೆ ವೇದಿಕೆ ಮೇಲೆ ಧೂಳೆಬ್ಬಿಸಿಲಿದ್ದಾರೆ ‘ಸ್ಪೈಸ್ ಗರ್ಲ್ಸ್’ ತಂಡ

ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ, ಭಾವನಾತ್ಮಕವಾಗಿ ವಿಕ್ಟೋರಿಯಾ “ಬಾಲಕಿಯರ ವಿಶೇಷ ದಿನ” ಎಂದು ಹೇಳಿದ್ದಾರೆ. ಈಗಾಗಲೇ ಪ್ರವಾಸದ ದಿನಾಂಕಗಳನ್ನು ಪ್ರಕಟಣೆ ಮಾಡಲಾಗಿದೆ. ಇದಕ್ಕೂ ಮುನ್ನಾ “ಬ್ಯಾಂಡ್” 2012ರಲ್ಲಿ ಒಟ್ಟಾಗಿ ಪ್ರದರ್ಶನ ನೀಡಿದ್ದರು.

“ನನ್ನ ಸ್ನೇಹಿತೆಯರ ಜೊತೆ ವೇದಿಕೆ ಹಂಚಿಕೊಳ್ಳಲು ಮತ್ತೆ ಸಾಧ್ಯವಾಗುತ್ತಿಲ್ಲ. ಆದರೆ ಸ್ಪೈಸ್ ಗರ್ಲ್ಸ್ ನನ್ನ ಜೀವನದ ಅತ್ಯಂತ ಮಹತ್ವದ ಭಾಗವಾಗಿದೆ. ಮುಂದಿನ ವರ್ಷ ಪ್ರವಾಸದಲ್ಲಿ ಹಿಂತಿರುಗಲು ನಾನು ಉತ್ಸುಕಳಾಗಿದ್ದೇನೆ. ಅಲ್ಲದೇ, ತಂಡದ ಜೊತೆ ತುಂಬಾ ಪ್ರೀತಿ ಮತ್ತು ವಿನೋದವನ್ನು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.

ವರದಿಗಳ ಪ್ರಕಾರ, ವಿಕ್ಟೋರಿಯಾ ಬೆಕ್ಹ್ಯಾಮ್ ಈಗ ತನ್ನ ಉಡುಪುಗಳ ಕುರಿತು ತಮ್ಮ ಗಮನ ಕೇಂದ್ರೀಕರಿಸಿದ್ದಾರೆ ಎನ್ನಲಾಗಿದೆ.

Tags