ಸುದ್ದಿಗಳು

“ಪ್ಲೀಸ್ ಒಪ್ಕೋಳೇ, ನಾನು ಚೀಪ್ ಆ್ಯಂಡ್ ಬೆಸ್ಟ್”: ಶರಣ್

ವಿಕ್ಟರಿ -2 ಚಿತ್ರದ ಲಿರಿಕಲ್ ವಿಡಿಯೋ ಹಾಡು

ಬೆಂಗಳೂರು,ಸ.11: ‘ರಾಂಬೋ-2’ ಚಿತ್ರದ ಯಶಸ್ಸಿನ ನಂತರ ಶರಣ್ ಅಭಿನಯಿಸುತ್ತಿರುವ ‘ವಿಕ್ಟರಿ-2’ ಚಿತ್ರವು ಈಗಾಗಲೇ ಸದ್ದು ಮಾಡುತ್ತಿದೆ . ಈ ಚಿತ್ರದಲ್ಲಿ ಶರಣ್, ರವಿಶಂಕರ್, ಸಾಧುಕೋಕಿಲ.. ಈ ಮೂವರು ಹೆಣ್ಣು ಮಕ್ಕಳಂತೆ ವೇಷ ಹಾಕಿರುವ ಪೋಟೋಗಳು ಈಗಾಗಲೇ ಸಾಕಷ್ಟು ಸದ್ದು ಮಾಡಿದ್ದು, ಚಿತ್ರದ ಮೇಲಿರುವ ಕುತೂಹಲವನ್ನು ಇಮ್ಮಡಿಗೊಳಿಸಿವೆ.

ಪ್ಲೀಸ್ ಒಪ್ಕೋಳೇ, ನಾನು ಚೀಪ್ ಆ್ಯಂಡ್ ಬೆಸ್ಟ್

ಹೀಗಂತಾ ಶರಣ್, ತಮ್ಮ ಚಿತ್ರದ ನಾಯಕಿಯರಿಗೆ ಹೇಳುತ್ತಿದ್ದಾರೆ. ಹೌದು, ಈ ಸಾಲಿನ ಲಿರಿಕಲ್ ವಿಡಿಯೋವೊಂದು , ಆನಂದ್ ಆಡಿಯೋ ಸಂಸ್ಥೆಯು ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ. ಈ ಹಾಡನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದು, ದಿವ್ಯಾ ಕುಮಾರ್ ಹಾಡೇಳಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

ಚಿತ್ರದ ಬಗ್ಗೆ

‘ರಾಂಬೋ’ ಚಿತ್ರದ ಸರಣಿ ಯಶಸ್ಸಾದ ನಂತರ ನಟ ಶರಣ್, ತಮ್ಮ ಚಿತ್ರಗಳ ಸರಣಿಗಳನ್ನು ಮಾಡುತ್ತಿದ್ದಾರೆ. ಸದ್ಯ ‘ವಿಕ್ಟರಿ-2’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅಪೂರ್ವ, ಆಶ್ಮಿತಾ ಸೂದ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಶರಣ್-ಆಸ್ಮಿತಾ ಸೂದ್

ಆಸ್ಮಿತಾ ಸೂದ್ ಈ ಹಿಂದೆ ಶರಣ್ ಜೊತೆ ನಾಯಕಿಯಾಗಿ `ವಿಕ್ಟರಿ’ ಚಿತ್ರದಲ್ಲಿ ನಟಿಸಿದ್ದರು. ಶರಣ್ ಜೊತೆಗೆ `ಓನೆ ಓನೆ’ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಚಿತ್ರ ಸೂಪರ್ ಹಿಟ್ ಆದಮೇಲೆ, ಶರಣ್ ಅಭಿನಯದ `ಅಧ್ಯಕ್ಷ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕೂಡಾ ಕಾಣಿಸಿಕೊಂಡಿದ್ದರು.ಇದೀಗ ಮತ್ತೆ ಈ ಜೋಡಿ ಒಂದಾಗಿದ್ದು, ಮತ್ತೊಮ್ಮೆ ಕಮಾಲ್ ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

Tags