ಸುದ್ದಿಗಳು

ಭಾರೀ ಸಂಚಲನ ಸೃಷ್ಟಿಸಿದ ವಿದ್ಯುಲ್ಲೇಖಾ ರಾಮನ್ ಫೋಟೋಗಳು

ಶೀರ್ಷಿಕೆಯಲ್ಲಿ ಹೇಳಿರುವಂತೆ ಹಾಸ್ಯನಟಿ ವಿದ್ಯುಲ್ಲೇಖಾ ರಾಮನ್ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿದ  ಕೆಲವು ಫೋಟೋಗಳು ಭಾರೀ ಸಂಚಲನ ಸೃಷ್ಟಿಸಿವೆ.

ಹೌದು, ನೀವು ನಂಬಲಿಕ್ಕೆ ಅಸಾಧ್ಯ ಅಂತಹ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ವಿದ್ಯುಲ್ಲೇಖಾ. ಆ ಫೋಟೋ ನೋಡಿದ ನಮಗೆ ಅವರನ್ನು ಕಂಡುಹಿಡಿಯಲು 2 ನಿಮಿಷವಾಯಿತು. ಅಲ್ಲದೇ ಆಶ್ಚರ್ಯವಾಯಿತು.

ಅಯ್ಯೋ, ಏನದು ಫೋಟೋ ಕಥೆ ವಿಷ್ಯಕ್ಕೆ ಬನ್ನಿ ಅಂತೀರಾ. ಇತ್ತೀಚೆಗೆ ವಿದ್ಯುಲ್ಲೇಖಾ ತಮ್ಮ ಭಾರೀ ತೂಕವನ್ನು ಇಳಿಸಿಕೊಂಡಿದ್ದಾರೆ. ಪ್ರತಿ ಬಾರಿ ವಿದ್ಯುಲ್ಲೇಖಾ ತಮ್ಮ ದೇಹದ ಆಕಾರ, ಹೆಚ್ಚಿನ ತೂಕ ಹೊಂದಿದ್ದಕ್ಕೆ ಟ್ರೋಲ್ ಆಗುತ್ತಿದ್ದರು.

ಆದರೆ ಇದೀಗ ತೂಕವನ್ನು ಕಳೆದುಕೊಳ್ಳುವ ಮೂಲಕ ಬಾಡಿ ಶೇಮಿಂಗ್ ಮಾಡುವರ ಬಾಯಿ ಮುಚ್ಚಿಸಿದ್ದಾರೆ ವಿದ್ಯುಲ್ಲೇಖಾ.

ಇದೀಗ ಕೇಳಿಬರುತ್ತಿರುವ ಸುದ್ದಿಯೆಂದರೆ ಈ ಫೋಟೋ ನೋಡಿದ ಮೇಲೆ ನಿರ್ಮಾಪಕರು ಹಾಸ್ಯ ಪಾತ್ರಕ್ಕೆ ಸೀಮಿತವಾಗಿದ್ದ ವಿದ್ಯುಲ್ಲೇಖಾ ಅವರಿಗೆ ಅತ್ಯುತ್ತಮ ಪಾತ್ರಗಳನ್ನು ಮಾಡಲು ಅವಕಾಶ ಕೊಡಬಹುದು ಎಂದು ಹೇಳಲಾಗುತ್ತಿದೆ.

ತೆರೆಗೆ ಬಂದ ‘ಪೈಲ್ವಾನ್’: ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ ನೋಡಿ…

#balkaninews #vidyullekharaman #photographs #tollywoodnews

Tags