ಸುದ್ದಿಗಳು

ಪ್ರೀತಿಯಲ್ಲಿ ಬಿದ್ದ ವಿಜಯ್ ದೇವರಕೊಂಡ!!

ಹೈದರಾಬಾದ್,ಫೆ.11: ವಿಜಯ್ ದೇವರಕೊಂಡ.. ಸದ್ಯಕ್ಕೆ ಟಾಲಿವುಡ್ ನ ಮೋಸ್ಟ್ ಫೇವರೆಟ್ ನಟ. ಅರ್ಜುನ್ ರೆಡ್ಡಿಯ ನಂತರ ಬದಲಾದ ಅದೃಷ್ಣ ವಿಜಯ್ ಅವರನ್ನು ಅತೀ ಹೆಚ್ಚು ಬೇಡಿಕೆಯ ನಟರ ಸಾಲಿನಲ್ಲಿ ನಿಲ್ಲಿಸಿದೆ. ಇದರ ನಂತರ ಮೂಡಿಬಂದ ಗೀತಾಗೋವಿಂದಂ ಅವರ ಪಾಲಿಗೆ ಮತ್ತೊಂದು ಪ್ಲಸ್. ಟ್ಯಾಕ್ಸಿವಾಲ ಬಿಡುಗಡೆಗೆ ಮೊದಲೇ ಲೀಕ್ ಆಗಿದ್ದರಿಂದ ಚಿತ್ರತಂಡಕ್ಕೆ ಕೊಂಚ ಹೊಡೆದೆ ಬಿದ್ದಿದ್ದರೂ, ಚಿತ್ರದಗಳಿಕೆಗೆ ಏನು ಮೋಸವಾಗಲಿಲ್ಲ. ಇದೀಗ ತಮ್ಮ ಅಭಿಮಾನಿಗಳು ಹಾಗೂ ಚಿತ್ರಪ್ರೇಮಿಗಳನ್ನು ರಂಜಿಸಲು ಡಿಯರ್ ಕಾಂಬ್ರೇಡ್ ಆಗಿ ಬರುತ್ತಿದ್ದಾರೆ ವಿಜಯ್ ದೇವರಕೊಂಡ. ಚಿತ್ರದಲ್ಲಿ ಮತ್ತೊಮ್ಮೆ ಅವರು ರಶ್ಮೀಕಾ ಮಂದಣ್ಮ ಜೊತೆಗೆ ನಟಿಸುತ್ತಿದ್ದು, ಭರತ್ ಕಮ್ಮಾ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ರಶ್ಮಿಕಾ ಕ್ರಿಕೆಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಈ ನಡುವೆ ಬಂದಿರುವ ಸುದ್ದಿಯೊಂದರ ಪ್ರಕಾರ, ವಿಜಯ್ ದೇವರಕೊಂಡ, ಪ್ರೀತಿಗೆ ಬಿದ್ದಿದ್ದಾರಂತೆ.

ಯಾರೂ ಆ ಹುಡುಗಿ

ವಿಜಯ್ ದೇವರಕೊಂಡ ತಮ್ಮ ಹ್ಯಾಂಡ್ಸಮ್ ಲುಕ್ ನಿಂದ ಹಾಗೂ ವಿಶೇಷ ಮ್ಯಾನಸಿಸಂನಿಂದ ಇಷ್ಟವಾಗುವ ನಟ. ಅವರ ನಟನೆಗೆ ಫಿದಾ ಆದವರ ಪೈಕಿ ಹೆಚ್ಚಿನವರು ಮಹಿಳೆಯರೆ. ವಿಜಯ್ ದೇವರಕೊಂಡ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದುಕೊಂಡಿರುವವರಿಗೆ ಇದೀಗ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದ್ದಾರೆ ವಿಜಯ್ ದೇವರಕೊಂಡ. ದೇವರಕೊಂಡ ಹೇಳುವಂತೆ ಅವರು ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಅರೇ ಇದೇನಪ್ಪಾ ಎಂದರೆ ಹೌದು.

ವಿಜಯ್ ದೇವರಕೊಂಡ ಹೇಳುವಂತೆ ತಾನು ಪ್ರೀತಿಯಲ್ಲಿ ಬಿದ್ದಿದ್ದೇನೆ. ಹಾಗಾಂತ ಅವರು ಯಾವುದೇ ಪ್ರೀತಿಯಲ್ಲಿ ಬಿದ್ದಿದ್ದಲ್ಲವಂತೆ. ತಾನು ಶೇರ್ ಮಾಡಿರುವ ವಿಡಿಯೋವೊಂದರಲ್ಲಿ ಮಾತನಾಡಿರುವ ಇಬ್ಬರು ಕ್ಯೂಟ್ ಹುಡುಗಿಯರಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರಂತೆ ವಿಜಯ್ ದೇವರಕೊಂಡ. ಮಕ್ಕಳ ತಂದೆ ಈ ವಿಡಿಯೋವನ್ನು ಶೇರ್ ಮಾಡಿ “@TheDeverakonda .. your bruises got the little girls concerned.. #DearComrade #VijayDevarakonda” ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಉತ್ತರಿಸಿರುವ ವಿಜಯ್ ದೇವರಕೊಂಡ “I Just fell in Love. Vijay Konda doesn’t need a doctor, but he would love to meet you two. Will you?” ಎಂದಿದ್ದಾರೆ. ವಿಜಯ್ ದೇವರಕೊಂಡನಿಗೆ ಯಾವುದೇ ವೈದ್ಯರ ಅಗತ್ಯವಿಲ್ಲ. ನಿಮ್ಮಿಬ್ಬರನ್ನು ಭೇಟಿಯಾಗುವ ಅವಕಾಶಸಿಕ್ಕಿದರೆ ಸಾಕು. ಎಂದಿದ್ದಾರೆ ವಿಜಯ್ ದೇವರಕೊಂಡ.

Tags