ಸುದ್ದಿಗಳು

ವಿಜಯ್ ಗೆ ರಾಜಕೀಯಕ್ಕೆ ಆದರದ ಸ್ವಾಗತ ಎಂದ ಕಮಲ್ ಹಾಸನ್ !!

ಉಲಗ್ನಾಯಗನ್ ನಟ ಕಮಲ್ ಹಾಸನ್ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿ ನಟರಾಗಿದ್ದಾರೆ. ಸಿನಿಮಾ ರಂಗದಿಂದ ಹೊರತಾಗಿ ರಾಜಕೀಯದಲ್ಲೂ ಸಕ್ರೀಯರಾಗಿರುವ ನಟ.  ಅವರ ರಾಜಕೀಯ ಬದ್ಧತೆಯ ಹೊರತಾಗಿ, ವಿಶ್ವರೂಪಂ 2 ರ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆ ಮತ್ತು ಬಿಗ್ ಬಾಸ್ ತಮಿಳ್ ಸೀಸನ್ 2 ಕೂಡಾ ಹೋಸ್ಟಿಂಗ್ ಮಾಡುತ್ತಿದ್ದಾರೆ. ಶನಿವಾರ (ಜೂನ್ 30), ಕಮಲ್ ಹಾಸನ್ ಹ್ಯಾಶ್ಟ್ಯಾಗ್ # ಆಸ್ಕ್ ಕಮಲ್ಹಾಸನ್ ಅಡಿಯಲ್ಲಿ ಪೋಸ್ಟ್ ಮಾಡಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ವಿಜಯ್ ಪಾಲಿಟಿಕ್ಸ್ ಗೆ ಬಂದರೆ ನೀವು ಅವರನ್ನು ಸ್ವಾಗತಿಸಿ ಬೆಂಬಲ ನೀಡುತ್ತೀರಾ? ಎಂದು ಟ್ವಿಟ್ಟರ್ ಬಳಕೆದಾರನೊಬ್ಬ ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಕಮಲ್,”ನನ್ನ ಎಲ್ಲ ಸಹೋದರರನ್ನು ರಾಜಕೀಯಕ್ಕೆ ಸ್ವಾಗತಿಸುತ್ತೇನೆ ವಿಜಯ್ ನನ್ನ ನೆಚ್ಚಿನ ಸಹೋದರ, ನನಗೆ ಮಾತ್ರವಲ್ಲ, ಇತರರಿಗಾಗಿ ನಾನು ಖಂಡಿತವಾಗಿ ಅವರನ್ನು ರಾಜಕೀಯದಲ್ಲಿ ಸ್ವಾಗತಿಸುತ್ತೇನೆ” ಎಂದು ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ ಕಮಲ್ ಹಾಸನ್. ಈಗ ನಟ ವಿಜಯ್ ಗೆ ಪಾಲಿಟಿಕ್ಸ್ ಗೆ ಕಮಲ್ ಹಾಸನ್ ಸ್ವಾಗತ ನೀಡಿದ್ದಾಯ್ತು. ಇನ್ನು ವಿಜಯ್ ಚಿತ್ರರಂಗದಿಂದ ದೂರ ಉಳಿದು ಅಥವಾ ಸಿನಿಮಾ ಮಾಡುತ್ತಲೇ ಪಾಲಿಟಿಕ್ಸ್ ಗೆ ಎಂಟ್ರಿ ಕೊಡುತ್ತಾರೋ ಎಂದು ಕಾದು ನೋಡಬೇಕಿದೆ..

 

Tags