ಸುದ್ದಿಗಳು

ವಿಜಯ್ ದೇವರಕೊಂಡ ವಿರುದ್ಧ ನೆಟ್ಟಿಗರು ಗರಂ..!!

ನಿಲ್ಲದ ಕಿರಿಕ್..

ಚಂದನವನದಲ್ಲಿ ಕಿರಿಕ್ ಪಾರ್ಟಿ ಮೂಲಕ ಮನಗೆದ್ದ ನಟಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ. ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರದಲ್ಲಿ ಮಿಂಚುತ್ತಿದ್ದಾರೆ. ಕನ್ನಡಕ್ಕಿಂತ ಹೆಚ್ಚು ಪರಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೀತಾ ಗೋವಿಂದ ಚಿತ್ರದ ನಂತರ ಹೆಚ್ಚಿನ ಜನಪ್ರಿಯತೆ ದೊರಕಿರುವುದು ಸುಳ್ಳಲ್ಲ.

ಅದರಲ್ಲೂ ವಿಜಯ್‌ ದೇವರಕೊಂಡ ಜೊತೆಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವುದು ಹೆಚ್ಚು. ನಟ ವಿಜಯ್ ದೇವರಕೊಂಡರೊಂದಿಗೆ ನಟಿಸಿದ್ದ ‘ಡಿಯರ್ ಕಾಮ್ರೇಡ್’ ಸಿನಿಮಾ ಬಿಡುಗಡೆಯಾಗಿದ್ದು ಬಾಕ್ಸ್‌ ಆಫಿಸ್‌ನಲ್ಲಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ನಟ ವಿಜಯ್ ದೇವರಕೊಂಡ, ರಶ್ಮಿಕಾ ಅವರ ಕಾಲಿನ ಮೇಲೆ ಕಾಲು ಹಾಕಿರುವ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ನಾನು ನಮ್ಮ ತಾತ ಹಾಗೂ ಅಜ್ಜಿಗೆ ಪ್ರತಿದಿನ ಅವರ ಕಾಲುಗಳನ್ನು ಒತ್ತುತ್ತಿದ್ದೆ. ಈಗ ನನ್ನನ್ನು ತಾತ ಅಂದ್ಯಲ್ಲಾ, ನೀನು ನನ್ನ ಕಾಲು ಒತ್ತಬೇಕು ಎಂದು ದೇವರಕೊಂಡ ಕ್ರೇಜಿ ಪ್ರತಿಕ್ರಿಯೆ ನೀಡಿದ್ದರು. ಇದರಿಂದ ಕೋಪಗೊಳ್ಳದ ರಶ್ಮಿಕಾ ನಿಧಾನವಾಗಿ ದೇವರಕೊಂಡ ಕಾಲನ್ನು ಕೆಳಕ್ಕೆ ಇಳಿಸಿದ್ದಾರೆ. ಸಾರ್ವಜನಿಕ ಸಂದರ್ಶನವೊಂದರಲ್ಲಿ ನಟಿಯೊಂದಿಗೆ ದೇವರಕೊಂಡ ರೀತಿ ಉತ್ತಮವಲ್ಲ ಜನ ಮಾತನಾಡಿಕೊಳ್ಳುತ್ತಿದ್ದಾರೆ.ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಕಾಜಲ್ ಈ ಟಾಲಿವುಡ್ ಹೀರೋಗೆ ತಂಗಿಯಾಗಲಿದ್ದಾರೆ!!

#dearcomradepromotion #vijaydevarakonda #rashmikamandanna #kirik #tollywoodfilms

Tags