ಸುದ್ದಿಗಳು

‘ಯದಾ ಯದಾ ಹಿ ಧರ್ಮಸ್ಯ’ ಸಿನಿಮಾ ಚಿತ್ರೀಕರಣ ಮುಕ್ತಾಯ

'ಯದಾ ಯದಾ ಹಿ ಧರ್ಮಸ್ಯ' ಸಿನಿಮಾ ಚಿತ್ರೀಕರಣ ಇದೀಗ ಮುಗಿದಿದ್ದು ತೆರೆಗೆ ಬರಲು ರೆಡಿಯಾಗಿದೆ.

ಬೆಂಗಳೂರು, ಜ.18:

ನಟ ವಿಜಯ್ ರಾಘವೇಂದ್ರ ನೆಗಟೀವ್ ಪಾತ್ರದಲ್ಲಿ ಕಾಣಿಸಿಕೊಂಡ ಸಿನಿಮಾವೇ ‘ಯದಾ ಯದಾ ಹಿ ಧರ್ಮಸ್ಯ’. ಟೈಟಲ್ ಮೂಲಕವೇ ಬಹಳಷ್ಟು ಕುತೂಹಲವನ್ನು ಮೂಡಿಸುತ್ತಿರುವ ಈ ಸಿನಿಮಾ ಇನ್ನೇನು ಚಿತ್ರೀಕರಣ ಮುಗಿಸಿದ್ದು, ತೆರೆಗೆ ಬರೋದಿಕ್ಕೆ ರೆಡಿಯಾಗಿದೆ ಈ ಸಿನಿಮಾ. ಇನ್ನು ಈ ಸಿನಿಮಾದ ಇನ್ನೊಂದು ವಿಶೇಷ ಅಂದರೆ ಸಾಯಿ ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಟೈಟಲ್ ನಲ್ಲಿಯೇ ಕುತೂಹಲ

ಟೈಟಲ್ ಮೂಲಕವೇ ಅದೆಷ್ಟೋ‌ ಸಿನಿಮಾಗಳು ಹಿಟ್ ಆಗಿವೆ. ಅದರಲ್ಲೂ ಧರ್ಮದ ಹೆಸರಿನ ಸಿನಿಮಾಗಳು, ಶ್ಲೋಕಗಳ ಟೈಟಲ್ ನ್ನಿಟ್ಟುಕೊಂಡ ಅದೆಷ್ಟೋ ಸಿನಿಮಾಗಳು ತೆರೆಗೆ ಬಂದಿದ್ದುಂಟು, ಇದೀಗ ಅದೇ ರೀತಿಯಲ್ಲಿ ಯದಾ ಯದಾ ಹಿ ಧರ್ಮಸ್ಯ ಸಿನಿಮಾ ಕೂಡ ಒಂದು. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಸೆನ್ಸಾರ್  ಮುಂದೆ ಹಾಜರಾಗಲು ರೆಡಿಯಾಗಿದೆ ಚಿತ್ರ ತಂಡ.

ನೆಗಟಿವ್ ಪಾತ್ರದಲ್ಲಿ ಚಿನ್ನಾರಿಮುತ್ತ

ಇನ್ನು ವಿಶೇಷ ಅಂದರೆ ಈ ಸಿನಿಮಾದಲ್ಲಿ ಸಾಯಿಕುಮಾರ್ ಘರ್ಜನೆ ಇದೆ. ಸಾಯಿಕುಮಾರ್ ಸಿನಿಮಾಗಳೇ ಹಾಗೇ, ದೇಶ, ಭಾಷೆ, ನೆಲಕ್ಕೆ ಅನುಗುಣವಾಗಿ ಬಂದಿರುತ್ತವೆ. ಇದೀಗ ಈ ಸಿನಿಮಾ ಟೈಟಲ್ ನೋಡಿದ್ರೂ ಇದೂ ದೇಶಕ್ಕೆ ತಕ್ಕುದಾದ ಸಿನಿಮಾವಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಈ ಸಿನಿಮಾದಲ್ಲಿ ನೆಗಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ವಿಶೇಷವೇ ಸರಿ.

ಸುಂದರ ತಾಣಗಳಲ್ಲಿ ಚಿತ್ರೀಕರಣ

ಇನ್ನು ಈ ಚಿತ್ರ 65 ದಿವಸಗಳಲ್ಲಿ ಚಿತ್ರೀಕರಣ ಮಾಡಿದ್ದು, ಬೆಂಗಳೂರು, ಮುರುಡೇಶ್ವರ, ಗೋಕರ್ಣ, ಸಕಲೇಶಪುರ, ಗೋವಾ, ಕೇರಳ ಸ್ಥಳಗಳಲ್ಲಿ ನಡೆದಿದೆಯಂತೆ. ಈ ಸಿನಿಮಾಗೆ ನಿರ್ದೇಶವನ್ನು ಮಾಡಿದ್ದಾರೆ ವಿರಾಜ್​. ಅಕ್ಷರ ಪ್ರೊಡಕ್ಷನ್ ಅಡಿಯಲ್ಲಿ ಇಂದೋರ್ ಮೂಲದ ಅಕ್ಷರ ತಿವಾರಿ ಚಿತ್ರ ನಿರ್ಮಾಣ ಮಾಡಿದ್ದಾರೆ.ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಮತ್ತು ಪರಾಗ್ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಸಿನಿಮಾ ನಾಯಕಿಯಾಗಿ  ಶ್ರಾವ್ಯ ನಟಿಸಿದ್ರೆ, ಸಾಧು ಕೋಕಿಲ, ಉಮೇಶ್, ಗಡ್ಡಪ್ಪ, ಪ್ರಥಮ್, ಪದ್ಮಾ ವಾಸಂತಿ ಸೇರಿದಂತೆ ಹಲವಾರು ಮಂದಿಯ ತಾರಾ ಬಳಗವಿದೆ‌.

#sandalwood #kannadamovies #aksharathivari #vishalthivary #balkaninews

Tags