ಸುದ್ದಿಗಳು

ಹರೆಯದ ವಯಸ್ಸಿನಲ್ಲಿಯೇ ಮುದುಕರಾದ ನಟರು…!!!

ಸಾಮಾನ್ಯವಾಗಿ ಯಾರೇ ಆದರೂ ಸಹ ವಯಸ್ಸಾದರೆ ಯಂಗ್ ಆಗಲು ಕಾಣಲು ಬಯಸುತ್ತಾರೆ. ಆದರೆ ಸಿನಿಮಾ ನಟರು ಯಂಗ್ ವಯಸ್ಸಿನಲ್ಲಿಯೇ ಮುದುಕರಾಗಿ ನಟಿಸಿ ಅಚ್ಚರಿ ಮೂಡಿಸುತ್ತಿದ್ದಾರೆ.

ಹೌದು, ಕಳೆದ ಶುಕ್ರವಾರ ತೆರೆ ಕಂಡ ‘ಭರಾಟೆ’ ಚಿತ್ರದಲ್ಲಿ ನಟ ಶ್ರೀಮುರುಳಿ ಯಂಗ್ ಮತ್ತು ಮುದುಕನ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ.  ಈ ಮೂಲಕ 30 ಪ್ಲಸ್ ವಯಸ್ಸಿನ ಅವರು 70 ವರ್ಷದ ಮುದುಕನ ಪಾತ್ರವಾದ ರತ್ನಾಕರ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.

ಇವರಷ್ಟೇ ಅಲ್ಲದೇ ನಟ ವಿಜಯ್ ರಾಘವೇಂದ್ರ ಸಹ ‘ಮಾಲ್ಗುಡಿ ಡೇಸ್’ ಚಿತ್ರದಲ್ಲಿ ಮುದುಕನ ಪಾತ್ರ ಮಾಡುತ್ತಿದ್ದು, ಇತ್ತಿಚೆಗಷ್ಟೇ ಚಿತ್ರದ ಅವರ ಲುಕ್ ಬಿಡುಗಡೆಯಾಗಿದೆ. ಅವರ ಮುಖ, ಬಿಳಿ ಕೂದಲಿನ ಶೈಲಿ ಕೂಡಾ ಭಿನ್ನವಾಗಿದೆ. ಹೀಗೆ ಈ  ಮುಖದ ಹಿಂದೊಂದು ಕಥೆ ಅಡಗಿದಂತಿದೆ.

ಇವರುಗಳು ಮಾತ್ರವಲ್ಲದೇ ನಾಯಕ ಖಳನಟ ಹೀಗೆ ನಾನಾ ರೀತಿಯ ಪಾತ್ರಗಳ ಮೂಲಕ ಸ್ಯಾಂಡಲ್ವುಡ್ ನಲ್ಲಿ ಭರವಸೆ ಮೂಡಿಸಿರುವ ವಸಿಷ್ಠ ಸಿಂಹ ‘ಕಾಲಚಕ್ರ’ ಸಿನಿಮಾದಲ್ಲಿ ಎರಡು ಬಗೆಯ ಪಾತ್ರ ಮಾಡಿದ್ದಾರೆ. ಒಂದು ಮೂವತ್ತರ ವಯಸ್ಸಿನ ಹುಡುಗನಾದರೆ ಮತ್ತೊಂದು ಹಿರಿಯ ನಾಗರಿಕನ ಪಾತ್ರ ಮಾಡಿದ್ದಾರೆ. ಹಾಗೆಯೇ ನಟ ‘ಸಂಚಾರಿ’ ವಿಜಯ್ ನಟನೆಯ ‘ಪಿರಂಗಿಪುರ’ ಸಿನಿಮಾದಲ್ಲೂ 80ರ ವಯಸ್ಸಿನ ಮುದುಕನ ಪಾತ್ರ ಮಾಡಲಿದ್ದಾರೆ.

ಜೀ ಕುಟುಂಬ ಅವಾರ್ಡ್ಸ್ 2019ರ ವಿಜೇತರ ಪಟ್ಟಿ ಇಲ್ಲಿದೆ ನೋಡಿ

#VijayRaghavendra #SriMuruli  #VasishtaSimha #SanchaariVijay #GrandfatherRole

Tags