ಸುದ್ದಿಗಳು

ಪ್ರೇಮಿಗಳ ದಿನಾಚರಣೆಯಂದು ಸಪ್ತಪದಿ ತುಳಿದ ‘ಅಗ್ನಿಸಾಕ್ಷಿ’ ಖ್ಯಾತಿಯ ವಿಜಯ್ ಸೂರ್ಯ

ಬೆಂಗಳೂರು,ಫೆ.14:

‘ಅಗ್ನಿಸಾಕ್ಷಿ’ ಎಂಬ ಧಾರಾವಾಹಿಯಿಂದಲೇ ಎಲ್ಲರ ಮನೆ ಮಾತಾಗಿರುವ  ಗುಳಿ ಕೆನ್ನೆ ಸುಂದರ ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ..  ಎಲ್ಲಾ ಹುಡುಗಿಯರ ದಿಲ್ ಕದ್ದ ಈ ಗುಳಿಕೆನ್ನೆ ಸುಂದರನಿಗೆ ಇಂದು ಡಬಲ್ ಧಮಾಕಾ.. ಒಂದು ಪ್ರೇಮಿಗಳ ದಿನಾಚರಣೆ.. ಇನ್ನೊಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ದಿನ..

ಸಾಫ್ಟ್ ವೇರ್ ಉದ್ಯೋಗಿ ಚೈತ್ರಾಳನ್ನು ವರಿಸಿದ ವಿಜಯ್

ಹೌದು, ಅಗ್ನಿಸಾಕ್ಷಿ ಸಿದ್ದಾರ್ಥ್ ಅಕಾ ವಿಜಯ್ ಸೂರ್ಯ ಇಂದು 23 ವರ್ಷದ ಸಾಫ್ಟ್ ವೇರ್ ಉದ್ಯೋಗಿ ಚೈತ್ರಾ ಅವರನ್ನು ವರಿಸಿದ್ದಾರೆ..!!  ಚೈತ್ರಾ ಅವರು ವಿಜಯ್ ರವರ ದೂರದ ಸಂಬಂಧಿಯಾಗಿದ್ದು ವಿಜಯ್ ಅವರ ತಾಯಿಯೇ ಚೈತ್ರ ಅವರ ಕುಟುಂಬದ ಬಳಿ ಮದುವೆ ಬಗ್ಗೆ ಪ್ರಸ್ತಾಪಿಸಿದ್ದರಂತೆ. ಇನ್ನು ಚೈತ್ರಾ ಕೂಡ ಮುದ್ದಾಗಿದ್ದು, ಇವರೂ ಕೂಡ ಗುಳಿ ಕೆನ್ನೆ ಸುಂದರಿ..

Image may contain: 2 people, people smiling, selfie and closeup

 ವಧು- ವರರು ಮಿಂಚಿಂಗ್

ಇನ್ನು ವಿಜಯ್ ಗೆ ಅರಿಶಿಣ ಶಾಸ್ತ್ರ ಕೂಡ ಮಾಡಲಾಗಿತ್ತು.. ಸ್ನೇಹಿತರೊಂದಿಗೆ ಕೆಲವು ಫೋಟೋಗಳು, ಪೇಟಾ ಹಾಗೂ ಪಂಚೆಯುಟ್ಟ ವಿಜಯ್ ಕಾಶಿಯಾತ್ರೆಗೆ ಹೋಗಲು ರೆಡಿಯಾಗಿರುವುದು ಇವೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

ವಧು- ವರರು ಗೋಲ್ಡನ್ ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಮಿಂಚುತ್ತಿದ್ದಾರೆ. ಇನ್ನು ಇವರಿಬ್ಬರ ಜೋಡಿಗೆ ಆಶೀರ್ವಾದಿಸಲು ಅವರ ಕುಟುಂಬಸ್ಥರು ಹಾಗೂ ಆಪ್ತರು ಸಾಕ್ಷಿಯಾಗಿದ್ದಾರೆ..

“ಲಕ್ಷ್ಮೀಸ್ ಎನ್ ಟಿಆರ್” ಮೂಲಕ್ ಬಾಂಬ್ ಸಿಡಿಸುತ್ತೇನೆಂದ ನಿರ್ದೇಶಕ

#balkaninews #sandalwood #vijaysuriya #vijaysuriyamarriage

Tags