ಸುದ್ದಿಗಳು

ನಾಲ್ಕು ಭಾಷೆಯಲ್ಲಿ ಬರಲಿದ್ದಾನೆ ‘ಹೀರೋ’!!

ಹೈದರಾಬಾದ್,ಮಾ.13 : ಟಾಲಿವುಡ್ ನ ಸೆನ್ಸೇಷನ್ ಸ್ಟಾರ್ , ವಿಜಯ್ ದೇವರಾಕೊಂಡ  ಈಗ  ಹಲವು ಚಿತ್ರಗಳಲ್ಲಿ ಬ್ಯುಸಿಯಗಿದ್ದಾರೆ.  ಪ್ರಸ್ತುತ ಅವರು ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ನಿರತರಾಗಿದ್ದಾರೆ, ಅದು ಕೊನೆಯ ಹಂತದ ಶೂಟಿಂಗ್ ನಲ್ಲಿ ನಿರತರಾಗಿದ್ದು, ಮತ್ತು ಅದರ ನಂತರ ಕ್ರಾಂತಿ ಮಾಧವರೊಂದಿಗೆ ಚಿತ್ರದಲ್ಲಿ ಭಾಗವಹಿಸಲಿದ್ದಾರೆ. ಬಿಡುವಿಲ್ಲದಿದ್ದರೂ, ವಿಜಯ್ ಈಗ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ..

Related image

ಮೈಥ್ರಿ ಮೂವಿ ಮೇಕರ್ಸ್ ಬ್ಯಾನರ್

‘ಡಿಯರ್ ಕಾಮ್ರೇಡ್’ ನಿರ್ಮಾಪಕರು, ಮೈಥ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ಹೊಸ ಚಿತ್ರವು ತಯಾರಾಗಲಿದೆ… ಈ ಚಿತ್ರವನ್ನು ಆನಂದ್ ಅಣ್ಣಾಮಲೈ ನಿರ್ದೇಶಿಸಲಿದ್ದಾರೆ. ಅವರು ವಿಮರ್ಶಾತ್ಮಕವಾಗಿ  ಹೆಸರು ಮಾಡಿದ ತಮಿಳು ಸೂಪರ್-ಹಿಟ್ ‘ಕಾಕ ಮುಟ್ಟೈ’ಗಾಗಿ ಸಂಭಾಷಣೆ ಬರೆದಿದ್ದಾರೆ.

ಚಿತ್ರಕ್ಕೆಹೀರೋಎಂಬ ಶೀರ್ಷಿಕೆ

ಚಿತ್ರಕ್ಕೆ ‘ಹೀರೋ’ ಎಂಬ ಶೀರ್ಷಿಕೆ ಇಟ್ಟಿದ್ದು ದಕ್ಷಿಣ ಭಾರತದ ಎಲ್ಲಾ ನಾಲ್ಕು ಭಾಷೆಗಳಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.. ದಕ್ಷಿಣದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ವಿಜಯ್ ದೇವರಾಕೊಂಡ ಅವರು ಹೊರಟಿದ್ದಾರೆ.’ಹೀರೋ’ ಶೂಟಿಂಗ್ ಏಪ್ರಿಲ್ 22 ರಂದು ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಪ್ರಾರಂಭವಾಗುತ್ತದೆ.

ಉಪೇಂದ್ರ ಸಿನಿಮಾ ಜರ್ನಿಗೆ ಯಶಸ್ವಿ 30 ವರ್ಷಗಳು

;

Tags

Related Articles