ಸುದ್ದಿಗಳು

ಸುಮಲತಾ ಯಾಕೆ ಗೆಲ್ಲಬೇಕು, ಇದರಿಂದ ಮಂಡ್ಯ ಜನಕ್ಕೆ ಏನು ಉಪಯೋಗ ಎಂಬುದರ ಬಗ್ಗೆ ವಿವರಣೆ ನೀಡಿದ ದರ್ಶನ್ ಪತ್ನಿ

ಬೆಂಗಳೂರು, ಏ.20:

ಮಂಡ್ಯ ಸದ್ಯ ಜಿದ್ದಾಜಿದ್ದಿನ ಕ್ಷೇತ್ರ ಎನ್ನುವುದು ಗೊತ್ತಿರುವ ವಿಚಾರ. ಚುನಾವಣೆ ಮುಗಿದಿದ್ದರೂ ಫಲಿತಾಂಶಕ್ಕಾಗಿ ಇಡೀ ರಾಜ್ಯವೇ ಕಾದಿದೆ. ಆ ಕಡೆ ಸಿಎಂ ತಮ್ಮ ಮಗನನ್ನು ಗೆಲ್ಲಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಇತ್ತ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಸುಮಲತ ಹೋರಾಟ ನಡೆಸಿದ್ದಾರೆ. ಇನ್ನೇನು ಫಲಿತಾಂಶ ಹೊರ ಬೀಳಬೇಕು. ಆದರೆ ಇದೀಗ ಸುಮಲತ ಯಾಕೆ ಗೆಲ್ಲಬೇಕು ಎನ್ನುವುದನ್ನು ದರ್ಶನ್ ಪತ್ನಿ ಹೇಳಿದ್ದಾರೆ.

ಮಂಡ್ಯ ಜನಕ್ಕೆ ಸುಮಲತ ಯಾಕೆ ಗೆಲ್ಲಬೇಕು ಎಂದ ವಿಜಯಲಕ್ಷ್ಮಿ..?

ಹೌದು, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಿ ಅಂತಾ ಮತದಾನದ ದಿನ ಪೋಸ್ಟ್ ಮಾಡಿದ್ದಾರೆ ವಿಜಯಲಕ್ಷ್ಮಿ. ಇನ್ನೂ ಇವರಿಗೆ ಯಾಕೆ ಮತ ಹಾಕಬೇಕು ಅನ್ನೋದನ್ನು ಪೋಸ್ಟ್ ಮಾಡಿದ್ದಾರೆ. ಸುಮಲತ ಗೆದ್ದರೆ ಏನು ಕೆಲಸ ಮಾಡುತ್ತಾರೆ ಎಂಬುದನ್ನು ಹೇಳಿದ್ದಾರೆ.

೧. ದೇಶದ ಇತಿಹಾಸದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯನ್ನು ಪಕ್ಷೇತರವಾಗಿ ಗೆಲ್ಲಿಸಿದ ಕೀರ್ತಿ ಮಂಡ್ಯಕ್ಕೆ ಬರುತ್ತದೆ.

೨. ರಾಜ್ಯದಲ್ಲಿ ಆಡಳಿತ ರೂಡ ಮುಖ್ಯಮಂತ್ರಿ, ಜಿಲ್ಲೆಯ 8 ಶಾಸಕರನ್ನು ಹೊಂದಿದ್ದರೂ ಸ್ವತಃ ಸಿಎಂ ಪುತ್ರ ಅಭ್ಯರ್ಥಿಯಾಗಿದ್ದರೂ ಹಣದ ಆಸೆಗೆ ಮಂಡ್ಯದ ಜನ ಮರುಳಾಗಲಿಲ್ಲವೆಂಬ ಕೀರ್ತಿ ಬರುತ್ತದೆ.

೩. ಕರ್ನಾಟಕ ಇತಿಹಾಸದಲ್ಲಿ ಪ್ರಪ್ರಥಮ ಪಕ್ಷೇತರ ಮಹಿಳಾ ಸಂಸದೆಯನ್ನು ಗೆಲ್ಲಿಸಿದ ಕೀರ್ತಿ ನಮ್ಮ ಮಂಡ್ಯಗೆ ಬರುತ್ತದೆ ಎಂದು ಹೇಳಿದ್ದಾರೆ.

‘ರಾಧಾ ರಮಣ’ ಧಾರಾವಾಹಿಯಿಂದ ಹೊರನಡೆದ ರಾಧಾ ಮಿಸ್

#vijayalakshmidarshan #vijayalakshmidarshantwitter #darshaninstagram #darshanwife #darshanandsumalatha

Tags