ಸುದ್ದಿಗಳು

ಅಭಿಮಾನಿಗಳೇ ಸಹಾಯ ಮಾಡಿ ಎಂದ ವಿಜಯಲಕ್ಷ್ಮಿ

ಬೆಂಗಳೂರು, ಮಾ.21:

‘ನಾಗಮಂಡಲ’ ಸಿನಿಮಾದ ಮೂಲಕ ಸಿನಿ ಪ್ರಿಯರ ಮನ ಗೆದ್ದ ಮುದ್ದು ಮುಖದ ಬೆಡಗಿ ವಿಜಯಲಕ್ಷ್ಮಿ ಅನಾರೋಗ್ಯದ ನಿಮಿತ್ತ ಆಸ್ಪತ್ರೆ‌ ಸೇರಿರುವ ವಿಚಾರ ನಮಗೆಲ್ಲಾ ತಿಳಿದಿದೆ. ಬಹು ಮುಖ್ಯವಾದ ವಿಚಾರವೇನೆಂದರೆ ಈ ಸಂದರ್ಭದಲ್ಲಿ ಅವರು  ಆರ್ಥಿಕ ಸಹಾಯ ಮಾಡಿ ಎಂದು ಮನವಿ ಮಾಡಿರುವ ಮತ್ತೊಂದು ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ.

ಸುಮಾರು ಸಮಯದಿಂದ  ಅನಾರೋಗ್ಯದಿಂದ ಬಳಲುತ್ತಿರುವ ನಟಿ ವಿಜಯಲಕ್ಷ್ಮಿಗೆ ಇದೀಗ ಮಗದೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಮತ್ತು ಅದಕ್ಕೆ ಬೇಕಾದಂತಹ ಹಣಕ್ಕಾಗಿ ಅವರು ಈ ಭಾರಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.  ಶಸ್ತ್ರಚಿಕಿತ್ಸೆಗಾಗಿ ದುಡ್ಡು ಬೇಕು ಎಂದು ಮನವಿ ಮಾಡಿ‌ದಂತಹ  ವಿಡಿಯೋ ಬಿಡುಗಡೆ ಮಾಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ಮೀಡಿಯಾದವರ ಸಹಾಯದಿಂದ ನಾನು ಮೂರು ನಾಲ್ಕು  ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಆದರೆ, ಈಗ ನನಗೆ ತುರ್ತು ಆಪರೇಶನ್ ಮಾಡಬೇಕಿದೆ. ಇದು ತುಂಬಾ ಕ್ರಿಟಿಕಲ್ ಆಗಿದ್ದು ಸರ್ಜರಿಗೆ ಸುಮಾರು 2 ಲಕ್ಷ ರೂಪಾಯಿ ಖರ್ಚಾಗುತ್ತದೆ. ತುಂಬಾ ಬೇಸರದ ಸಂಗತಿಯೆಂದರೆ ಪ್ರತಿ ಬಾರಿ ನಾನು ವಿಡಿಯೋ ಮಾಡಿ ರಿಲೀಸ್ ಮಾಡುತ್ತಿರುವುದಕ್ಕೆ ಗೇಲಿ ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್ ಅವರಿಂದ 1 ಲಕ್ಷ ರೂಪಾಯಿ ಬಿಟ್ಟರೆ ಬೇರೆ ಚಿತ್ರರಂಗದ ಬೇರೆ ಯಾರ ಬಳಿಯಿಂದಲೂ ನನಗೆ ಸಹಾಯ ದೊರೆತಿಲ್ಲ. ಅದಕ್ಕೆ ಇನ್ನು ಮುಂದೆ ನಾನು ಚಿತ್ರರಂಗದವರ ಬಳಿ ಸಹಾಯ ಬೇಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ.‌ ಆದರೆ ಏನು ಮಾಡುವುದು? ದಿನದಿಂದ ದಿನಕ್ಕೆ ನನ್ನ ಪರಿಸ್ಥಿತಿ ಹದಗೆಡುತ್ತಿದೆ. ನಮ್ಮ ನೆಚ್ಚಿನ ನಟಿ ನೋವು ಪಡಬಾರದು ಎಂದು ಹಾರೈಸುವ ಅಭಿಮಾನಿಗಳಿದ್ದಾರೆ. ದಯಮಾಡಿ ಹಣ ಸಹಾಯ ಮಾಡಿ. ನಿಜ ಹೇಳಬೇಕೆಂದರೆ ನನಗೂ ವಿಡಿಯೋ ಮಾಡಿ ಮಾಡಿ ಸಾಕಾಗಿದೆ. ಆದರೆ ವಿಡಿಯೋ ಮಾಡದಿದ್ದರೆ ನನ್ನ ಪರಿಸ್ಥಿತಿ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಮತ್ತು ಸಹಾಯವೂ ಸಿಗುತ್ತಿರಲಿಲ್ಲ.

ನನ್ನ ಅಭಿಮಾನಿಗಳಾದ ನೀವೆಲ್ಲಾ ನನ್ನೊಂದಿಗೆ ಇರುತ್ತೀರ ಎಂಬ ಒಂದೇ ಒಂದು ನಂಬಿಕೆ ನನಗಿದೆ. ಅದರ ಹೊರತಾಗಿ ನನಗೆ ಬೇರೆ ಯಾರ ಬೆಂಬಲವೂ ಇಲ್ಲ. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಿ. ಆಪರೇಶನ್ ಆಗಿ ಗುಣವಾದ ಕೂಡಲೇ ತಪ್ಪದೇ  ನಿಮ್ಮನ್ನೆಲ್ಲಾ ಬಂದು ಭೇಟಿ ಮಾಡುತ್ತೇನೆ. ಇದು ನನ್ನ ಬೇಡಿಕೆ ಎಂದು ವಿಡಿಯೋ ದಲ್ಲಿದೆ ಹೇಳಿರುವುದು ವರದಿಯಾಗಿದೆ.

ಅಂದು ಜನಪ್ರಿಯ ನಟ, ಇಂದು ಸೆಕ್ಯೂರಿಟಿ ಗಾರ್ಡ್..!

#balkaninews #vijayalakshmi #vijayalakshmikannadaactor #sandalwood #kannadamovies

Tags