ಸುದ್ದಿಗಳು

ಥಿಯೇಟರ್ ಗೆ ಬರಲು ‘ವಿಜಯ ರಥ’ ಸಿದ್ದ

ಸ್ಯಾಂಡಲ್ ವುಡ್ ಗೆ ಮತ್ತೊಂದು ಹೊಸಬರ ಸಿನಿಮಾ

ಬೆಂಗಳೂರು.ಫೆ.16

ಸಿನಿಮಾರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಬರುತ್ತಲೇ ಇದ್ದಾರೆ. ಹಾಗೆಯೇ ಇಲ್ಲೊಂದು ಪ್ರತಿಭಾವಂತ ಹೊಸಬರ ತಂಡವೊಂದು ‘ವಿಜಯ ರಥ’ ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಸದ್ಯದಲ್ಲಿಯೇ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗಿದೆ.

ಸದ್ಯದಲ್ಲಿಯೇ ತೆರೆಗೆ

ಈಗಾಗಲೇ 8 ವರ್ಷಗಳಿಂದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತ, ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದ ವಸಂತ್ ಈಗ ‘ವಿಜಯರಥ’ ಚಿತ್ರದ ನಾಯಕನಾಗುವ ಅವಕಾಶ ಪಡೆದಿದ್ದಾರೆ. ಚಿತ್ರಕ್ಕೆ ರಮೇಶ್ ಮಧುಗಿರಿ ಬಂಡವಾಳ ಹೂಡಿದ್ದರೆ, ಅಜಯ ಸೂರ್ಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಬಗ್ಗೆ

ಜಾನಪದ ಹಾಗೂ ಪೌರಾಣಿಕ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರದಲ್ಲಿ ಅನೇಕ ತಿರುವುಗಳಿವೆ. ಇಲ್ಲಿ ನಾಯಕ ವಸಂತ್ ಕಲ್ಯಾಣ್ ಹಳ್ಳಿ ಹುಡುಗನಾಗಿ ಯಾವುದೇ ತೊಂದರೆ ಬಂದರೂ ಮುಂದೆ ನಿಲ್ಲುವ, ಒಂದು ಹಂತದಲ್ಲಿ ತನಗೆ ಸಮಸ್ಯೆ ಎದುರಾದಾಗ ಅವನ ಬದುಕಿನಲ್ಲಿ ಏನಾಗುತ್ತದೆ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಅರ್ಚನಾ ಜೋಯಿಸ್ ಕಾಣಿಸಿಕೊಂಡಿದ್ದಾರೆ.

ಕತೆಯಲ್ಲಿ ನಾಯಕ ವಧುವನ್ನು ಅಪಹರಿಸಿ ಪ್ರಯಾಣ ಮಾಡುವಾಗ ಆಕೆಗೆ ತನ್ನ ಹಿಂದಿನ ಘಟನೆಗಳನ್ನು ಹೇಳುತ್ತಾನೆ. ಹೀಗೆ ಕಥೆ ಅನೇಕ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ. ಚಿತ್ರದಲ್ಲಿ ರಾಜೇಶ್ ನವರಂಗ, ಅರ್ಚನಾ(ಕೆಜಿಎಫ್), ನಿಹಾರಿಕಾ, ಹನುಮಂತೇಗೌಡ್ರು ಸೇರಿದಂತೆ ಅನೇಕರು ತಾರಾಬಳಗವಿದೆ. ಚಿತ್ರಕ್ಕೆ ಲೋಕಿ ಛಾಯಾಗ್ರಹಣ, ಪ್ರೇಮ್ ಕುಮಾರ್ ಸಂಗೀತ, ಗೋಪಿ ಸಂಭಾಷಣೆ, ರವಿಚಂದ್ರ ಸಂಕಲನವಿದೆ.

ಈಗಾಗಲೇ ‘ವಿಜಯರಥ’ದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು, ಸೆನ್ಸಾರ್ ಮಂಡಳಿಯಿಂದಲೂ ಉತ್ತಮ ಪ್ರಶಂಸೆ ಪಡೆಯುವ ಮೂಲಕ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ.

“ವೀರ ಯೋಧರ ಬಲಿದಾನಕ್ಕೆ .. ಅವರ ತ್ಯಾಗಕ್ಕೆ ನನ್ನ ಭಾವಪೂರ್ಣ ನಮನಗಳು”: ಯಶ್!!

#vijayaratha, #kannadasuddigalu, #balkaninews #filmnews

Tags

Related Articles