ಸುದ್ದಿಗಳು

ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲು ಈ ನಟಿ ಎಷ್ಟು ಸಂಭಾವನೆ ಕೇಳಿದಳು ಗೊತ್ತಾ?

ಆಂಧ್ರ,ಆ.17: ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ,​ ಪ್ರಣಯ ಚಿತ್ರ ‘ಗೀತ ಗೊಂವಿಂದಂ’ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡು ಮುನ್ನುಗ್ಗುತ್ತಿದೆ..

ಕನ್ನಡದ ಕ್ರಶ್ ಟಾಲಿವುಡ್ ಗೂ ಪಾದಾರ್ಪಣೆ ಮಾಡಿದ್ದು ಟಾಲಿವುಡ್ ನಲ್ಲೂ ಭದ್ರ ನೆಲೆ ಊರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ‘ಅರ್ಜುನ್​ ರೆಡ್ಡಿ’ ನಂತರ ‘ಗೀತ ಗೋವಿಂದಂ’ ಚಿತ್ರದಲ್ಲಿ ದೇವರಕೊಂಡ ನಟಿಸಿದ್ದು, ಈ ಚಿತ್ರವು ಕೂಡ ಸೂಪರ್​ ಹಿಟ್​ ಆಗುವ ಮುನ್ಸೂಚನೆ ಸಿಕ್ಕಿದೆ. ಎಲ್ಲರಿಂದಲೂ ಮೆಚ್ಚುಗೆ ಪಡೆಯುತ್ತಿರುವ ‘ಗೀತ ಗೋವಿಂದಂ’ ಚಿತ್ರದ ಕುರಿತು ಕೆಲ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ.

ನಟಿ ಮಣಿಯರ ಸಂಭಾವನೆ

ಈ ಚಿತ್ರಕ್ಕೆ ರಶ್ಮಿಕಾ ಆಯ್ಕೆ ಆಗುವ ಮೊದಲು ಅದೆಷ್ಟು ಮದಿ ನಟಿಯರಿಗೆ ಆಫರ್ ನೀಡಲಾಗಿತ್ತು ಗೊತ್ತಾ? ಮೊದಲು ಈ ಚಿತ್ರಕ್ಕೆ ನಟಿ ಲಾವಣ್ಯ ತ್ರಿಪಾಟಿ ಅವರನ್ನು ಹಾಕಿಕೊಳ್ಳಲು ಆಲೋಚನೆ ಮಾಡಲಾಗಿತ್ತಂತೆ. ಆದರೆ, ಇತ್ತೀಚಿನ ಅವರ ಚಿತ್ರಗಳೆಲ್ಲ ಫ್ಲಾಪ್​ ಆಗಿದ್ದರಿಂದ ಅವರನ್ನು ಕೈ ಬಿಡಲಾಯಿತು. ಬಳಿಕ ನಟಿ ರಾಶಿ ಖನ್ನಾಗೆ ಆಫರ್ ಮಾಡಲಾಯಿತು. ಸ್ಕ್ರಿಪ್ಟ್​ ಕೇಳಿ ನಟಿಸಲು ಒಪ್ಪಿಕೊಂಡಿದ್ದ ರಾಶಿ, ವಿಜಯ್ ಜತೆ ನಟಿಸಲು ಒಂದು ಕೋಟಿ ಸಂಭಾವನೆಗೆ ಬೇಡಿಕೆಯಿಟ್ಟರಂತೆ. ಇಷ್ಟು ಹಣ ಕೊಡಲು ಚಿತ್ರತಂಡ ಒಪ್ಪದ ಕಾರಣವಾಗಿ ಕೊನೆಗೆ ಸಿಕ್ಕಿದ್ದು ಬೇರಾರೂ ಅಲ್ಲ ಕನ್ನಡ ಕ್ರಶ್ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಲಾಯಿತಂತೆ.

ಇನ್ನೊಂದು ಮೂಲದ ಪ್ರಕಾರ ‘ಗೀತ ಗೋವಿಂದ’ ಚಿತ್ರವನ್ನು ಟಾಪ್ ಹೀರೋಯಿನ್ ಸೇರಿದಂತೆ 25 ನಟಿಯರು ನಿರಾಕರಿಸಿದ್ದಾರಂತೆ. ಈಗ ಈ ಎಲ್ಲಾ ನಟಿಯರಿಗೂ ಒಳಗೊಳಗೇ ಯಾಕೆ ಈ ಚಿತ್ರವನ್ನು ನಿರಾಕರಿಸಿದೆ ಅಂತ ಅನ್ನಿಸೋಕೆ ಶುರುವಾಗಿರಬಹುದು …….

 

Tags