ಸುದ್ದಿಗಳು

“ನನ್ನ ಮೊದಲ 100 ಕೋಟಿಯನ್ನು ನಾನು ಈಕೆಗೆ ಅರ್ಪಿಸುತ್ತೇನೆ: ವಿಜಯ್ ದೇವರಕೊಂಡ

‘ತೆಲುಗು, ತಮಿಳು, ಮಲೆಯಾಳಂ ಹಾಗೂ ಕನ್ನಡ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ

ಯಶಸ್ಸಿನ ಖುಷಿಯಲ್ಲಿರುವ ವಿಜಯ್ ದೇವರಕೊಂಡ ಅವರು ತಮ್ಮ ಸಂತಸದ ಸುದ್ದಿಯನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಹೈದರಾಬಾದ್,ಸೆ.03:  ಚಂದನವನದ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ವಿಜಯ್ ದೇವರಕೊಂಡ ಅಭಿನಯದ `ಗೀತಾ ಗೋವಿಂದಂ’ ಸಿನಿಮಾ ಎಲ್ಲೆಡೆ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ..ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಹಳ ಸದ್ದು ಮಾಡಿತ್ತು . ಅಷ್ಟೆ ಅಲ್ಲದೇ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ನಡುವಿನ ಕೆಮೆಸ್ಟ್ರಿ ಬಗ್ಗೆ ಭಾರೀ ಚರ್ಚೆಯಾಗಿತ್ತು. ಚಿತ್ರ ಬಿಡುಗಡೆಯಾಗದ ಸುಮಾರು 12 ದಿನಗಳಲ್ಲಿ 100 ಕೋಟಿ ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಯಶಸ್ಸಿನ ಖುಷಿ

ಈ ಯಶಸ್ಸಿನ ಖುಷಿಯಲ್ಲಿರುವ ವಿಜಯ್ ದೇವರಕೊಂಡ ಅವರು ತಮ್ಮ ಈ ಸಂತಸದ ಸುದ್ದಿಯನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಹೌದು, ಈ ಯಶಸ್ಸನ್ನು ಸಿನಿಮಾದಲ್ಲಿ ತಮಗೆ ಸಾಥ್ ನೀಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಿದ್ದಾರೆ.

ನನ್ನ ಲವ್ಲಿ ಪಾರ್ಟ್ನರ್ ರಶ್ಮಿಕಾ

“ನನ್ನ ಮೊದಲ 100 ಕೋಟಿಯನ್ನು ನನ್ನ ಕೋಚಿಂಗ್ ಸಿಬ್ಬಂದಿ, ಗೀತಾ ಆರ್ಟ್ಸ್, ನನ್ನ ಕ್ಯಾಪ್ಟನ್ ಬುಜ್ಜಿ, ನನ್ನ ಲವ್ಲಿ ಪಾರ್ಟ್ನರ್ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಜೊತೆಗೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಕನ್ನಡ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ವಿಜಯ್ ದೇವರಕೊಂಡ ಅವರು ಟ್ವೀಟ್ ಮಾಡಿದ್ದಾರೆ.

ನಟಿ ರಶ್ಮಿಕಾಗೆ ಇದು ತೆಲುಗಿನಲ್ಲಿ ಎರಡನೇ ಚಿತ್ರ. ಈ ಮೊದಲು ‘ಚಲೋ’ ಚಿತ್ರದಲ್ಲಿ ನಟಿಸಿದ್ದು, ಅದು ಕೂಡ ಯಶಸ್ಸು ಪಡೆದಿತ್ತು.ಇನ್ನು ರಶ್ಮಿಕ ಪುನಃ ವಿಜಯ್ ಜೊತೆ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

Tags